Bantwala : ಶಾಲಾ ವಾರ್ಷಿಕೋತ್ಸವ ನೋಡಲು ಬಂದ ಯುವತಿಯ ಮೇಲೆ ಅತ್ಯಾಚಾರ – ಆರೋಪಿ ಬಂಧನ !!

Bantwala : ಶಾಲಾ ವಾರ್ಷಿಕೋತ್ಸವಕ್ಕೆ ಬಂದ ಯುವತಿಯನ್ನು ಶಾಲೆಯ ಕೊಠಡಿಯೊಂದರಲ್ಲಿ ಕೂಡಿಹಾಕಿ ಯುವಕನೋರ್ವ ಅತ್ಯಾಚಾರ ಮಾಡಿದಂತಹ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

ಹೌದು, ಬಟ್ವಾಳ(Bantwala)  ತಾಲ್ಲೂಕಿನ ನಾವೂರಿನಲ್ಲಿ ಡಿ.14ರಂದು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನೋಡಲು ಯುವತಿ ಓರ್ವಳು ಮನೆಯವರ ಜೊತೆ ತೆರಳಿದ್ದಳು. ಈ ವೇಳೆ ಯುವತಿಯನ್ನು ಆರೋಪಿ ಬಲವಂತವಾಗಿ ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾಗಿ ನೊಂದ ಯುವತಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ. ನಾವೂರು ನಿವಾಸಿ ಜಯಂತ ಆರೋಪಿಯಾಗಿದ್ದು ಯುವತಿ ದೂರಿನಲ್ಲಿ ತಿಳಿಸಿದ್ದು ಇದೀಗ ಬಂಟ್ವಾಳದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

 

ಸಧ್ಯ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave A Reply

Your email address will not be published.