Car Tire: ಕಾರ್ ಟೈರ್ ಯಾವಾಗ ಅದನ್ನು ಬದಲಾಯಿಸಬೇಕು? ಕರೆಕ್ಟ್ ಟೈಮ್ ಯಾವುದು?
Car Tier: ಮನುಷ್ಯರಿಗೆ ಇರುವಂತೆ ಕಾರಿನ ಟೈರ್ ಗೂ ಕೂಡ ವಯಸ್ಸು ಎಂಬುದು ಇದೆ. ಅವುಗಳ ಆಯಸ್ಸು ಕೂಡ ಮುಗಿಯುತ್ತೆ. ಡೇಟ್ ಮೀರಿ ಬಳಸಿದರೆ, ತುಂಬಾ ಅಪಾಯಕಾರಿ. ಇದು ಕಾರು ಅಪಘಾತಕ್ಕೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ಮೊದಲು ನಾವು ಮಾಡಬೇಕಾದದ್ದು ಕಾರಿನ ಟೈರನ್ನು ಬದಲಾಯಿಸಬೇಕು. ಹಾಗಿದ್ರೆ ಎಷ್ಟು ಸಮಯಗಳಿಗೊಮ್ಮೆ ಕಾರಿನ ಟೈರನ್ನು(Car Tire ) ಬದಲಾಯಿಸಬೇಕು? ನೀವು ಕಾರ್ ಟೈರ್‌ಗಳನ್ನು ಎಷ್ಟು ಸಮಯದವರೆಗೆ ಬಳಸಬಹುದು ಇಲ್ಲಿದೆ ನೋಡಿ ಉತ್ತರ.
ಮೈಲೇಜ್:
ಸಾಮಾನ್ಯವಾಗಿ, ಟೈರುಗಳು 40 ರಿಂದ 60 ಸಾವಿರ ಕಿಲೋಮೀಟರ್ಗಳಷ್ಟು ಚಲಿಸಬಹುದು. ನೀವು ನಿಯಮಿತವಾಗಿ ಹೆಚ್ಚು ದೂರದವರೆಗೆ ಓಡಿಸಿದರೆ ಅಥವಾ ಕೆಟ್ಟ ರಸ್ತೆಗಳಲ್ಲಿ ಹೆಚ್ಚು ಓಡಿಸಿದರೆ ಟೈರ್‌ಗಳು ಬೇಗನೆ ಸವೆಯಬಹುದು.
5-6 ವರ್ಷಗಳ ಬಳಕೆಯ ನಂತರ ಟೈರ್ ಅನ್ನು ಬದಲಾಯಿಸಬೇಕು:
ಟೈರ್ನ ಹೊರಮೈಯು ಪರಿಪೂರ್ಣವಾಗಿ ಕಂಡುಬಂದರೂ ಸಹ, ಅದರ ರಬ್ಬರ್ನ ಗುಣಮಟ್ಟವು ಕಾಲಾನಂತರದಲ್ಲಿ ಕ್ಷೀಣಿಸುತ್ತದೆ. 5-6 ವರ್ಷಗಳ ಬಳಕೆಯ ನಂತರ ಅದನ್ನು ಬದಲಾಯಿಸಬೇಕು. ಕೆಲವು ತಯಾರಕರು 10 ವರ್ಷಕ್ಕಿಂತ ಹಳೆಯದಾದ ಟೈರ್‌ಗಳನ್ನು ಮಿತವಾಗಿ ಬಳಸಿದ್ದರೂ ಸಹ ಬದಲಾಯಿಸಬೇಕೆಂದು ಶಿಫಾರಸು ಮಾಡುತ್ತಾರೆ.
ಟೈರ್ ಸ್ಥಿತಿಯನ್ನು ಪರಿಶೀಲಿಸಿ:
ಟೈರ್ ಟ್ರೆಡ್ ಆಳ ಕನಿಷ್ಠ 1.6 ಮಿಮೀ ಇರಬೇಕು. ಇದಕ್ಕಿಂತ ಕಡಿಮೆ ಇದ್ದರೆ ಟೈರ್ ಬದಲಾಯಿಸಬೇಕಾಗುತ್ತದೆ. ನೀವು ಇದನ್ನು “ಟ್ರೇಡ್ ವೇರ್ ಇಂಡಿಕೇಟರ್” (TWI) ಗಾಗಿ ಪರಿಶೀಲಿಸಬಹುದು. ಟೈರ್ನಲ್ಲಿ ಯಾವುದೇ ಬಿರುಕುಗಳು ಅಥವಾ ಉಬ್ಬುಗಳು ಕಂಡುಬಂದರೆ ಅದನ್ನು ತಕ್ಷಣವೇ ಬದಲಾಯಿಸಿ. ಟೈರ್ನ ಸ್ಥಿತಿ ಸಮವಾಗಿಲ್ಲದಿದ್ದರೆ ವೀಲ್ ಅಲೈನ್ಮೆಂಟ್ ಮಾಡುವ ಮೂಲಕ ಪರಿಶೀಲಿಸಿ. ಹಾಗೆಯೆ ಕೆಟ್ಟ ರಸ್ತೆಗಳಲ್ಲಿ ಅತಿಯಾಗಿ ಓಡಿಸಿದರೆ ಟೈರ್‌ಗಳು ಬೇಗನೆ ಸವೆಯುತ್ತವೆ ಮತ್ತು ಬೇಗನೆ ಬದಲಾಯಿಸಬೇಕಾಗಬಹುದು.