Putturu : ಮುಂದಿನ ಎಲೆಕ್ಷನ್ ವೇಳೆ ಬಿಜೆಪಿ ಸೇರ್ಪಡೆ ವಿಚಾರ – ‘ಕಾಂಗ್ರೆಸ್ ಬಿಟ್ಟು ಬೇರೆ ಯಾವುದೇ ಪಕ್ಷ ಸೇರುವುದಿಲ್ಲ’ ಎಂದ ಶಾಸಕ ಅಶೋಕ್ ಕುಮಾರ್ ರೈ !!
Putturu: ಪುತ್ತೂರಿನ ಹಾಲಿ ಕಾಂಗ್ರೇಸ್ ಶಾಸಕ ಅಶೋಕ್ ರೈ ಮುಂದಿನ ಚುನಾವಣೆಯ ವೇಳೆ ಬಿಜೆಪಿ ಸೇರುವುದು ಖಚಿತ ಎಂಬ ಸುದ್ದಿಯೊಂದು ಇಂದು ಸಂಜೆಯ ವೇಳೆಗೆ ಬಾರಿ ಸದ್ದು ಮಾಡಿತ್ತು. ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಅವರೇ ಈ ರೀತಿ ಹೊಸ ಬಾಂಬ್ ಸಿಡಿಸಿ ಸಂಚಲನ ಸೃಷ್ಟಿಸಿದ್ದರು. ಆದರೆ ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ್ ರೈ ಅವರು ಸ್ಪಷ್ಟೀಕರಣ ನೀಡಿದ್ದು ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಹೌದು, ಪುತ್ತೂರಿನ(Putturu) ಕಾಂಗ್ರೇಸ್ ಶಾಸಕ ಅಶೋಕ್ ರೈ(Ashok Rai) ವಿರುದ್ದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಅವರು ಈ ಮುಂದಿನ ಚುನಾವಣೆಗೆ ಅಶೋಕ್ ರೈಗಳು ಬಿಜೆಪಿಗೆ ಸೇರುವುದು ಖಚಿತ, ಮುಂದಿನ ಚುನಾವಣೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಅಂತ ರೈ ಹೇಳಲಿ. ಒಂದು ವೇಳೆ ಕಾಂಗ್ರೆಸ್ ಪಕ್ಷದಲ್ಲೇ ಇರ್ತಿನಿ ಅಂತ ಆದ್ರೆ ಅವರು ‘ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಆಣೆಪ್ರಮಾಣ ಮಾಡಲಿ ಎಂದು ಸವಾಲೆಸೆದಿದ್ದರು. ನಾನು ನಮ್ಮದೇ ಸರ್ಕಾರ ಇದೆ, ನಮ್ಮದೇ ಶಾಸಕರು ಇದೆ ಪುತ್ತೂರು ಅಭಿವೃದ್ದಿ ಆಗಬಹುದು ಎಂದು ನಂಬಿದ್ದೆ, ಆದ್ರೆ ಅಶೋಕ್ ರೈಗಳು ಪುತ್ತೂರಿಗೆ ಬೇಕಾದ ರಸ್ತೆಯನ್ನೇ ಸರಿಪಡಿಸುತ್ತಿಲ್ಲ, ಈ ಬಗ್ಗೆ ನಮಗೆ ಬೇಕಾದ ಮೂಲ ಸೌಕರ್ಯವನ್ನ ಒದಗಿಸದ ಬಗ್ಗೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಚಕಾರವೆತ್ತಿದ್ದೇನೆ, ಆದ್ರೆ ಶಾಸಕರು ಅವರ ಸಂಸ್ಕೃತಿಯನ್ನ ತೋರಿಸಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇದೆಲ್ಲದಕ್ಕೂ ಅಶೋಕ ಸ್ಪಷ್ಟೀಕರಣ ನೀಡಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದೇನು?
ಈ ಕುರಿತು ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ರವರು ಶಾಸಕರು ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಯಾವುದೇ ಪಕ್ಷ ಸೇರುವುದಿಲ್ಲ ಎಂದು ಹೇಳಿದ್ದಾರೆ. ರಾಜಕೀಯದಲ್ಲಿ ಇರುವಾಗ ಇಂತಹ ಉಹಾಪೋಹ ವಿಷಯಗಳು ಸಾಮಾನ್ಯ. ನಾನು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಪುತ್ತೂರಿನ ಸಮಗ್ರ ಅಭಿವೃದ್ಧಿ, ಉದ್ಯೋಗ ಅವಕಾಶ ಸೃಷ್ಟಿ, ಮೆಡಿಕಲ್ ಕಾಲೇಜ್, ಪ್ರವಾಸಿತಾಣ ವನ್ನಾಗಿ ಪುತ್ತೂರನ್ನು ಮಾಡುವುದಷ್ಟೇ ನನ್ನ ಮುಂದಿರುವ ಯೋಜನೆಗಳು ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಕಾಂಗ್ರೆಸ್ ಕೂಡ ಸ್ಪಷ್ಟೀಕರಣ ನೀಡಿದ್ದು ಅಶೋಕ್ ರೈ ಅವರು ಕಾಂಗ್ರೆಸ್‌ನಲ್ಲೇ ಉಳಿಯಲಿದ್ದು, ಬಿಜೆಪಿಗೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಹೇಳಲಾಗಿದೆ. ಈ ಕುರಿತು ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದೆಂದು ಹೇಳಿದೆ.