Allu Arjun: ನಟ ಅಲ್ಲು ಅರ್ಜುನ್ ಅರೆಸ್ಟ್
Allu Arjun: ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ಸಂದರ್ಭದಲ್ಲಿ ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಉಂಟಾಗಿ ಮಹಿಳೆಯೋರ್ವಳು ಪ್ರಾಣ ಬಿಟ್ಟಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ಹೈದರಾಬಾದ್ನ ಚಿಕ್ಕಟಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್ ನನ್ನು ಬಂಧನ ಮಾಡಿದ್ದಾರೆ.
ಅಲ್ಲು ಅರ್ಜುನ್ ನಿವಾಸಕ್ಕೆ ಬಂದ ಪೊಲೀಸರು ಪೊಲೀಸ್ ಕಾರಿನಲ್ಲೇ ಚಿಕ್ಕಟಪಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಕುಟುಂಬಸ್ಥರು, ತಂದೆ, ಪತ್ನಿ, ಸಹೋದರ ಸೇರಿ ಕೆಲವರು ನಿವಾಸದಲ್ಲಿದ್ದರು. ತನ್ನದೇ ಕಾರಿನಲ್ಲಿ ಬರಬಹುದು ಎಂದು ಮನವಿ ಮಾಡಿದ ಅಲ್ಲು ಅರ್ಜುನ್ಗೆ ಪೊಲೀಸರು ಸಮ್ಮತಿ ನೀಡದೇ, ತಮ್ಮದೇ ಜೀಪಲ್ಲಿ ಕರೆದುಕೊಂಡು ಬಂದಿದ್ದಾರೆ.
ಬಿಎನ್ಎಸ್ ಕಾಯಿದೆಯ U/s 105 ಮತ್ತು 118(1) ಹಾಗೂ r/w 3(5) ರ ಅಡಿ ಪ್ರಕರಣ ದಾಖಲಾಗಿದೆ. ನಟ ಅಲ್ಲು ಅರ್ಜುನ್, ಸಂಧ್ಯಾ ಥಿಯೇಟರ್ ಮ್ಯಾನೇಜ್ಮೆಂಟ್ ಅಲ್ಲು ಅರ್ಜುನ್ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ನೂಕುನುಗ್ಗಲು ಘಟನೆಗೆ ಥಿಯೇಟರ್ ಆಡಳಿತವೇ ಹೊಣೆ ಎಂಬ ಆರೋಪವಿದೆ.