Suicide: ‘ಕಾಳಿ ದೇವಿ’ ದರ್ಶನ ಆಗಿಲ್ಲವೆಂದು ಕತ್ತು ಸೀಳಿಕೊಂಡು ಅರ್ಚಕ ಆತ್ಮಹತ್ಯೆ.!

Share the Article

Suicide: ವಾರಾಣಸಿ ನಗರದ ಕೊತ್ವಾಲಿ ಠಾಣಾ ಪ್ರದೇಶದ ಗಾಯಿ ಘಾಟ್ ಪ್ರದೇಶದಲ್ಲಿ ಕಾಳಿ ದೇವಿ ಪ್ರತ್ಯಕ್ಷ ಆಗಿಲ್ಲ ಎಂದು ಬೇಸತ್ತು ಕತ್ತು ಸೀಳಿಕೊಂಡು ಅರ್ಚಕ ಆತ್ಮಹತ್ಯೆ (Suicide) ಮಾಡಿಕೊಂಡ ಭಯಾನಕ ಘಟನೆಯೊಂದು ವರದಿಯಾಗಿದೆ.ಹೌದು, ಪೂಜಾರಿಯೋರ್ವ ತಾಯಿ ಕಾಳಿ ಅವರ ಸಾಕ್ಷಾತ್ ದರ್ಶನವನ್ನು ಪಡೆಯದ ಕಾರಣದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಹಿತಿ ಪ್ರಕಾರ 24 ಗಂಟೆ ಕಾಳಿ ಪೂಜೆ ಮಾಡಿದ ಅರ್ಚಕ ನಂತರ ಕಾಳಿ ಪ್ರತ್ಯಕ್ಷ ಆಗಿಲ್ಲ ಎಂದು ಬೇಸರಗೊಂಡು ಕತ್ತು ಸೀಳಿಕೊಂಡು ಅರ್ಚಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ಬಂದ ಮೇಲೆ ಬಂದ ಪೊಲೀಸ್ ಅಧಿಕಾರಿಗಳು ಶವವನ್ನು ಶವ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು ಪೂಜಾರಿ ಧಾರ್ಮಿಕ ನಂಬಿಕೆಗಳಿಂದ ಬಹಳ ಪ್ರಭಾವಿತನಾಗಿದ್ದನು, ಇದು ಆತ್ಮಹತ್ಯಗೆ ಕಾರಣವಾಗಿದೆ ಮತ್ತು ಇತರ ಕೋನಗಳಿಂದ ಕೂಡ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ci

Leave A Reply

Your email address will not be published.