Home News Groom: ಅಡ್ರೆಸ್ ಇಲ್ಲದ ಕಲ್ಯಾಣದ ಮಂಟಪದಲ್ಲಿ ಮದುವೆ ಫಿಕ್ಸ್! ದುಬೈನಿಂದ ಬಂದ ವರನಿಗೆ ಶಾಕ್

Groom: ಅಡ್ರೆಸ್ ಇಲ್ಲದ ಕಲ್ಯಾಣದ ಮಂಟಪದಲ್ಲಿ ಮದುವೆ ಫಿಕ್ಸ್! ದುಬೈನಿಂದ ಬಂದ ವರನಿಗೆ ಶಾಕ್

Hindu neighbor gifts plot of land

Hindu neighbour gifts land to Muslim journalist

Groom: ಪ್ರೀತಿಗೆ ಕಣ್ಣಿಲ್ಲ ಹಾಗೆಯೇ ಇದೊಂದು ಅಡ್ರೆಸ್ ಇಲ್ಲದ ಪ್ರೀತಿ ಅಂದ್ರೆ ಸ್ವಲ್ಪ ವಿಚಿತ್ರವೇ ಸರಿ. ಹೌದು,
ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಮೂರು ವರ್ಷಗಳಿಂದ ಪ್ರೀತಿಯಲ್ಲಿ ತೇಲುತ್ತಿದ್ದ ಹುಡುಗನಿಗೆ ಮದುವೆಯ ದಿನವೇ ಯುವತಿ ಮೋಸ ಮಾಡಿರುವುದು ತಿಳಿದು ಬಂದಿರುವ ವಿಚಿತ್ರ ಘಟನೆಯೊಂದು ಪಂಜಾಬ್‌ನಲ್ಲಿ ನಡೆದಿದೆ.

3 ವರ್ಷದ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಹುಡುಗಿಯನ್ನು ವಿವಾಹವಾಗಲು ಸಕಲ ಸಿದ್ಧತೆಗಳೊಂದಿಗೆ ಮದುಮಗಳು ತಿಳಿಸಿದ್ದ ಜಾಗಕ್ಕೆ ಬಂದಿದ್ದ ವರನಿಗೆ (Groom) ಇತ್ತ ವಧುವೂ ಇಲ್ಲ ಅತ್ತ ಆಕೆ ಹೇಳಿದ್ದ ಕಲ್ಯಾಣ ಮಂಟಪವೂ ಇಲ್ಲವಾದ್ದರಿಂದ ಇದೀಗ ವರ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರುವ ಘಟನೆ ಪಂಜಾಬ್‌ನ (Punjab) ಮೋಗಾದಲ್ಲಿ ನಡೆದಿದೆ.

ಮನ್‌ಪ್ರೀತ್ ಕೌರ್ ಎಂಬ ಯುವತಿ ಹಾಗೂ ಜಲಂಧರ್ ಮೂಲದ ಯುವಕ ದೀಪಕ್ ಕುಮಾರ್ (24) ಇನ್ಸ್ಟಾದಲ್ಲಿ ಪರಿಚಯವಾಗಿ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಒಮ್ಮೆಯೂ ಮುಖಾಮುಖಿಯಾಗಿ ಭೇಟಿಯಾಗಿಲ್ಲ. ಆನ್‌ಲೈನ್‌ನಲ್ಲೇ ವಧು-ವರರ ಕುಟುಂಬಸ್ಥರು ವಿವಾಹ ನಿಶ್ಚಯವೂ ಮಾಡಿಕೊಂಡು ಮದುವೆಗೆ ದಿನಾಂಕ ಕೂಡ ಗೊತ್ತುಪಡಿಸಿ, ಕಲ್ಯಾಣ ಮಂಟಪ ಯಾವುದು ಎಂಬುದನ್ನೂ ಕೂಡ ನಿರ್ಧರಿಸಿದ್ದರು.

ಅದರಂತೆಯೇ ವರ ದೀಪಕ್ ಕಳೆದ ತಿಂಗಳು ದುಬೈನಿಂದ (Dubai) ಆಗಮಿಸಿದ್ದ. ಇನ್ನು ಮದುವೆಯ ದಿನ ಮೋಗಾ ತಲುಪಿದ ಬಳಿಕ ತಮ್ಮ ಕಡೆಯ ಕೆಲವರು ಅಲ್ಲಿಗೆ ಬಂದು ನಿಮ್ಮನ್ನು ಮದುವೆ ಹಾಲ್‌ಗೆ ಕರೆದುಕೊಂಡು ಬರುತ್ತಾರೆ ಎಂದು ವಧು ತಿಳಿಸಿದ್ದಳು. ಆದರೆ ದಿನವಿಡೀ ಕಾದರೂ ಹುಡುಗಿಯ ಕಡೆಯವರ ಪತ್ತೆಯಿರಲಿಲ್ಲ. ಬಳಿಕ ತಾವೇ ಕಲ್ಯಾಣ ಮಂಟಪ ಹುಡಕುವ ಸಲುವಾಗಿ ಸ್ಥಳಿಯರಲ್ಲಿ ‘ರೋಸ್ ಗಾರ್ಡನ್ ಪ್ಯಾಲೇಸ್’ ಎಲ್ಲಿದೆ ಎಂದು ಕೇಳಿದಾಗ ಅಂತಹದೊಂದು ಜಾಗವೇ ಇಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ತಾನು ಮೋಸ ಹೋಗಿರುವುದನ್ನು ಅರಿತ ಮದುಮಗ ಪೊಲೀಸ್ ಠಾಣೆಗೆ ತೆರಳಿ ವಧು ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾನೆ.

ಇನ್ನು ಮದುವೆ ಸಿದ್ಧತೆಗಾಗಿ ಆಕೆಗೆ ದಿನೇಶ್ 50 ಸಾವಿರ ರೂ ಹಣ ಸಹ ಕಳುಹಿಸಿದ್ದ. ಮದುವೆ ಸ್ಥಳಕ್ಕೆ 150 ಜನರ ಜೊತೆಗೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದೆವು. ಕ್ಯಾಟರಿಂಗ್ ಮತ್ತು ವಿಡಿಯೋಗ್ರಾಫರ್‌ಗೆ ಮುಂಗಡ ಹಣ ಕೂಡ ಪಾವತಿಸಿದ್ದೆವು ಎಂದು ದೀಪಕ್‌ನ ತಂದೆ ಪ್ರೇಮ್ ಚಂದ್ ತಿಳಿಸಿದ್ದಾರೆ. ತಾನು ಮೋಗಾದವಳಾಗಿದ್ದು, ಫಿರೋಜ್‌ಪುರದಲ್ಲಿ ಕೆಲಸ ಮಾಡುತ್ತಿರುವುದಾಗಿ ಮನ್‌ಪ್ರೀತ್ ಕೌರ್ ಹೇಳಿಕೊಂಡಿದ್ದಳು. ಮದುಮಗಳ ಫೋನ್ ಸ್ವಿಚ್ ಆಫ್ ಆಗಿದ್ದು, ಆಕೆಯನ್ನು ಸಂಪರ್ಕಿಸುವುದು ವರನ ಕಡೆಯವರಿಗೆ ಸಾಧ್ಯವಾಗುತ್ತಿಲ್ಲ ಎಂದು ದೀಪಕ್ ಕುಮಾರ್ ಕಡೆಯಿಂದ ದೂರು ದಾಖಲಿಸಲಾಗಿದೆ ಎಂಬುದಾಗಿ ಮೋಗಾದ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಹರ್ಜಿಂದರ್ ಸಿಂಗ್ ತಿಳಿಸಿದ್ದಾರೆ.