Putturu : ಸಿಡಿಲಿನ ಆರ್ಭಟ – ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಅಸ್ವಸ್ಥ
Putturu : ಫೆಂಗಾಲ್ ಚಂದಮಾರುತದ ಹಬ್ಬದ ಜೋರಾಗಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಜೊತೆಗೆ ಸಿಡಿಲಾರ್ಭಟವು ಕೂಡ ಜೋರಾಗಿದೆ. ಆದರೆ ಈಗ ಸಿಡಿಲಿನ ಅಬ್ಬರಕ್ಕೆ ಪುತ್ತೂರು ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಓ ಒಬ್ಬರು ಅಸ್ವಸ್ಥ ತಗೊಂಡಿರುವಂತಹ ಘಟನೆ ನಡೆದಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು(Putturu) ತಾಲೂಕಿನ ಬನ್ನೂರು ಗ್ರಾಮ ಪಂಚಾಯತ್ ನಲ್ಲಿ ಸಿಡಿಲಿನ ಸಂದರ್ಭ ಕಂಪ್ಯೂಟರ್ ಸ್ವಿಚ್ ಆಫ್ ಮಾಡಲು ಹೋದ ಪಿಡಿಒ ಸಿಡಿಲಾಘಾತದಿಂದ ಅಸ್ವಸ್ಥಗೊಂಡ ಘಟನೆ ಕಚೇರಿಯಲ್ಲಿ ನಡೆದಿದೆ. ಡಿ.5 ರಂದು ಸಂಜೆ ಬನ್ನೂರು ಗ್ರಾಮ ಪಂಚಾಯತ್ ಪಿಡಿಒ ಚಿತ್ರಾವತಿ ಅವರು ಕಂಪ್ಯೂಟರ್ ಸ್ವಿಚ್ ಆಫ್ ಮಾಡುವ ಸಂದರ್ಭ ಸಿಡಿಲು ಬಡಿದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳದಲ್ಲಿದ್ದ ಸದಸ್ಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.