Pushpa 2 Advance Booking: ಬಿಡುಗಡೆಗೂ ಮುನ್ನವೇ ಇತಿಹಾಸ ಸೃಷ್ಟಿಸಿದ ‘ಪುಷ್ಪ 2’; 30 ಕೋಟಿ ಗಳಿಕೆ
Pushpa 2 Advance Booking: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮತ್ತೊಮ್ಮೆ ತೆರೆಮೇಲೆ ಸಂಚಲನ ಮೂಡಿಸಲಿದೆ. ಹೌದು, ಪುಷ್ಪ 2 ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವು ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ, ಚಿತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದೆ. ಪುಷ್ಪ 2 ರಿಲೀಸ್ ಆಗಲು ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ಬಿಡುಗಡೆಗೂ ಮುನ್ನವೇ ಭರ್ಜರಿ ಬ್ಯುಸಿನೆಸ್ ಮಾಡಿದೆ. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನು ಮುರಿಯಲು ಸಿದ್ಧವಾಗಿದೆ. ಮೊದಲ ದಿನವೇ ಚಿತ್ರ 30 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಬಿಡುಗಡೆಗೆ ಸಮಯವಿದ್ದರೂ ಇಷ್ಟು ಕಲೆಕ್ಷನ್ ಮಾಡಿದ್ದರೆ ಬಿಡುಗಡೆಯ ದಿನ ಏನಾಗುತ್ತೋ.
ಸಕ್ನಿಲ್ಕ್ ವರದಿಯ ಪ್ರಕಾರ, ತೆಲುಗು ಆವೃತ್ತಿಯು ಮುಂಗಡ ಬುಕಿಂಗ್ನಿಂದ ಇದುವರೆಗೆ 10.28 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಆದರೆ ಹಿಂದಿ ಆವೃತ್ತಿ 7.45 ಕೋಟಿ ಗಳಿಸಿದೆ. ಮಲಯಾಳಂ ಆವೃತ್ತಿಯ ಬಗ್ಗೆ ಮಾತನಾಡುವುದಾದರೆ, ಇದು 2D ಸ್ಕ್ರೀನಿಂಗ್ನಿಂದ 46.69 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದೆ.
ತೆಲಂಗಾಣದಲ್ಲೂ ಚಿತ್ರ ಭರ್ಜರಿ ಗಳಿಕೆ ಮಾಡಿದೆ. ಟಿಕೆಟ್ ಮಾರಾಟವು 6.76 ಕೋಟಿಗೆ ತಲುಪಿದೆ ಮತ್ತು ಬ್ಲಾಕ್ ಮಾಡಿದ ಸೀಟುಗಳು ಸೇರಿದಂತೆ 9.38 ಕೋಟಿಗೆ ತಲುಪಿದೆ. ಈ ಗಳಿಕೆ ಕರ್ನಾಟಕದಲ್ಲಿ 3.15 ಕೋಟಿ ರೂ., ಮಹಾರಾಷ್ಟ್ರದಲ್ಲಿ 2.64 ಕೋಟಿ ರೂ., ದೇಶಾದ್ಯಂತ ಒಟ್ಟು ಕಲೆಕ್ಷನ್ 30.88 ಕೋಟಿ ರೂ. ಆಗಿದೆ. ವರದಿಗಳನ್ನು ನಂಬುವುದಾದರೆ ಪುಷ್ಪ 2 ಚಿತ್ರದ ಬಜೆಟ್ 400 ಕೋಟಿ ರೂ. ಚಿತ್ರದ ಬಗೆಗಿನ ಹವಾ ಎಬ್ಬಿಸುತ್ತಿರುವ ರೀತಿ ನೋಡಿದರೆ ಈ ಸಿನಿಮಾ ಒಂದು ವಾರದೊಳಗೆ ಬಜೆಟ್ ದಾಟಲಿದೆ ಎನ್ನಬಹುದು.