Sulia : ಬ್ಯೂಟಿ ಪಾರ್ಲರ್ ಗೆಂದು ಹೋದ ಮಹಿಳೆ ನಾಪತ್ತೆ!!

Sulia : ಸುಳ್ಯ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಒಬ್ಬರು ನಾಪತ್ತೆಯಾಗಿದ್ದು ಇದೀಗ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೌದು, ದಾವಣಗೆರೆ ಜಿಲ್ಲೆಯ ಚೆನ್ನಗಿರಿಯ ಮಂಗಳ ಯಾನೆ ಕಾವ್ಯಾ (28) ಎಂಬವರು ಸುಳ್ಯ ಸುತ್ತಮುತ್ತ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಇವರು ನ. 20ರಂದು ನಾಪತ್ತೆಯಾಗಿದ್ದರೆಂದು ಅವರ ಪತಿ ತಿಳಿಸಿದ್ದು, ಸುಳ್ಯ(Sulia )ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅಂದಹಾಗೆ ಮಂಗಳ ಯಾನೆ ಕಾವ್ಯಾ ಅವರನ್ನು ಕೆ.ಎಂ.ವಿಕ್ರಂ ಅವರು ಮನೆಯವರ ಒಪ್ಪಿಗೆ ಮೇರೆಗೆ ಕಳೆದ ನ. 7ರಂದು ಮದುವೆಯಾಗಿದ್ದರು. ಬಳಿಕ ನ. 20ರಂದು ಮಂಗಳಾ ಯಾನೆ ಕಾವ್ಯಾ ಬ್ಯೂಟಿ ಪಾರ್ಲರ್‌ಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.

ಕಾಣೆಯಾದ ಮಂಗಳಾ ಯಾನೆ ಕಾವ್ಯಾ ಅವರು 157 ಸೆ.ಮೀ. ಎತ್ತರ, ಸಾಧಾರಣ ದೃಢಕಾಯ ಶರೀರ, ಕನ್ನಡ ಭಾಷೆ ಮಾತನಾಡುತ್ತಾರೆ. ಕೂದಲು ಕಪ್ಪು ಬಣ್ಣ, ಗೋದಿ ಮೈ ಬಣ್ಣ, ಕೋಲುಮುಖ, ಕಾಫಿ ಬಣ್ಣದ ಚೂಡಿದಾರ ನೀಲಿ ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ.

Leave A Reply

Your email address will not be published.