Bigg Boss: ಕಿಚ್ಚ ಸುದೀಪ್ ಬಿಗ್‌ ಬಾಸ್‌ಗೆ ಗುಡ್‌ಬೈ ಹೇಳಿದ್ದು ಕೇಳಿ ಸಖತ್ ಖುಷಿ ಆಯ್ತು ಎಂದ ಖ್ಯಾತ ನಟಿ – ಅಚ್ಚರಿ ಮೂಡಿಸುತ್ತೆ ಕೊಟ್ಟ ಕಾರಣ!!

Share the Article

Bigg Boss: ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡವನ್ನು 11 ವರ್ಷಗಳಿಂದ ಹೋಸ್ಟ್ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಮುಂದಿನ ಸೀಸನ್ ಇಂದ ಅವರು ಬಿಗ್ ಬಾಸ್ ಗೆ ವಿದಾಯ ಹೇಳಲು ಮುಂದಾಗಿದ್ದಾರೆ. ಈ ನಡುವೆ ಕನ್ನಡದ ನಟಿ ಒಬ್ಬರು ನನಗೆ ಈ ವಿಷಯ ಕೇಳಿ ತುಂಬಾ ಖುಷಿಯಾಯಿತು ಎಂದು ಹೇಳಿದ್ದಾರೆ.

 

ಹೌದು, ನಟ ಕಿಚ್ಚ ಸುದೀಪ್‌(Kiccha Sudeep)ಬಿಗ್‌ ಬಾಸ್‌(Bigg Boss)ಸೀಜನ್‌ ಹನ್ನೊಂದರ ನಂತರ ಮುಂದಿನ ಸೀಜನ್‌ಗಳನ್ನು ನಡೆಸಿಕೊಡುವುದಿಲ್ಲ ಎಂದು ನಿರ್ಧರಿಸಿರುವ ಬಗ್ಗೆ ಮಾತನಾಡಿದ ಚಿತ್ರಾಲ್‌, ನನಗೆ ಈ ವಿಷಯ ಕೇಳಿ ತುಂಬಾ ಖುಷಿಯಾಯಿತು. ಯಾಕೆಂದರೆ ಇಂತಹ ಒಂದು ರಿಯಾಲಿಟಿ ಇಲ್ಲದೇ ಇರುವ ಶೋವನ್ನು ಅಂತಹ ತೂಕ ಇರುವಂತಹ ವ್ಯಕ್ತಿ ಹೋಸ್ಟ್‌ ಮಾಡಬಾರದು ಎಂದು ಹೇಳಿದ್ದಾರೆ.

 

ಅಲ್ಲದೆ ಸಂಪೂರ್ಣ ಶೋ ಸುದೀಪ್ ಅವರನ್ನು ಅವಲಂಬಿಸಿದೆ. ಸುದೀಪ್‌ ಸರ್‌ಗಾಗಿಯೇ ಎಷ್ಟೋ ಜನ ಶೋ ನೋಡುತ್ತಿದ್ದಾರೆ. ಸುದೀಪ್‌ ಸರ್‌ ಒಳ್ಳೆ ಶೋಗಳನ್ನು ಪ್ರಚಾರ ಮಾಡಬೇಕು. ಇದು ಕೆಟ್ಟ ಶೋ ಅಂತಾ ನಾನು ಹೇಳುತ್ತಿಲ್ಲ. ಆದರೆ ಮಾನಸಿಕವಾದ ಭಾವನೆಗಳ ಜೊತೆ ಆಟವಾಡುವ ಶೋ ಇದು. ಇಂತಹ ಒಂದು ಶೋ ಅವರಿಗೆ ಬೇಡ. ಹೀಗಾಗಿ ಅವರು ಮುಂದಿನ ಸೀಜನ್‌ಗಳನ್ನು ನಡೆಸಿಕೊಡುವುದಿಲ್ಲ ಅಂತಾ ಹೇಳಿರುವುದು ಕೇಳಿ ನನಗೆ ಖುಷಿ ಆಯ್ತು ಎಂದು ನಟಿ ಚಿತ್ರಾಲ್‌ ರಂಗಸ್ವಾಮಿ ಹೇಳಿದ್ದಾರೆ.

Leave A Reply