Mangaluru : ಚಿಕ್ಕಮಗಳೂರು ಮೂಲದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ನಾಪತ್ತೆ !!

Share the Article

Mangaluru : ಮಂಗಳೂರು ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ಓದುತಿದ್ದ ಚಿಕ್ಕಮಗಳೂರು ಮೂಲದ ಸ್ಫೂರ್ತಿ (18) ಎಂಬ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ. 16ರಂದು ತಂದೆಗೆ ಕರೆ ಮಾಡಿ ತಾನು ವಾಸ್ತವ್ಯ ಇರುವ ಮನೆ (ಪಿಜಿ)ಯಿಂದ ಕಾಲೇಜಿಗೆ ಹೋಗಿ ಅನಂತರ ಚಿಕ್ಕಮಗಳೂರಿನ(Chikkamagaluru) ಮನೆಗೆ ಬರುವುದಾಗಿ ತಿಳಿಸಿದ್ದಳು. ರಾತ್ರಿ 11 ಗಂಟೆಯಾದರೂ ಮಗಳು ಮನೆಗೆ ತಲುಪದ ಕಾರಣ ತಂದೆ ಕರೆ ಮಾಡಿದಾಗ ಮೊಬೈಲ್‌ ಫೋನ್‌ ಸ್ವಿಚ್‌ ಆಫ್ ಆಗಿತ್ತು. ನ. 17ರಂದು ಮಂಗಳೂರಿಗೆ ಬಂದು ಪಿಜಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು, ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave A Reply