Govt Hospitals: ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ದರ ಏರಿಕೆ ಬಿಸಿ: ವೈದ್ಯಕೀಯ ಸೇವೆ ದರ ಏರಿಕೆ
Govt Hospitals: ಉಚಿತ ಚಿಕಿತ್ಸೆ ಕೊಡುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ (Medical Service) ದರ ಹೆಚ್ಚಳ ಆಗಿದೆ. ಈ ಹಿನ್ನಲೆ ಸರ್ಕಾರಿ ಆಸ್ಪತ್ರೆಯ (Govt Hospitals) ರೋಗಿಗಳಿಗೆ ದರ ಏರಿಕೆ ಬಿಸಿ ತಟ್ಟಲಿದೆ.
ಹೌದು, ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದರ ಏರಿಕೆ ಆಗಿದ್ದು, ಸರ್ಕಾರಿ ಸೇವೆಗಳ ದರ 10 ರಿಂದ 20% ದರ ಏರಿಕೆ ಆಗಿದೆ. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ದರ ಏರಿಕೆ ಆಗಿರುವ ಬಗ್ಗೆ ನೋಟಿಸ್ ಹಾಕಿದ್ದಾರೆ. ಆಸ್ಪತ್ರೆಯ ಹೊರ ರೋಗಿ ವಿಭಾಗಗಳ ಮುಂದೆ ದರ ಏರಿಕೆ ಆಗಿದೆ ಎಂದು ನೋಟಿಸ್ ಅಂಟಿಸಲಾಗಿದೆ. ರಾಜ್ಯದ ಅತಿದೊಡ್ಡ ಆಸ್ಪತ್ರೆ ವಿಕ್ಟೋರಿಯಾದಲ್ಲಿ ದರ ಏರಿಕೆ ಆಗಿರೋದನ್ನು ಕಂಡು ರೋಗಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಯಾವ ಸೇವೆಯ ದರ ಎಷ್ಟು ಹೆಚ್ಚಳ?
ಓಪಿಡಿ ರಿಜಿಸ್ಟ್ರೇಷನ್ ಬುಕ್
ಹಿಂದಿನ ದರ – 10 ರೂ.
ಈಗಿನ ದರ – 20 ರೂ.
ಹೆಚ್ಚಳ – 10 ರೂ.
ಒಳರೋಗಿ ಅಡ್ಮಿಷನ್
ಹಿಂದಿನ ದರ – 25 ರೂ.
ಈಗಿನ ದರ – 50 ರೂ.
ಹೆಚ್ಚಳ – 25 ರೂ.
ರಕ್ತ ಪರೀಕ್ಷೆ
ಹಿಂದಿನ ದರ – 70 ರೂ.
ಈಗಿನ ದರ – 120 ರೂ.
ಹೆಚ್ಚಳ – 50 ರೂ.
ವಾರ್ಡ್ ಚಾರ್ಜಸ್
ಹಿಂದಿನ ದರ – 25 ರೂ.
ಈಗಿನ ದರ – 50 ರೂ.
ಹೆಚ್ಚಳ – 25 ರೂ.
ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ದರ
ಹಿಂದಿನ ದರ – 10 ರೂ.
ಈಗಿನ ದರ – 50 ರೂ.
ಹೆಚ್ಚಳ – 40 ರೂ.