Hubballi: ವಕ್ಫ್ ಪ್ರತಿಭಟನೆ ಸಂದರ್ಭ ʼ ಆಸ್ತಿ ನಿಮ್ಮಪ್ಪಂದʼ ಎಂದ ಮುಸ್ಲಿಂ ವ್ಯಕ್ತಿಗೆ ಬಿತ್ತು ಗೂಸಾ
Hubballi: ವಕ್ಫ್ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ʼಆಸ್ತಿ ನಿಮ್ಮಪ್ಪಂದಾʼ ಎಂದ ಅನ್ಯಕೋಮಿನ ವ್ಯಕ್ತಿಗೆ ರೊಚ್ಚಿಗೆದ್ದ ಪ್ರತಿಭಟನಾಕಾರರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಘಟನೆ ನಡೆದಿದುರುವುದು ಹುಬ್ಬಳ್ಳಿಯ ಕಲಘಟಗಿಯಲ್ಲಿ.
ರೈತರ ಜಮೀನು ಕಬಳಿಸುತ್ತಿದ್ದಾರೆ ಎಂದು ಆರೋಪ ಮಾಡಿ ಇಂದು ವಕ್ಫ್ ವಿರುದ್ಧ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ, ಕಿಸಾನ್ ಸಂಘ ನೇತೃತ್ವದಲ್ಲಿ ಎಪಿಎಂಸಿಯಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನಾಕಾರರು ಜಮಾಯಿಸಿದ್ದು, ಸರಕಾರದ ನಡೆ ವಿರುದ್ಧ ಘೋಷಣೆ ಕೂಗುತ್ತಿದ್ದರು.
ಪ್ರತಿಭಟನೆ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಭಾಷಣ ಮಾಡುವಾಗ ʼ ದೇಶದ ರೈತರ ಆಸ್ತಿಯನ್ನ ಕಬಳಿಸುತ್ತೀರಲ್ಲ, ಆಸ್ತಿಯೇನು ನಿಮ್ಮಪ್ಪಂದʼ ಎಂದು ಸಚಿವ ಜಮೀರ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮುಸ್ಲಿಂ ವ್ಯಕ್ತಿಯೋರ್ವ ಅಲ್ಲೇ ಇದ್ದು, ʼ ಆತಿಯೇನು ನಿಮ್ಮಪ್ಪಂದʼ ಎಂದು ಪ್ರತಿಭಟನಾಕಾರರನ್ನು ಪ್ರಶ್ನೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಪ್ರತಿಭಟನಾಕಾರರು ವ್ಯಕ್ತಿಯನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಉದ್ಧಟತನ ತೋರಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ನಂತರ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.