Gold Price : ಚಿನ್ನದ ಬೆಲೆಯಲ್ಲಿ ಊಹಿಸಿದಷ್ಟು ಇಳಿಕೆ !! ಟ್ರಂಪ್ ಅಮೇರಿಕ ಅಧ್ಯಕ್ಷ ಆಗಿದ್ದೇ ಇದಕ್ಕೆ ಕಾರಣ, ಹೇಗೆ ಗೊತ್ತಾ?

Gold Price : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅಮೋಘ ಜಯ ಸಾಧಿಸಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ.

ಹೌದು, ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌(Donald Trup) ಗೆಲುವು ಸಾಧಿಸುತ್ತಿದ್ದಂತೆಯೇ ಸ್ಪಾಟ್ ಗೋಲ್ಡ್ ಡಾಲರ್ $2,658.35 ಕನಿಷ್ಠ ಮಟ್ಟ 3.1%‌ ರಷ್ಟು ಕುಸಿತ ಕಂಡಿದೆ. ಭಾರತದ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯು 2.5% ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ಬೆಲೆಯು 76,505 ರೂ ಆಗಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 0.6% ರಷ್ಟು ಕುಸಿದಿದ್ದು, 78,106 ರೂಪಾಯಿ ತಲುಪಿದೆ.

ಡಾಲರ್‌ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುವ ಬದಲು ಡಾಲರ್‌ ಮೇಲೆ ಹೂಡಿಕೆ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಅಲ್ಲದೇ ಯುಎಸ್‌ ಬಾಂಡ್‌ಗಳ ವಿಚಾರದಲ್ಲೂ ಮಹತ್ವದ ಬದಲಾವಣೆಗಳು ಆಗುತ್ತಿದ್ದು, ಇದರ ಪರಿಣಾಮ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.

ಟ್ರಂಪ್‌ ಅವರ 2.0 ಶುರುವಾಗಲಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ರಾಕೆಟ್‌ ವೇಗದಲ್ಲಿ ಡಾಲರ್‌ ಮೇಲಕ್ಕೆ ಹೋಗಿದೆ. ಟ್ರಂಪ್‌ ಅವರು ಚುನಾವಣೆ ಸಮಯದಲ್ಲಿ ಹೇಳಿದ್ದ ಅಥವಾ ನೀಡಿದ್ದ ಆರ್ಥಿಕ ಭರವಸೆಗಳೇ ಇದಕ್ಕೆ ಕಾರಣ ಎನ್ನಲಾಗಿದೆ.

Leave A Reply

Your email address will not be published.