Home Entertainment Yash-Radhika: ಏಕಾಏಕಿ ಕೋರ್ಟ್ ಮೆಟ್ಟಿಲೇರಿದ ನಟ ಯಶ್, ರಾಧಿಕಾ ಪಂಡಿತ್ !! ಇದ್ದಕ್ಕಿದ್ದಂತೆ ಸ್ಟಾರ್ ಜೋಡಿ...

Yash-Radhika: ಏಕಾಏಕಿ ಕೋರ್ಟ್ ಮೆಟ್ಟಿಲೇರಿದ ನಟ ಯಶ್, ರಾಧಿಕಾ ಪಂಡಿತ್ !! ಇದ್ದಕ್ಕಿದ್ದಂತೆ ಸ್ಟಾರ್ ಜೋಡಿ ಬಾಳಲ್ಲಿ ಏನಾಯ್ತು?

Hindu neighbor gifts plot of land

Hindu neighbour gifts land to Muslim journalist

Yash-Radhika Pandith: ನಟಿ ರಾಧಿಕಾ ಪಂಡಿತ್ ಅವರು ಕೋರ್ಟ್​ ಕಟಕಟೆಯಲ್ಲಿ ನಿಂತಿದ್ದಾರೆ. ಅವರ ಪತಿ ಯಶ್​ ಜೋರಾಗಿ ವಾದ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದೇನು ಹೊಸ ಸುದ್ದಿ ಎಂದು ಜನ ಕಾಮೆಂಟ್​​ ಮಾಡಿದ್ದಾರೆ.

ಬೆಸ್ಟ್ ಜೋಡಿ ಅಂದರೆ ಯಶ್ ಮತ್ತು ರಾಧಿಕಾ ಪಂಡಿತ್(Yash-Radhika Pandith) ಅಂತ ಬಹಳಷ್ಟು ಮದುವೆ ಆಗದ ಸೆಲೆಬ್ರಿಟಿಗಳು ಹೇಳ್ತಿರುತ್ತಾರೆ, ಜೊತೆಗೆ ನಾವೂ ಮದುವೆ ಆದ್ಮೇಲೆ ಹಾಗೇ ಇದ್ರೆ ಚೆನ್ನಾಗಿರುತ್ತೆ ಅನ್ನೋ ಲೈನನ್ನೂ ಸೇರಿಸಿರ್ತಾರೆ. ಸ್ಯಾಂಡಲ್‌ವುಡ್ ಮಂದಿಗೆ ಈ ಜೋಡಿ ಕಂಡರೆ ಅಷ್ಟಿಷ್ಟ. ಸದ್ಯ ಇವರ ಪಾಪ್ಯುಲಾರಿಟಿ ಇಂಡಿಯಾವನ್ನೂ ಮೀರಿ ಫಾರಿನ್‌ವರೆಗೂ ಹಬ್ಬಿದೆ. ಆದರೆ ಈಗ ಇದೇ ಯಶ್ ಮತ್ತು ರಾಧಿಕಾ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸೆಲೆಬ್ರಿಟಿಗಳು ಕೋರ್ಟಿಗೆ ಹೋಗೋದು ಇತ್ತೀಚೆಗೆ ಸಾಮಾನ್ಯ ಅಂತಾಗಿದೆ. ಆದರೆ ಯಶ್, ರಾಧಿಕಾ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ಬೇರೆ ಇದೆ. ಅಂದ ಹಾಗೆ ಯಶ್ ಹಾಗೂ ರಾಧಿಕಾ ಕೋರ್ಟ್ ಮೆಟ್ಟಿಲೇರಿರೋದು ರಿಯಲ್ ಲೈಫ್ ನಲ್ಲಿ ಅಲ್ಲ. ಬದಲಾಗಿ ಜಾಹೀರಾತೊಂದಕ್ಕೆ. ಹೌದು, ಇತ್ತೀಚೆಗೆ ಯಶ್ ಜಾಹೀರಾತೊಂದರಲ್ಲಿ ನಟಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಯಶ್ ವಕೀಲರ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಟಾಕ್ಸಿಕ್ ಸೀನ್ ಅನ್ನೋ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು. ಆದರೆ ಅದು ಜಾಹೀರಾತು ಅನ್ನೋದು ಆಮೇಲೆ ಗೊತ್ತಾಯ್ತು. ಇದೀಗ ಆ ಜಾಹೀರಾತನ್ನು ಗಂಡ ಹೆಂಡತಿ ಇಬ್ಬರೂ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ರಾಧಿಕಾ ಪಂಡಿತ್ ಅವರು ಒಂದು ವಿಷಯಕ್ಕೆ ಕೋರ್ಟ್​ ಕಟಕಟೆಯಲ್ಲಿ ನಿಂತಿದ್ದಾರೆ. ಅವರ ಪತಿ ಯಶ್​ ಜೋರು ಜೋರಾಗಿ ವಾದ ಮಾಡಿದ್ದಾರೆ.

ಹಾಗಾದರೆ, ಅವರಿಬ್ಬರ ತಕರಾರು ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಇದರಲ್ಲಿ ರಾಧಿಕಾ ಪಂಡಿತ್ ಮೋಸಕ್ಕೆ ಒಳಗಾದ ಗ್ರಾಹಕಿಯ ಪಾತ್ರ ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಬಂದ ಲಾಯರ್ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಕಂಪನಿಯ ನಿಜವಾದ ಅಡುಗೆ ಎಣ್ಣೆ ಯಾವುದು ಎಂಬುದನ್ನು ಸಾಬೀತು ಮಾಡಲು ಯಶ್​ ಫುಲ್ ಜೋಶ್‌ನಲ್ಲಿ ವಾದ ಮಾಡಿದ್ದಾರೆ. ಸದ್ಯ ಯಶ್ ರಾಧಿಕಾ ಅವರ ಈ ಜಾಹೀರಾತು ಸಖತ್ ವೈರಲ್ ಆಗ್ತಿದೆ.