Majabharatha: ಮಜಾಭಾರತ ಖ್ಯಾತಿಯ ಜಗ್ಗಪ್ಪ-ಸುಶ್ಮಿತಾಗೆ ಡಿವೋರ್ಸ್! ಯೂಟ್ಯೂಬ್‌ ನಲ್ಲಿ ಸ್ಪಷ್ಟನೆ ನೀಡಿದ ಜಗ್ಗಪ್ಪ

Share the Article

Majabharatha: ಮಜಾಭಾರತ (Majabharatha) ಖ್ಯಾತಿಯ ಜಗ್ಗಪ್ಪ ಹಾಗೂ ಸುಶ್ಮಿತಾ ಡಿವೋರ್ಸ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ನೀವು ನೋಡಿರಬಹುದು. ಈ ಬಗ್ಗೆ ನೇರವಾಗಿ ನಟ ಜಗ್ಗಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ. ಹೌದು, ಆಯಂಕರ್‌ ಅನುಶ್ರೀ ಯೂಟ್ಯೂಬ್‌ ಚಾನೆಲ್‌ನಲ್ಲಿ ತಮ್ಮ ಹಾಗೂ ಪತ್ನಿ ಸುಶ್ಮಿತಾ ಅವರ ಸಂಬಂಧದ ಬಗ್ಗೆ ಮಾತನಾಡಿರುವ ಜಗ್ಗಪ್ಪ ಡಿವೋರ್ಸ್ ಎನ್ನುವ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

ಸುಶ್ಮಿತಾ ಮತ್ತು ನನ್ನ ಡಿವೋರ್ಸ್ ಗಾಸಿಪ್ ಬಗ್ಗೆ ನಾನು ಸ್ಪಷ್ಟನೆ ಕೊಡುತ್ತೇನೆ..ನಾವು ತುಂಬಾ ಚೆನ್ನಾಗಿದ್ದೇವೆ. ಬ್ಯಾಚುಲರ್‌ ಜೀವನ ತುಂಬಾ ಕಷ್ಟವಾಗಿತ್ತು. ಆದ್ರೆ ಈಗ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ’ ಎಂದು ಜಗ್ಗಪ್ಪ ಹೇಳಿದ್ದಾರೆ.

‘ನಾವಿಬ್ಬರು ಅನ್ಯೋನ್ಯವಾಗಿದ್ದೇವೆ. ನಮಗೆ ಇನ್ನೊಬ್ಬರ ಗಾಳಿ ಮಾತು ಬೇಡ, ನಮ್ಮ ಮೇಲೆ ಯಾರ ಕಣ್ಣು ಬೀಳುವುದು ಬೇಡ. ದಯವಿಟ್ಟು ನಮ್ಮಿಬ್ಬರನ್ನು ದೂರ ಮಾಡಬೇಡಿ. ಸುಶ್ಮಿತಾ ನನ್ನ ಎರಡನೇ ತಾಯಿ. ಅವಳು ಅಂದರೆ ನನಗೆ ತುಂಬಾ ಇಷ್ಟ. ನಮಗೆ ತಾಯಿ ಪ್ರೀತಿ-ತಂದೆ ಪ್ರೀತಿ ನಮಗೆ ಸಿಕ್ಕೇ ಇಲ್ಲ. ಅದಾದ ಮೇಲೆ ಅತಿ ಹೆಚ್ಚು ಪ್ರೀತಿ ಕೊಟ್ಟಿದ್ದು ನನ್ನ ಪತ್ನಿ ಸುಶ್ಮಿತಾ’ ಎಂದು ನಟ ಜಗ್ಗಪ್ಪ ಭಾವುಕರಾಗಿದ್ದಾರೆ.

‘ ಮುಖ್ಯವಾಗಿ ಇನ್ನು ಮಜಾಭಾರತ ಆರಂಭದಲ್ಲಿ ಬಂದಾಗ ಯಾರ ಹತ್ತಿರನೂ ದುಡ್ಡಿರಲಿಲ್ಲ. ನನ್ನ ಹತ್ತಿರ ಆಗ ಎರಡು ಮೂರು ಟೀಶರ್ಟ್‌ ಎರಡು ಪ್ಯಾಂಟ್‌ ಇತ್ತು. ಬೆಂಗಳೂರು ಪರಿಚಯಿಸಿದ್ದೇ ಸುಶ್ಮಿತಾ. ಅವಳಿಲ್ಲ ಅಂದರೆ ನಾನು ಇಲ್ಲಿ ಇರುತ್ತಾನೇ ಇರಲಿಲ್ಲ. ವಾಪಸ್‌ ಹೋಗುತ್ತಿದೆ. ಅವತ್ತು ನನ್ನ ಜೊತೆಗಿದ್ದು, ನನಗೆ ಒಂದು ಜೀವನ ಕೊಟ್ಟು ಇಂದು ನನ್ನ ಜೊತೆಗೆ ಜೀವನ ಮಾಡುತ್ತಿದ್ದಾಳೆ. ಅದಕ್ಕೆ ಅವಳು ನನ್ನ ಎರಡನೇ ತಾಯಿ ಎಂದು ನೋವಿನಿಂದ ಅಳುತ್ತಲೇ ಉತ್ತರ ನೀಡಿದ್ದಾರೆ .

Leave A Reply

Your email address will not be published.