Guruprasad: ಪಂಚಭೂತಗಳಲ್ಲಿ ಲೀನರಾದ ಗುರು!

Share the Article

Guruprasad: ಅಪಾರ್ಟ್‌ಮೆಂಟ್‌ನಲ್ಲಿ ನಟ, ನಿರ್ದೇಶಕ ಗುರು ಪ್ರಸಾದ್‌  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಇಂದು ಪತ್ತೆಯಾಗಿದ್ದು, ಅಂತ್ಯಕ್ರಿಯೆಯು ವಿಲ್ಸನ್‌ ಗಾರ್ಡನ್‌ ಚಿತಾಗಾರದಲ್ಲಿ ನಡೆದಿದೆ. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ಮಾಡಲಾಗಿದೆ. ಡಾಲಿ ಧನಂಜಯ್‌, ನೀನಾಸಂ ಸತೀಶ್‌, ತಬಲ ನಾನಿ ಹಾಗೂ ಗುರುಪ್ರಸಾದ್‌ ಕುಟುಂಬಸ್ಥರು ಅಂತ್ಯಕ್ರಿಯೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಮೊದಲು ಗುರುಪ್ರಸಾದ್‌ ಅವರ ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಪೋಸ್ಟ್‌ಮಾರ್ಟಂ ಮಾಡಲು ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ನೀಡಲಾಗಿತ್ತು. ಅಂತಿಮ ದರ್ಶನಕ್ಕೆ ಮೊದಲ ಪತ್ನಿ ಕೂಡಾ ಬಂದಿದ್ದಾರೆ.  ವಿಕ್ಟೋರಿಯಾ ಆಸ್ಪತ್ರೆಗೆ ನಟ ಡಾಲಿ ಧನಂಜಯ್‌, ನೀನಾಸಂ ಸತೀಶ್‌, ದುನಿಯಾ ವಿಜಿ , ನಿರ್ದೇಶಕರಾದ ಯೋಗರಾಜ್‌ ಭಟ್‌ ಬಂದಿದ್ದಾರೆ.

                                                      ಫೋಟೋ ಕೃಪೆ; ಟವಿ9 ಕನ್ನಡ

ನಿರ್ದೇಶಕ ಗುರುಪ್ರಸಾದ್‌ ಅವರ ಎರಡನೇ ಪತ್ನಿ ಸುಮಿತ್ರಾ, ಮೊದಲ ಪತ್ನಿ ಆರತಿ, ಗುರುಪ್ರಸಾದ್‌ ಅವರ ಕುಟುಂಬಸ್ಥರು ಅಂತ್ಯಕ್ರಿಯೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಲ್ಸನ್‌ ಗಾರ್ಡನ್‌ ಚಿತಾಗಾರದಲ್ಲಿ ಇಂದು ನಟ, ನಿರ್ದೇಶಕ ಗುರುಪ್ರಸಾದ್‌ ಅವರ ಅಂತ್ಯಕ್ರಿಯೆ ನಡೆದಿದೆ. ಗುರುಪ್ರಸಾದ್‌ ಎರಡನೇ ಪತ್ನಿ ಸಹೋದರ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಇಬ್ಬರು ಪತ್ನಿಯರ ಸಮ್ಮುಖದಲ್ಲಿ ಗುರುಪ್ರಸಾದ್‌ ಅಂತ್ಯಕ್ರಿಯೆ ನೆರವೇರಿದೆ.

 

Leave A Reply