Ind vs Nz Test: ಸೋಲಿನ ಹೊಣೆ ಹೊತ್ತುಕೊಂಡ ರೋಹಿತ್‌ ಶರ್ಮಾ! ಕಾರಣವೇನು?

Share the Article

Ind vs Nz Test: ವಿಶ್ವಟೆಸ್ಟ್ ಚಾಂಪಿಯನ್‌ ಶಿಪ್ (WTC) ‌ಭಾಗವಾಗಿ ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ (Ind vs Nz Test)ಭಾರತ ಕ್ರಿಕೆಟ್‌ ತಂಡ ಹೀನಾಯ ಸೋಲು ಅನುಭವಿಸಿದ ಕುರಿತು ಮಾತನಾಡಿರುವ ನಾಯಕ ರೋಹಿತ್‌ ಶರ್ಮಾ (Rohit Sharma), ಸೋಲಿನ ಸಂಪೂರ್ಣ ಹೊಣೆಯನ್ನು ತಾನೆ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ.

ಕಿವೀಸ್‌ ವಿರುದ್ಧ ಸೋಲಿನ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್‌ ಶರ್ಮಾ, ಈ ಸರಣಿಯ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ಏಕೆಂದರೆ ನಾನು ಉತ್ತಮವಾಗಿ ಬ್ಯಾಟ್‌ ಮಾಡಲಿಲ್ಲ, ಕೆಟ್ಟದಾಗಿ ಬ್ಯಾಟಿಂಗ್‌ ಮಾಡಿದೆ. ನಾಯಕನಾಗಿ ತಂಡವನ್ನು ಮುನ್ನಡೆಸದ ಕಾರಣ ನಮ್ಮ ತಂಡ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಇದೀಗ ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ ಎಂದರು.

Leave A Reply

Your email address will not be published.