Haveri: ಹಾವೇರಿಯಲ್ಲಿ ಹಿಂದೂಗಳ ದೇವಸ್ಥಾನಗಳನ್ನ ವಶಕ್ಕೆ ಪಡೆದ ವಕ್ಫ್ ಬೋರ್ಡ್, ಹಿಂದೂ-ಮುಸ್ಲಿಮರ ನಡುವೆ ಗಲಾಟೆ, ಕಲ್ಲು ತೂರಾಟ!!

Haveri : ಹಾವೇರಿ ಜಿಲ್ಲೆಯಲ್ಲಿನ ಕಡಾಕೋಳ ಗ್ರಾಮದಲ್ಲಿನ ಹಿಂದುಗಳ ಮನೆಗಳು, ಭೂಮಿ ಮತ್ತು ದೇವಸ್ಥಾನಗಳನ್ನು ವಕ್ಫ್ ಬೋರ್ಡ್ ವಶಕ್ಕೆ ಪಡೆದಿದೆ. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹೌದು, ಕಡಾಕೋಳ(Kadkola ) ಗ್ರಾಮದಲ್ಲಿ ಮುಸಲ್ಮಾನರು ಹನುಮಾನ ದೇವಸ್ಥಾನ ಮತ್ತು ದುರ್ಗಾ ದೇವಸ್ಥಾನದ ಪರಿಸರದ ಭೂಮಿಯನ್ನು ವಕ್ಫ್ ಭೂಮಿಯಂದು ಘೋಷಿಸುವುದಕ್ಕೆ ಅರ್ಜಿ ದಾಖಲಿಸಿದ್ದಾರೆ ಎಂದು ಸ್ಥಳೀಯ ಹಿಂದೂಗಳು ಆರೋಪಿಸಿದ್ದಾರೆ. ಇದರಿಂದ ಇಲ್ಲಿ ಹಿಂದುಗಳು ಮತ್ತು ಮುಸಲ್ಮಾನರಲ್ಲಿ ವಾಗ್ವಾದ ನಡೆದು ಕಲ್ಲು ತೂರಾಟದ ಘಟನೆಗಳು ನಡೆದಿದೆ.

ವಿಚಾರ ಗೊತ್ತಾದಾಗ ಗ್ರಾಮದಲ್ಲಿ ಹಿಂದುಗಳು ಗ್ರಾಮದ ಮಹಮ್ಮದ್ ರಫಿನ(Mahammada Rafi )ಬಳಿ ವಿಚಾರಣೆ ನಡೆಸಿದ್ದಾರೆ. ಆಗ ಇಬ್ಬರ ನಡುವೆ ವಾದವಾಯಿತು. ಅದರ ನಂತರ ಜನರೇ ಮಹಮ್ಮದ್ ರಫಿನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಈ ವೇಳೆ ಒಂದು ಬೈಕ್ ಸುಟ್ಟು ಹಾಕಿದ್ದಾರೆ. ಈ ಕಲ್ಲು ತೂರಾಟದಲ್ಲಿ ೫ ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡಿರುವವರಿಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮದಲ್ಲಿ ರಿಸರ್ವ್ ಪೊಲೀಸರ ಪಡೆ ಕೂಡ ನೇಮಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸುಮಾರು ೩೨ ಜನರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಬಹಳಷ್ಟು ಜನರು ಹಿಂದುಗಳಾಗಿರುವುದು ಎಂದು ಹೇಳಲಾಗಿದೆ.

Leave A Reply

Your email address will not be published.