Actor Darshan: ಮಧ್ಯಂತರ ಜಾಮೀನು ಪಡೆದ ನಟ ದರ್ಶನ್‌ಗೆ ಬಿಗ್‌ ಶಾಕಿಂಗ್‌ ನ್ಯೂಸ್‌; ಆದೇಶ ಪ್ರಶ್ನಿಸಿ ಖಾಕಿ ಸುಪ್ರೀಂಗೆ

Share the Article

Actor Darshan: ನಟ ದರ್ಶನ್‌ ನಿನ್ನೆ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದು, ಇದೀಗ ಬಿಗ್‌ಶಾಕಿಂಗ್‌ ನ್ಯೂಸೊಂದನ್ನು ಟಿವಿ9 ಮಾಧ್ಯಮ ವರದಿ ಮಾಡಿದೆ. ಸುಪ್ರೀಂಕೋರ್ಟ್‌ಗೆ ಹೋಗಲು ಬೆಂಗಳೂರು ಪೊಲೀಸರ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಅದೇನೆಂದರೆ ದರ್ಶನ್‌ ಮಧ್ಯಂತರ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ನಲ್ಲಿ ಬೆಂಗಳೂರು ಪೊಲೀಸರು ಮೇಲ್ಮನವಿ ಸಲ್ಲಿಸುವುದಕ್ಕೆ ಪೊಲೀಸ್‌ ಇಲಾಖೆಯಲ್ಲಿ ಗಂಭೀರವಾದ ಚರ್ಚೆಯೊಂದು ನಡೆಯುತ್ತಿರುವ ಕುರಿತು ವರದಿಯಾಗಿದೆ.

ಸೋಮವಾರ ಕಾನೂನು ತಜ್ಞರ ಅಭಿಪ್ರಾಯಪಡೆದು ನಿರ್ಧಾರ ಮಾಡಲಾಗುವುದು ಎಂದು ವರದಿಯಾಗಿದೆ. ಸೋಮವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಸರಕಾರಿ ರಜೆ ಇರುವ ಕಾರಣ ಪೂರ್ಣ ಪ್ರಮಾಣದ ಪ್ರತಿ ದೊರಕಿಲ್ಲ. ಸಿಕ್ಕ ಕೂಡಲೇ ಕಾನೂನು ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ಮಾಡಲಾಗುವುದು ಎಂದು ಹೇಳಲಾಗಿದೆ.

ದರ್ಶನ್‌ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಜಾಮೀನು ಅವಧಿಯನ್ನು ಕೇವಲ ಚಿಕಿತ್ಸೆಗೆಂದು ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುವುದಿಲ್ಲ. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಕೂಡಾ ಹೆಚ್ಚಿದೆ. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಹೇಳುವ ಸಾಧ್ಯತೆ ಇದೆ.

Leave A Reply