Traffic: ಸಿಲಿಕಾನ್ ಸಿಟಿಯ ಟ್ರಾಫಿಕ್ ಎಫೆಕ್ಟ್: ನಡು ರಸ್ತೆಯಲ್ಲೆ ಸ್ಲೀಪಿಂಗ್ ಮೂಡ್ ಗೆ ಜಾರಿದ ಚಾಲಕ
Traffic: ಬೆಂಗಳೂರು( Bengaluru) ಅಂದ್ರೆ ನೆನಪಿಗೆ ಮೊದಲಿ ಬರೋದು ಅಲ್ಲಿನ ಟ್ರಾಫಿಕ್(traffic). ದಿನಬೆಳಗಾದರೆ ಟ್ರಾಫಿಕ್ ಸಮಸ್ಯೆ. ಅದರ ಜೊತೆಯೇ ಬದುಕುವ ಅನಿವಾರ್ಯ ಬೆಂಗಳೂರಿಗರದ್ದು. ಆಫೀಸ್(office) ಗೆ ಹೋಗುವವರ ಪಾಡು ಹೇಳತೀರದು. ಗಂಟೆ ಗಟ್ಟಲೆ ಟ್ರಾಫಿಕ್ ನಲ್ಲೆ ಸಮಯ ಕಳೆದು ಹೋಗುತ್ತದೆ. ಇಲ್ಲೊಬ್ಬ ಅಸಾಮಿ ನಡು ರಸ್ತೆಯಲ್ಲಿ ವೆಹಿಕಲ್ ಗಳ ಹೆವಿ ಹಾರ್ನ್ಸ್ ಗಳ ಮಧ್ಯೆಯೂ ನಿದ್ದೆಗೆ(Sleep) ಜಾರಿದ ಘಟನೆ HSR ನಿಂದ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ನಡೆದಿದೆ.
ಬಿಜಿ ರಸ್ತೆಯ ಮಧ್ಯೆ ಕಾರ್ ನಲ್ಲೇ ಸ್ಲೀಪಿಂಗ್ ಮೋಡ್ ಗೆ ಚಾಲಕ ಹೋಗಿದ್ದಾನೆ. ನಿಧಾನ ಸಾಗುವ ವಾಹನಗಳ ಮಧ್ಯೆ ಸಾಗಿ ಸುಸ್ತಾಗಿ ಹೋಗಿದ್ದ ಕಾರು ಚಾಲಕ ನಡು ರಸ್ತೆಯಲ್ಲೇ ಕಾರಿನಲ್ಲಿ ನಿದ್ದೆಗೆ ಜಾರಿದ್ದಾನೆ. ಕಾರ್ ನಲ್ಲಿ ಫ್ಯಾಮಿಲಿ ಟ್ರಿಪ್ ಹೋಗಿದ್ದವರು ಟ್ರಾಫಿಕ್ ಇದ್ದ ಕಾರಣ ಗ್ಯಾಪ್ ನಲ್ಲೇ ಸುಸ್ತಾಗಿ ನಿದ್ರೆ ಮಾಡಿದ್ದಾನೆ. ಇದನ್ನು ನೋಡಿದ ಯಾರೋ ಬೇರೆಯವರು ಬಂದು ಎಬ್ಬಿಸಿದಾಗಲೇ ಚಾಲಕನಿಗೆ ಎಚ್ಚರ ಆಗಿದ್ದು. ಈತನನ್ನು ಎಬ್ಬಿಸಲು ಎಷ್ಟೇ ಹಾನ್ಸ್ ಹೊಡೆದರು ಆತನಿಗೆ ಎಚ್ಚರವಾಗಿಲ್ಲ.