Darshan : ದರ್ಶನ್ ಜಾಮೀನಿಗೆ ಹೈಕೋರ್ಟ್ ವಿಧಿಸಿದೆ ಏಳು ಷರತ್ತುಗಳು!! ಯಾವುದೆಲ್ಲಾ ಗೊತ್ತಾ?
Darshan : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್(Darshan ) ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್(Highcourt ) ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನನ್ನು ನೀಡಿದೆ. ಈ ಜಾಮೀನ್ ಅನ್ನು ಹೈಕೋರ್ಟ್ ಸುಮ್ಮನೆ ನೀಡಿಲ್ಲ. ಸುಮಾರು ಎಂಟು ಷರತ್ತುಗಳ ಮೂಲಕ ನೀಡಿದೆ. ಇವುಗಳಲ್ಲಿ ಯಾವೊಂದು ತಪ್ಪನ್ನು ದರ್ಶನ್ ಮಾಡಬಾರದು. ಹಾಗಿದ್ದರೆ ಹೈಕೋರ್ಟ್ ವಿಧಿಸಿದ ಷರತ್ತುಗಳೇನು?
ನಟ ದರ್ಶನ್ ಮಧ್ಯಂತರ ಜಾಮೀನಿಗೆ ಕೊಟ್ಟ ಸಪ್ತ ಷರತ್ತುಗಳು.
1. ಪಾಸ್ ಪೋರ್ಟ್ ಸರಂಡರ್
2. 2 ಲಕ್ಷ ರೂಪಾಯಿ ಬಾಂಡ್
3. ಇಬ್ಬರ ಶ್ಯೂರಿಟಿ
4. ಸಾಕ್ಷಿ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕಬಾರದು
5. ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸ ಬೇಕು
6. ಸಾಕ್ಷಿ ನಾಶಕ್ಕೆ ಪ್ರಯತ್ನ ಪಡಬಾರದು
7. ಸಾಕ್ಷಿಗಳ ಸಂಪರ್ಕ ಮಾಡಬಾರದು