Diwali crackers: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವಾಗ ಎಚ್ಚರ! ಸುಟ್ಟ ಗಾಯಗಳಾದರೆ ಇಲ್ಲಿದೆ ಸುಲಭ ಮನೆ ಮದ್ದುಗಳು

Diwali crackers: ಮನೆಯಲ್ಲಿ ಆಗಾಗ ಕೆಲವು ಸಣ್ಣಪುಟ್ಟ ಬೆಂಕಿ ಅಪಘಾತಗಳು(fire accident) ನಡೆಯುವುದು ಸಹಜ. ಅದರಲ್ಲೂ ಅಡುಗೆ ಮನೆಯಲ್ಲಿ ಮಹಿಳೆಯರು ಚಿಕ್ಕ ಪುಟ್ಟ ಸುಟ್ಟ ಗಾಯಗಳನ್ನು ಅನುಭವಿಸುವುದು ಸಾಮಾನ್ಯ. ಅಡುಗೆಯ ಕೆಲಸದಲ್ಲಲ್ಲಿ ಬಿಸಿ ಪಾತ್ರೆಗಳು ಅಥವಾ ಬೆಂಕಿಯಿಂದ ಕೈ ಸುಡುವುದು ರೊಟ್ಟಿ ಚಪಾತಿಗಳನ್ನು ಬೇಯಿಸುವಾಗ ಹಬೆಯಿಂದ ಕಳಿಸುವುದು ಪದಾರ್ಥಗಳನ್ನು ಕರಿಯುವಾಗ ಎಣ್ಣೆ ಬಿಸಿ ಎಣ್ಣೆ ತಾಗಿ ಪುಟ್ಟ ಗಾಯಗಳಾಗುವುದು ಇತ್ಯಾದಿ ಅಪರೂಪವೇನಲ್ಲ. ದೀಪಾವಳಿಯ ದೀಪಗಳನ್ನು ಬೆಳಗಿಸುವಾಗಲೂ ಕೆಲವೊಮ್ಮೆ ಸುಟ್ಟ ಗಾಯಗಳಾಗಬಹುದು. ಪಟಾಕಿ ಸಿಡಿಸುವಾಗ ಮಕ್ಕಳು ಹಾಗು ದೊಡ್ಡವರು ಕೆಲವೊಮ್ಮೆ ತೊಂದರೆಗೆ ಒಳಗಾಗೋದು ಸಾಮಾನ್ಯ.

ದೊಡ್ಡ ಸುಟ್ಟಗಾಯವಾದರೆ ತಕ್ಷಣ ವೈದ್ಯರ ಬಳಿ ಹೋಗಬೇಕು, ಆದರೆ ಸಣ್ಣಪುಟ್ಟ ಗಾಯವಾದರೆ ತಕ್ಷಣ ಆಸ್ಪತ್ರೆಗೆ ಹೋಗುವುದಿಲ್ಲ ಮತ್ತು ಅಗತ್ಯವಿಲ್ಲ. ಹಾಗಾದರೆ ಅಂತಹ ಸಮಯದಲ್ಲಿ ಏನು ಮಾಡಬೇಕು? ಕೆಲವು ಮನೆ ಮದ್ದುಗಳು ಮತ್ತು ಆಯುರ್ವೇದ ಪರಿಹಾರಗಳನ್ನು ನೋಡೋಣ.
ಮೊಟ್ಟ ಮೊದಲು ಗಾಯವನ್ನು ನಲ್ಲಿಯ ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತದನಂತರ, ಗಾಯವನ್ನು ಒಣಗಿಸಿ ಕೆಳಗೆ ತಿಳಿಸಿರುವ ಉಪಾಯಗಳ ಪೈಕಿ ನಿಮಗೆ ಸಹಜ ಸಾಧ್ಯವಿರುವದನ್ನು ಮಾಡಬಹುದು.

1) ಲೋಳೆಸರದ ತಿರುಳನ್ನು ತಕ್ಷಣವೇ ಹಚ್ಚಿಕೊಳ್ಳಿ. ಇದು ಗಾಯಕ್ಕೆ ಶೀತಲತೆಯನ್ನು ನೀಡುತ್ತದೆ ಮತ್ತು ಗಾಯವನ್ನು ಗುಣಪಡಿಸುತ್ತದೆ.
2) ಅರಿಶಿನ ನೀರನ್ನು ಹಚ್ಚಿ. ಬೆಲ್ಲದ ಪುಡಿಯನ್ನು ಶುದ್ಧ ತೆಂಗಿನೆಣ್ಣೆಯೊಂದಿಗೆ ಬೆರೆಸಿ ಅಲ್ಲಿ ಹಚ್ಚಿ. ಗಾಯ ವಾಸಿಯಾಗುತ್ತದೆ
3) ಅಲ್ಲಿ ಹಸಿ ಆಲೂಗೆಡ್ಡೆ ರಸವನ್ನು ಹಚ್ಚುವುದರಿಂದ ಗುಳ್ಳೆ ಅಥವಾ ಬೊಬ್ಬೆಗಳನ್ನು ತಡೆಯಬಹುದು

4) ತುಳಸಿ ಎಲೆಗಳ ರಸದೊಂದಿಗೆ ಶುದ್ಧ ತೆಂಗಿನ ಎಣ್ಣೆಯನ್ನು ಬೆರೆಸಿ, ಕಲಿಸಿ ಅಲ್ಲಿ ಹಚ್ಚಿ, ಉರಿತ ನಿಲ್ಲುತ್ತದೆ ಮತ್ತು ಗುಳ್ಳೆ ಬರುವುದಿಲ್ಲ.
5) ಆಲದ ಮರದ ಕೊಂಬೆಯಿಂದ ಹೊರಡುವ ಬೇರುಗಳನ್ನು ಮೊಸರಿನಲ್ಲಿ ತೇಯ್ದು ಗಾಯಕ್ಕೆ ಹಚ್ಚಿ. ಇದು ಉರಿಯುವುದನ್ನು ನಿಲ್ಲಿಸುತ್ತದೆ ಮತ್ತು ಆರಾಮವನ್ನು ನೀಡುತ್ತದೆ.
6) ದೇಸಿ ಹಸುವಿನ ಸಗಣಿಯನ್ನು ಹಚ್ಚಿದರೆ ತಕ್ಷಣ ಗುಣವಾಗುತ್ತದೆ.

7) ದಾಳಿಂಬೆ ಮತ್ತು ಹುಣಸೆಹಣ್ಣುಗಳನ್ನು ಒಟ್ಟಿಗೆ ರುಬ್ಬಿ ಈ ಪೇಸ್ಟ್ ಅನ್ನು ಅಲ್ಲಿ ಹಚ್ಚಿ. ಗುಳ್ಳೆಗಳಾಗುವುದಿಲ್ಲ. ಅಥವಾ ದಾಳಿಂಬೆ ಮರದ ಎಲೆಗಳನ್ನು ಜಜ್ಜಿ ಗಾಯಕ್ಕೆ ಲೇಪಿಸಿದ ತಕ್ಷಣ ಉತ್ತಮ ಅನಿಸುತ್ತದೆ.
8) ಜಾಲಿಯ ಅಂಟನ್ನು ನೀರಿನಲ್ಲಿ ಕರಗಿಸಿ ಈ ನೀರನ್ನು ಸುಟ್ಟ ಜಾಗಕ್ಕೆ ಹಚ್ಚಿದರೆ ಗುಳ್ಳೆಗಳು ಬರುವುದಿಲ್ಲ.
9) ಹಣ್ಣಾದ ಬಾಳೆಹಣ್ಣನ್ನು ಕಿವುಚಿ ಸುಟ್ಟ ಜಾಗಕ್ಕೆ ಹಚ್ಚಿದರೆ ಉರಿತು ನಿಲ್ಲುತ್ತದೆ ಗುಳ್ಳೆಗಳು ಬರುವುದಿಲ್ಲ.

10) ಮುಲ್ತಾನಿ ಮಣ್ಣನ್ನು ಕಲಿಸಿ ಸುಟ್ಟ ಗಾಯದ ಮೇಲೆ ಹಚ್ಚುವುದರಿಂದ ಉರಿ ನಿಲ್ಲುತ್ತದೆ ಮತ್ತು ಗುಳ್ಳೆಗಳನ್ನು ತಡೆಯುತ್ತದೆ
11) ಬಿಳಿ ಬೂದುಗುಂಬಳದ ಎಲೆಗಳ ರಸವನ್ನು ಗಾಯಗಳಿಗೆ ಹಚ್ಚುವುದರಿಂದ ಶೀತಲತೆಯ ಅನುಭವವಾಗುತ್ತದೆ.
12) ಮದರಂಗಿ ಎಲೆಗಳನ್ನು ರುಬ್ಬಿ ಗಾಯದ ಮೇಲೆ ಹಚ್ಚುವುದರಿಂದ ತಂಪಾಗುತ್ತದೆ. ಮತ್ತು ಯಾವುದೇ ಗುಳ್ಳೆ ಬರುವುದಿಲ್ಲ.

13) ಅಮೃತಬಳ್ಳಿ ಮತ್ತು ತುಳಸಿರಸುಗಳನ್ನು ಸೇವಿಸುವುದರಿಂದ ಉರಿತದ ಅನುಭವ ಕಡಿಮೆಯಾಗುತ್ತದೆ.
14) ಬೋರೆ ಮರದ ಎಲೆಗಳನ್ನು ಜಜ್ಜಿ ಗಾಯಕ್ಕೆ ಹಚ್ಚುವುದರಿಂದ ಗುಳ್ಳೆಗಳು ಆಗುವುದಿಲ್ಲ.
15) ಎಳ್ಳನ್ನು ರುಬ್ಬಿ ಗಾಯಕ್ಕೆ ಹಚ್ಚುವುದರಿಂದ ಆರಾಮವಾಗುತ್ತದೆ.

16) ಬೇವಿನ ಎಣ್ಣೆಯನ್ನು ಹಚ್ಚುವುದರಿಂದ ಸುಟ್ಟ ಭಾಗದಲ್ಲಿ ತಂಪಾಗುತ್ತದೆ
17) ಗೋಧಿ ಹಿಟ್ಟನ್ನು ಕಲಿಸಿ ಸುಟ್ಟ ಗಾಯದ ಮೇಲೆ ಹಚ್ಚುವುದರಿಂದ ತಂಪು ಅನುಭವವಾಗುತ್ತದೆ ಮತ್ತು ಗುಳ್ಳೆಗಳು ಬರುವುದಿಲ್ಲ.
18) ಅಲೋವೆರಾ ಜೆಲ್ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಮತ್ತು ಅದನ್ನು ಗಾಯಕ್ಕೆ ಹಚ್ಚಿಕೊಳ್ಳಿ. ಇದು ಗುಳ್ಳೆಗಳನ್ನು ತಡೆಯುತ್ತದೆ.

ಈ ಎಲ್ಲಕ್ಕಿಂತಲೂ ಮಹತ್ವದ ಅಂಶವೆಂದರೆ ದೀಪಾವಳಿ ಆಚರಣೆಯ ಸಂಭ್ರಮದಲ್ಲಿ ಸುರಕ್ಷಿತತೆಯನ್ನು ನಿರ್ಲಕ್ಷಿಸಬೇಡಿ. ಯಾವುದೇ ಅಪಘಾತಗಳಿಗೆ ಆಸ್ಪದ ನೀಡದೆ ಜಾಗರೂಕತೆಯೊಂದಿಗೆ ದೀಪಾವಳಿಯನ್ನು ಸಡಗರವನ್ನು ಆನಂದಿಸಿ.

• ಡಾ. ಪ್ರ. ಅ. ಕುಲಕರ್ಣಿ

Leave A Reply

Your email address will not be published.