Home ದಕ್ಷಿಣ ಕನ್ನಡ Kateelu : ಕಟೀಲಿನ ನೀರಿನ ಟ್ಯಾಂಕ್ ಬಳಿ ಸ್ಥಳೀಯ ವ್ಯಕ್ತಿಯ ಶವ ಪತ್ತೆ – ಕೊಲೆ...

Kateelu : ಕಟೀಲಿನ ನೀರಿನ ಟ್ಯಾಂಕ್ ಬಳಿ ಸ್ಥಳೀಯ ವ್ಯಕ್ತಿಯ ಶವ ಪತ್ತೆ – ಕೊಲೆ ನಡೆದ ಶಂಕೆ !!

Hindu neighbor gifts plot of land

Hindu neighbour gifts land to Muslim journalist

Kateelu: ದಕ್ಷಿಣ ಕನ್ನಡ ಜಿಲ್ಲೆಯ ಕಟೀಲೀನ(Kateelu) ಕೊಂಡೆ ಮೂಲದ ಸರಕಾರಿ ಆಸ್ಪತ್ರೆಯ ಹಿಂಭಾಗದ ನೀರಿನ ಟ್ಯಾಂಕ್‌ ಬಳಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಇದು ಸಂಶಯಾಸ್ಪದ ರೀತಿಯಲ್ಲಿ ಕೊಲೈಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ತಾರಾನಾಥ (Taranat-40) ಎಂದು ಗುರುತಿಸಲಾಗಿದೆ. ಅವರು ಕಟೀಲು ಪರಿಸರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಅಂದಹಾಗೆ ಬಾನುವಾರ ಬೆಳಗ್ಗೆ ಕೊಂಡೆಮೂಲ ನೀರಿನ ಟ್ಯಾಂಕ್‌ ಬಳಿ ಕುತ್ತಿಗೆಯಲ್ಲಿ ಬಟ್ಟೆ ಒಣಗಿಸುವ ಕೇಬಲ್ ವಯರ್ ಪತ್ತೆಯಾಗಿದ್ದು, ಕೊಲೆಮಾಡಲಾಗಿದೆ ಎನ್ನಲಾಗಿದೆ.

ಇನ್ನು ಮಾಹಿತಿ ದೊರೆತ ಕೂಡಲೇ ಸ್ಥಳೀಯರು ಬಜ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಶ್ರೀಕಾಂತ್, ಬಜ್ಪೆ ಇನ್ಸ್ ಪೆಕ್ಟರ್ ಸಂದೀಪ್ ಅವರನ್ನೊಳಗೊಂಡ ಪೊಲೀಸರ ತಂಡ, ಫೋರೆನ್ಸಿಕ್, ಬೆರಳಚ್ಚು, ಶ್ವಾನ ದಳ ತನಿಖಾ ತಂಡಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿವೆ.