Friendship Marriage: ಭಾರತಕ್ಕೂ ತಲುಪಲಿರುವ ಫ್ರೆಂಡಶಿಪ್ ಮ್ಯಾರೇಜ್! ಇಲ್ಲಿ Love, S*x ಏನೂ ಇರಲ್ಲ!

Friendship Marriage: ಭಾರತಕ್ಕೂ ತಲುಪಿರುವ ಫ್ರೆಂಡಶಿಪ್ ಮ್ಯಾರೇಜ್ ಬಗ್ಗೆ ನಿಮಗೆ ತಿಳಿದಿದೆಯೇ. ಹೌದು, ಈ ಫ್ರೆಂಡಶಿಪ್ ಮ್ಯಾರೇಜ್ ನಲ್ಲಿ Love, S*x ಏನೂ ಇರಲ್ಲವಂತೆ.

ಫ್ರೆಂಡಶಿಪ್ ಮ್ಯಾರೇಜ್ ಗೆ ಜಪಾನ್ ಜನರು ಈ ವ್ಯವಸ್ಥೆಗೆ ಒಂದು ವಿಭಿನ್ನ ಅರ್ಥವನ್ನೇ ನೀಡಿದ್ದಾರೆ. ಅಷ್ಟಕ್ಕೂ
ಜಪಾನಿಗರು ಮದುವೆಗೆ ಸ್ನೇಹವನ್ನು ಎಳೆದುತಂದಿದ್ದಾರೆ. ಹೌದು, ಜಪಾನ್​ನಲ್ಲಿ ಸ್ನೇಹ ವಿವಾಹ ( Friendship Marriage ) ಇದೀಗ ಹೊಸ ಟ್ರೆಂಡ್​ ಆಗಿದೆ. ಸ್ನೇಹ ವಿವಾಹ ಅಂದರೆ, ಸೆಕ್ಸ್​ ಅಥವಾ ರೊಮ್ಯಾನ್ಸ್​ನಲ್ಲಿ ತೊಡಗಿಸಿಕೊಳ್ಳದೇ ಇಬ್ಬರು ಒಟ್ಟಿಗೆ ಇರುವುದಾಗಿದೆ. ಈ ವ್ಯವಸ್ಥೆಯನ್ನು ಫಾಲೋ ಮಾಡುವವರು ಮಕ್ಕಳು ಹೊಂದಲು ಇಚ್ಛಿಸುವುದಿಲ್ಲ.

ಸ್ನೇಹ ವಿವಾಹ ಎಂದರೆ ನಿಮ್ಮ ಆಪ್ತ ಸ್ನೇಹಿತನನ್ನು ಮದುವೆಯಾಗುವುದು ಎಂದಲ್ಲ. ಒಂದೇ ರೀತಿಯ ಆಸಕ್ತಿಗಳು ಮತ್ತು ಆಲೋಚನೆಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು ಅಥವಾ ಸ್ನೇಹಿತರು ಕಾನೂನುಬದ್ಧವಾಗಿ ಮದುವೆಯಾಗುವುದು. ಆದರೆ ಅವರ ನಡುವೆ ಯಾವುದೇ ರೊಮ್ಯಾನ್ಸ್​ ಅಥವಾ ಸೆಕ್ಸ್​ ಇರುವುದಿಲ್ಲ. ವಿವಾಹಿತ ಸಂಬಂಧದಲ್ಲಿರುವಾಗಲೇ ಪ್ರೀತಿಯಲ್ಲಿ ಬೀಳುವುದು ಸಹ ತಪ್ಪಲ್ಲ. ಈ ಸಂಬಂಧದಲ್ಲಿ ಮಗುವಿನ ಅಗತ್ಯವಿಲ್ಲ. ಇದು ಕೇವಲ ಸ್ನೇಹ ಮದುವೆ ಅಷ್ಟೇ.

ಇನ್ನು ಜಪಾನಿನಲ್ಲಿ ಇಂತಹ ಸ್ನೇಹ ವಿವಾಹಗಳನ್ನು ನಡೆಸುವ ಸಂಸ್ಥೆಗಳೂ ಇವೆ. ಜಪಾನ್‌ನ ಏಜೆನ್ಸಿಯೊಂದು 500 ಸ್ನೇಹ ವಿವಾಹಗಳನ್ನು ನಡೆಸಿದೆ ಎಂದು ಹೇಳಿಕೊಂಡಿದೆ. 32 ವರ್ಷದವರೆಗೆ ಆರ್ಥಿಕವಾಗಿ ಮತ್ತು ವಿದ್ಯಾವಂತರಾಗಿರುವವರು ಹೆಚ್ಚಾಗಿ ಸ್ನೇಹ ವಿವಾಹಗಳನ್ನು ಆರಿಸಿಕೊಳ್ಳುತ್ತಾರೆ ಎಂದು ಏಜೆನ್ಸಿ ತಿಳಿಸಿದೆ.

ಮುಖ್ಯವಾಗಿ ಲೈಂಗಿಕತೆಯಲ್ಲಿ ಆಸಕ್ತಿಯಿಲ್ಲದ ವ್ಯಕ್ತಿಗಳು ಮತ್ತು ಸಲಿಂಗಕಾಮಿಗಳು ಜಪಾನ್‌ನಲ್ಲಿ ಈ ಹೊಸ ಟ್ರೆಂಡ್​ ಅನ್ನು ಹೆಚ್ಚು ಫಾಲೋ ಮಾಡುತ್ತಿದ್ದಾರೆ. ಜಪಾನ್‌ನಲ್ಲಿ ಸಲಿಂಗ ವಿವಾಹ ಕಾನೂನುಬದ್ಧವಾಗಿಲ್ಲ, ಅಂತಹ ಜನರು ಸ್ನೇಹ ವಿವಾಹವನ್ನು ಪರ್ಯಾಯವಾಗಿ ನೋಡುತ್ತಾರೆ. ಅಲ್ಲದೆ, ಜಪಾನ್ ಸರ್ಕಾರ ವಿವಾಹಿತ ದಂಪತಿಗಳಿಗೆ ತೆರಿಗೆ ಮತ್ತು ಆರೋಗ್ಯ ವಿಮೆ ಪ್ರಯೋಜನಗಳನ್ನು ಒದಗಿಸುತ್ತದೆ. ವರದಿಯ ಪ್ರಕಾರ, ದೊಡ್ಡ ನಗರಗಳಲ್ಲಿ ಹೆಚ್ಚಿನ ಜೀವನ ವೆಚ್ಚ ಮತ್ತು ಕೆಲಸದ ಸಂಸ್ಕೃತಿಯ ಕಾರಣದಿಂದಾಗಿ ಯುವ ಜಪಾನೀಸ್ ಮದುವೆಯಾಗಲು ಅಥವಾ ಕುಟುಂಬವನ್ನು ಬೆಳೆಸಲು ಬಯಸುವುದಿಲ್ಲ. ಹೀಗಾಗಿ ಒಂಟಿತನ ಮತ್ತು ಪ್ರತ್ಯೇಕತೆಯನ್ನು ನಿವಾರಿಸಲು ಸಹ ಸ್ನೇಹ ಮದುವೆ ಸಹಾಯ ಮಾಡುತ್ತದೆ.

ಇನ್ನು ಕೌಟುಂಬಿಕ ಮೌಲ್ಯಗಳಿಗೆ ಒತ್ತು ನೀಡುವ ಭಾರತದಲ್ಲಿಯೂ ಈ ಪ್ರವೃತ್ತಿ ಬರುವ ಸಾಧ್ಯತೆಯಿದೆ ಎಂದು ತಜ್ಞರು ಬಲವಾಗಿ ಸೂಚಿಸುತ್ತಾರೆ. ಯಾಕೆಂದರೆ ಜಪಾನಿನ ಜನರಂತೆ ಭಾರತದಲ್ಲಿ ಅನೇಕ ಜನರು ಇನ್ನು ಮುಂದೆ ಮಕ್ಕಳನ್ನು ಬಯಸುವುದಿಲ್ಲ. ಅಂತಹವರಿಗೆ ಈ ಸ್ನೇಹ ಮದುವೆ ಸಹಾಯ ಮಾಡುತ್ತದೆ. ಈ ಮದುವೆಯಿಂದ ಸಿಗುವ ಶಾಂತಿ ಮತ್ತು ಮಾನಸಿಕ ಆನಂದವು ಭಾರತದ ಜನರನ್ನು ಸಹ ಸ್ನೇಹ ವಿವಾಹವನ್ನು ಅನುಸರಿಸುವಂತೆ ಮಾಡುತ್ತದೆ. ಮುಖ್ಯವಾಗಿ ಮಕ್ಕಳ ಬಗ್ಗೆ ಆಸಕ್ತಿ ಇಲ್ಲದವರಿಗೆ ಸ್ನೇಹ ಮದುವೆ ಉತ್ತಮ ಆಯ್ಕೆಯಾಗಿದೆ ಎನ್ನಲಾಗಿದೆ.

Leave A Reply

Your email address will not be published.