Koppala: ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ; 98 ಮಂದಿಗೆ ಜೀವಾವಧಿ ಶಿಕ್ಷೆ

Share the Article

Koppala: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ 98 ಅಪರಾಧಿಗಳಿಗೆ ಕೋರ್ಟ್‌ ಜೀವಾವಧಿ ಶಿಕ್ಷೆ ಜೊತೆ 5 ಸಾವಿರ ದಂಡ ವಿಧಿಸಲಾಗಿದೆ. ಇನ್ನು ಮೂವರಿಗೆ ಐದು ವರ್ಷ ಜೈಲು ಶಿಕ್ಷೆಯನ್ನು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶಿಕ್ಷೆ ಪ್ರಕಟ ಮಾಡಿದ್ದಾರೆ.
2014 ರ ಆಗಸ್ಟ್‌ 28 ರಂದು ಸವರ್ಣಿಯರು ಮತ್ತು ದಲಿತರ ನಡುವೆ ಗಲಾಟೆ ನಡೆದಿತ್ತು. ದಲಿತರ ಮನೆ ಸುಟ್ಟು ದಾಳಿ ಮಾಡಿದ ಪ್ರಕರಣದಲ್ಲಿ ಒಟ್ಟು 101 ಮಂದಿ ಅಪರಾಧಿಗಳು ಎಂದು ಅ.21 ರಂದು ನ್ಯಾಯಾಧೀಶರು ಘೋಷಣೆ ಮಾಡಿದ್ದರು. ಗಂಗಾವತಿ ತಾಲೂಕಿನ ಮುರುಕುಂಬಿ ಗ್ರಾಮದ ನಿವಾಸಿಗಳು ಶಿಕ್ಷೆಗೊಳಗಾದವರು.

ಸಿನಿಮಾ ನೋಡಲೆಂದು ಹೋದಾಗ ದಲಿತ ಮಂಜುನಾಥನ ಮೇಲೆ ಹಲ್ಲೆ ಮಾಡಲಾಗಿದ್ದು, ತಮ್ಮೂರಿನ ದಲಿತರೇ ಹಲ್ಲೆ ಮಾಡಿದ್ದಾರೆ ಎಂದು ಗ್ರಾಮದ ಜನರಿಗೆ ಮುಂಜುನಾಥ ತಿಳಿಸಿದ್ದು, ಆಮೇಲೆ ಎರಡೂ ಕಡೆ ಭಾರೀ ಗಲಾಟೆಯಾಗಿತ್ತು. ಅಟ್ರಾಸಿಟಿ, ಹಲ್ಲೆ, ಜೀವ ಬೆದರಿಕೆ ಪ್ರಕರಣ ಸಂಬಂಧಪಟ್ಟಂತೆ ಶಿಕ್ಷೆ ಪ್ರಕಟ ಮಾಡಲಾಗಿದೆ.

Leave A Reply

Your email address will not be published.