Viral Post: ‘ಮಹಿಳೆಯರೆ.. ತಿಂಗಳಿಗೊಮ್ಮೆ ನಿಮ್ಮ ‘ಕಿತ್ತಳೆ’ಗಳನ್ನು ಪರಿಶೀಲಿಸಿ’- ಸ್ತನ ಕ್ಯಾನ್ಸರ್ ಕುರಿತ ಯುವರಾಜ್ ಸಿಂಗ್ ಜಾಗೃತಿ ಜಾಹೀರಾತಿಗೆ ಭಾರೀ ಆಕ್ರೋಶ!!

Viral post: ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರ ಸಂಸ್ಥೆ ಸ್ತನ ಕ್ಯಾನ್ಸರ್‌ ಕುರಿತ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಜಾಗೃತಿಗಾಗಿ ದೆಹಲಿ ಮೆಟ್ರೋಗಳಲ್ಲಿ ಕೆಲವು ಪೋಸ್ಟರ್ ಗಳನ್ನು ಅಂಟಿಸಿದೆ. ಆದರೆ ಇದೀಗ ಈ ಚಿತ್ರಗಳು ಟ್ರೋಲ್‌ಗೆ ಒಳಗಾಗಿದ್ದು, ಜನಾಕ್ರೋಶಕ್ಕೆ ಕಾರಣವಾಗಿವೆ.

ಹೌದು, ಯುವರಾಜ್ ಸಿಂಗ್(Youvraj Singh) ಒಡೆತನದ, ಲಾಭದಾಯಕವಲ್ಲದ ಸೇವಾ ಸಂಸ್ಥೆ ಯುವಿಕ್ಯಾನ್‌ ಸ್ತನ ಕ್ಯಾನ್ಸರ್(Breast Cancer) ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಇದರ ಕುರಿತು ವಿವಿಧ ಪೋಷ್ಟರ್ ಅಂಟಿಸಿದೆ. ಆದರೆ ಇದರಲ್ಲಿ ಮಹಿಳೆಯರ ಸ್ತನಗಳನ್ನು ‘ಕಿತ್ತಳೆ’ ಎಂದು ಕರೆಯಲಾಗಿದೆ. ಈ ವಿಚಾರ ಇದೀಗ ಭಾರೀ ಟೀಕೆಗೆ ಒಳಗಾಗಿದೆ.

https://x.com/Erroristotle/status/1848661358608527707?t=5ISsv2lwvNwkyq6iVWaMmA&s=19

ದೆಹಲಿ ಮೆಟ್ರೊ(Delhi Metro)ಕೋಚ್‌ನಲ್ಲಿ ಅಂಟಿಸಿದ್ದ ಈ ಚಿತ್ರದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಯುವರಾಜ್‌ ಸಿಂಗ್‌ ಸ್ತನ ಕ್ಯಾನ್ಸರ್‌ ಜಾಹೀರಾತಿಗೆ ಬಳಸಿರುವ ಚಿತ್ರಗಳು ಮತ್ತು ಪದಗಳು ಅಸೂಕ್ಷ್ಮ ಎಂದಿದ್ದಾರೆ. ಅಲ್ಲದೆ ‘ಸ್ತನವನ್ನು ಸ್ತನ ಎಂದು ಬರೆಯಲು ಹಿಂಜರಿದರೆ ಭಾರತವು ಹೇಗೆ ಸ್ತನ ಕ್ಯಾನ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸಬಲ್ಲದು. ಈ ಚಿತ್ರವನ್ನು ದೆಹಲಿ ಮೆಟ್ರೋದಲ್ಲಿ ಕಾಣಿಸಿದೆ. ನಿಮ್ಮ ಆರೇಂಜ್‌ ಚೆಕ್‌ ಮಾಡಿ ಅಂತೆ. ಈ ಕ್ಯಾಂಪೇನ್‌ ಯಾರು ಮಾಡುತ್ತಿದ್ದಾರೆ. ಈ ರೀತಿಯ ಪೋಸ್ಟರ್‌ಗಳನ್ನು ಪಬ್ಲಿಕ್‌ನಲ್ಲಿ ಹಾಕಬಹುದೇ” ಎಂದು ಪ್ರಶ್ನಿಸಿದ್ದಾರೆ.

ಪೋಷ್ಟರ್ ಅಲ್ಲಿ ಏನಿದೆ?
‘ತಿಂಗಳಿಗೊಂದು ಬಾರಿ ನಿಮ್ಮ ಆರೇಂಜ್‌ ಅನ್ನು ಪರಿಶೀಲಿಸಿ” ಎಂದು ಯುವಿಕ್ಯಾನ್‌ ಫೌಂಡೇಷನ್‌ನ ಕ್ರಿಯೇಟಿವ್ಸ್‌ನಲ್ಲಿ ಬರೆಯಲಾಗಿದೆ. ಸ್ತನ ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದ್ದರೆ ವ್ಯಕ್ತಿಯ ಜೀವ ಉಳಿಯುತ್ತದೆ ಎಂದು ಈ ಮೂಲಕ ಜಾಗೃತಿ ಮೂಡಿಸಲಾಗಿದೆ. ಈ ಪೋಸ್ಟರ್‌ನಲ್ಲಿ ಯುವತಿಯೊಬ್ಬಳು ಬಸ್‌ನಲ್ಲಿ ನಿಂತಿರುವ ಚಿತ್ರವಿದೆ. ಆ ಯುವತಿಯ ಕೈಯಲ್ಲಿ ಎರಡು ಆರೇಂಜ್‌ಗಳಿದ್ದವು. ಈ ಮೂಲಕ ಕಿತ್ತಳೆ ಹಣ್ಣುಗಳನ್ನು ಸಾಂಕೇತಿಕವಾಗಿ ಸ್ತನ ಎನ್ನಲಾಗಿದೆ. ಇದೇ ಚಿತ್ರದಲ್ಲಿ ಹಲವು ಮಹಿಳೆಯರು ಕುಳಿತಿರುವ ಫೋಟೋಗಳಿವೆ. ಕುಳಿತ ಹಿರಿಯ ಮಹಿಳೆಯೊರೊಬ್ಬರ ಬುಟ್ಟಿ ತುಂಬಾ ಕಿತ್ತಳೆಗಳಿವೆ.

ಸದ್ಯ ಸಾಕಷ್ಟು ಜನರು ಈ ಕ್ಯಾಂಪೇನ್‌ ಸರಿ ಇಲ್ಲ ಎಂದಿದ್ದಾರೆ. ಯುವರಾಜ್‌ ಸಿಂಗ್‌ಗೆ ಕೆಲವರು ಟ್ಯಾಗ್‌ ಮಾಡಿ ಈ ಜಾಗೃತಿ ಫೋಟೋಗಳನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. ಕೆಲವರು ಮೆಟ್ರೋದಿಂದ ಈ ಜಾಹೀರಾತು ತೆಗೆಯಬೇಕೆಂದು ದೆಹಲಿ ಮೆಟ್ರೋ ಸೋಷಿಯಲ್‌ ಮೀಡಿಯಾಗಳಿಗೆ ಟ್ಯಾಗ್‌ ಮಾಡಿದ್ದಾರೆ. ಅಲ್ಲದೆ “ನಾಚಿಕೆಗೇಡಿನ ಜಾಹೀರಾತು” “ಕೆಟ್ಟ ಜಾಹೀರಾತು” ಎಂದೆಲ್ಲ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.

Leave A Reply

Your email address will not be published.