Baba Vanga: 2043ರಲ್ಲಿ ಮುಸ್ಲಿಂ ಆಳ್ವಿಕೆ! ಕಹಿ ಸತ್ಯ ನುಡಿದ ಬಾಬಾ ವಂಗಾ ಭವಿಷ್ಯ!

Baba Vanga: 2043ರಲ್ಲಿ ಮುಸ್ಲಿಂ ಆಳ್ವಿಕೆ ಆರಂಭವಾಗಲಿದೆ ಎಂದು ಕಹಿ ಸತ್ಯ ಒಂದನ್ನು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ . ಹೌದು, ಕಣ್ಣು ಕಾಣದ ಬಲ್ಗೇರಿಯನ್‌ ಮಹಿಳೆ ಒಬ್ಬರು ಇದುವರೆಗೆ ಹೇಳಿದ್ದೆಲ್ಲಾ ಆತಂಕ ಹುಟ್ಟಿಸುವ ಭವಿಷ್ಯಗಳೇ ಆಗಿದೆ.

ಬಲ್ಗೇರಿಯಾದ ಅತೀಂದ್ರಿಯ ಭವಿಷ್ಯಜ್ಞಾನಿ ಬಾಬಾ ವಂಗಾ (Baba Vanga) 1996ರಲ್ಲೇ ನಿಧನಳಾಗಿದ್ದರೂ ಸಹ, ಅವರ ಭವಿಷ್ಯವಾಣಿಗಳು ಅವಳ ಮರಣದ ನಂತರ ಬಹಳ ಕಾಲ ನಿಜವಾಯಿತು ಎಂದು ನಂಬಲಾಗಿದೆ. ಅನೇಕ ದೊಡ್ಡ ಜಾಗತಿಕ ಘಟನೆಗಳು ಸಂಭವಿಸುವ ಬಗ್ಗೆ ಅವರು ಮೊದಲೇ ಮುನ್ಸೂಚನೆ ನೀಡಿದ್ದರು ಎಂದು ನಂಬಲಾಗುತ್ತದೆ. ಹಾಗಿದ್ದರೆ ಅವರು ಹೇಳಿದ್ದು ನಿಜವಾದ ಘಟನೆಗಳು ಹಲವರು ಇದೆ..

ಬಾಬಾ ವಾಂಗ ಪ್ರಕಾರ 2025ರಲ್ಲಿ ಯುರೋಪ್‌ನಲ್ಲಿ ಭೀಕರ ಯುದ್ಧ ಸಂಭವಿಸಲಿದೆ. ಇದು ಯುರೋಪ್‌ ಖಂಡದ ಅರ್ಧಾಂಶ ಜನತೆಯನ್ನೇ ನಿರ್ಮೂಲನ ಮಾಡಲಿದೆ. ಈಗ ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಇದು ನಿಜ ಅನ್ನಿಸದೇ ಇರದು. ಜೊತೆಗೆ ಆಕೆ ಇನ್ನೊಂದು ಭಯಾನಕಯವಾದ ಭವಿಷ್ಯವನ್ನೂ ಹೇಳಿದ್ದಾಳೆ. ಅದೇನೆಂದರೆ 2043ರ ಹೊತ್ತಿಗೆ ಇಡೀ ಯುರೋಪ್‌ ಖಂಡ ಮುಸ್ಲಿಂ ಆಳ್ವಿಕೆಯಡಿ ಸಿಲುಕಿಕೊಳ್ಳುತ್ತದೆ. ಇಂದು ಇಸ್ರೇಲ್‌ ಪರ ಅಷ್ಟೂ ಮುಸ್ಲಿಂ ದೇಶಗಳು ತೊಡೆ ತಟ್ಟಿ ನಿಂತಿರುವ ರೀತಿ ನೋಡಿದರೆ, ಇದರ ಆರಂಭ ಇಲ್ಲಿಂದಲೇ ಆಗುತ್ತಿದೆ ಅನಿಸುತ್ತದೆ.

ಬಾಬಾ ವಂಗಾ 2022ರ ಬಗ್ಗೆ ನೀಡಿದ ಎರಡು ಮುನ್ನೋಟ ನಿಜವಾಗಿವೆ. ಪ್ರಪಂಚದಾದ್ಯಂತದ ದೊಡ್ಡ ನಗರಗಳು ಗಮನಾರ್ಹ ಬರ ಮತ್ತು ನೀರಿನ ಕೊರತೆಯಿಂದ ಹಾನಿಗೊಳಗಾಗುತ್ತವೆ ಎಂದು ಅವರು ಹೇಳಿದ್ದರು. ಬ್ರಿಟನ್‌ ಆಗಸ್ಟ್‌ 2022ರಂದು ಅಧಿಕೃತವಾಗಿ ಬರಗಾಲವನ್ನು ಘೋಷಿಸಿತು. ಫ್ರಾನ್ಸ್, ಇಟಲಿ, ಪೋರ್ಚುಗಲ್ ಮತ್ತು ಯುರೋಪ್‌ನ ಹೆಚ್ಚಿನ ಭಾಗಗಳು ಬರ ಮತ್ತು ವಿನಾಶಕಾರಿ ಕಾಳ್ಗಿಚ್ಚುಗಳನ್ನು ಎದುರಿಸಿದವು. ಆಸ್ಟ್ರೇಲಿಯಾ ಮತ್ತು ಏಷ್ಯಾದಲ್ಲಿ ತೀವ್ರ ಪ್ರವಾಹದಿಂದ ತತ್ತರಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವಾಯಿತು.

ಕರಿಯ ವ್ಯಕ್ತಿ ಅಮೆರಿಕದ 44ನೇ ಅಧ್ಯಕ್ಷ ಆಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ ಎಂದು ವರದಿಯಾಗಿದೆ. ಬರಾಕ್ ಒಬಾಮಾ ಅವರು ಜಾರ್ಜ್ W ಬುಷ್‌ ನಂತರ 44ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇಂದಿರಾ ಗಾಂಧಿ ಹತ್ಯೆ: 1969ರಲ್ಲಿ, ಬಾಬಾ ವಂಗಾ ಇಂದಿರಾ ಗಾಂಧಿಯ ಬಗ್ಗೆ ದರ್ಶನ ಹೊಂದಿದ್ದರು. ʼʼಹೊಗೆ ಮತ್ತು ಬೆಂಕಿಯಲ್ಲಿ ನಾನು ಕಿತ್ತಳೆ-ಹಳದಿ ಉಡುಪನ್ನು ನೋಡುತ್ತೇನೆ. ಆ ಉಡುಪು ಅವಳನ್ನು ನಾಶಪಡಿಸುತ್ತದೆʼʼ ಎಂದಿದಳು ವಂಗಾ. ಅಂಗರಕ್ಷಕರು ಗುಂಡು ಹಾರಿಸಿದ ದಿನ ಇಂದಿರಾ ಗಾಂಧಿ ಅವರು ನಿಜವಾಗಿಯೂ ಕೇಸರಿ ಬಣ್ಣದ ಸೀರೆಯನ್ನು ಧರಿಸಿದ್ದರು.

ಸೋವಿಯತ್ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಅವರ ಮರಣದ ದಿನಾಂಕವನ್ನು ವಂಗಾ ನಿಖರವಾಗಿ ಊಹಿಸಿದ್ದಾಳೆ ಎಂಬುದು ಬಾಬಾ ವಂಗಾ ಬಗ್ಗೆ ಪ್ರಸಾರವಾದ ಕಥೆ. ಆದರೆ ಅವಳು ತನ್ನ ಸಾವಿನ ದಿನಾಂಕವನ್ನು ತಾನೇ ಊಹಿಸಿದ್ದಳು. 1990ರ ಒಂದು ಹೇಳಿಕೆಯಲ್ಲಿ ಆಕೆ ಆಗಸ್ಟ್ 11, 1996ರಂದು ʼಈ ಮಾರಣಾಂತಿಕ ಸುರುಳಿಯನ್ನು ಮಗುಚಿಹಾಕುವ ದಿನʼ ಎಂದು ಆಕೆ ಸೂಚಿಸಿದ್ದಳು. ಅದೇ ದಿನ ಬಾಬಾ ವಂಗಾ ತೀರಿಕೊಂಡಳು.

ಹೀಗೆ ಸೋವಿಯತ್ ಒಕ್ಕೂಟ, ಜೆಕೊಸ್ಲೊವಾಕಿಯಾ ಮತ್ತು ಯುಗೊಸ್ಲಾವಿಯ ವಿಸರ್ಜನೆ, ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವಿನ ದಿನಾಂಕ, ಉತ್ತರ ಬಲ್ಗೇರಿಯಾದಲ್ಲಿ 1985 ರ ಭೂಕಂಪ, 2004 ರ ಸುನಾಮಿ

ಇನ್ನುಳಿದ ಭವಿಷ್ಯ ನುಡಿ ಯಲ್ಲಿ, 1.ಯುರೋಪ್‌ನಲ್ಲಿ ಭಯೋತ್ಪಾದಕ ದಾಳಿ ಹೆಚ್ಚಲಿದೆ. ದೊಡ್ಡ ದೇಶವೊಂದು ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸುತ್ತದೆ.
2. ಮುಂದಿನ ವರ್ಷ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ.
3. ಭಯಾನಕ ಹವಾಮಾನ ಘಟನೆಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ.
4. ಸೈಬರ್ ದಾಳಿಗಳು ಹೆಚ್ಚಾಗುತ್ತವೆ. ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಅವರು ಗುರಿಯಾಗಿಸುತ್ತಾರೆ.
5. ಆಲ್ಝೈಮರ್ ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳು ಬರಲಿವೆ.
6. 2025 ರಲ್ಲಿ ಪ್ರಪಂಚದ ಅಂತ್ಯವು ಪ್ರಾರಂಭವಾಗುತ್ತದೆ. 2025ರಲ್ಲಿ, ಯುರೋಪ್‌ನಲ್ಲಿ ಪ್ರಮುಖ ಸಂಘರ್ಷವು ಸ್ಫೋಟಗೊಳ್ಳುತ್ತದೆ, ಇದು ಜನಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ. ಹೀಗೆ ಅನೇಕ ಭವಿಷ್ಯ ನುಡಿಯನ್ನು ಬಾಬಾ ವಾಂಗ ನುಡಿದಿದ್ದಾರೆ.

Leave A Reply

Your email address will not be published.