Hair care: ಚಹಾ ಪುಡಿಯಿಂದ ಕಡು ಕಪ್ಪಾಗಿ ದಪ್ಪವಾಗಿ ತಲೆ ಕೂದಲು ಬೆಳೆಸಲು ಸಾಧ್ಯ!

Hair care: ದೇಹದ ಆರೈಕೆ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಯಾಕೆಂದರೆ ಕೂದಲಿನ ಆರೈಕೆಯಲ್ಲಿ (Hair care) ನೀವು ವಿಫಲ ಆದಲ್ಲಿ ಕೂದಲಿನ ಸಮಸ್ಯೆ ಅನುಭವಿಸಬೇಕಾಗಬಹುದು. ಅದಕ್ಕಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ನೈಸರ್ಗಿಕ ಪರಿಹಾರಳಿವೆ. ಈ ನೈಸರ್ಗಿಕ ಪರಿಹಾರಗಳಲ್ಲಿ ಚಹಾ ಪುಡಿ ಸಹ ಒಂದು. ಹೌದು, ಕೂದಲು ಬಿಳಿಯಾಗುವುದನ್ನು ಚಹಾ ಪುಡಿಯ ಮೂಲಕ ಪರಿಹರಿಸಬಹುದು. 

ಅದಕ್ಕಾಗಿ ಬಾಣಲೆಯಲ್ಲಿ 2 ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ 5 ರಿಂದ 6 ಚಮಚ ಚಹಾ ಪುಡಿ ಸೇರಿಸಿ. ನಂತರ ನೀರನ್ನು ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟು ಆಗುವವರೆಗೂ ಕುದಿಯಲು ಬಿಡಿ. ನಂತರ ಈ ನೀರು ತಣ್ಣಗಾದ ಬಳಿಕ ಇದಕ್ಕೆ ಒಂದೆರಡು ಹನಿ ನಿಂಬೆರಸ ಮತ್ತು ಎರಡು ಚಮಚ ತೆಂಗಿನ ಎಣ್ಣೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಬಿಡಿ. ನಂತರ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ. ಇದರೊಂದಿಗೆ ಕೂದಲು ಬಿಳಿಯಾಗುವ ಸಮಸ್ಯೆಯನ್ನು ತಡೆಗಟ್ಟಬಹುದು. 

ಚಹಾ ಎಲೆಗಳಲ್ಲಿ ಇರುವ ಪೋಷಕಾಂಶಗಳು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇನ್ನು ಟೀ ಪುಡಿ ಟ್ಯಾನಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ನಿಮ್ಮ ಕೂದಲು ಬಿಳಿಯಾಗುವ ಸಮಸ್ಯೆಯನ್ನು ನಿವಾರಿಸುತ್ತದೆ. ಚಹಾ ಎಲೆಗಳು ಆಂಟಿಆಕ್ಸಿಡೆಂಟ್‌ಗಳು, ಉರಿಯೂತದ ಗುಣಲಕ್ಷಣಗಳಂತಹ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇದು ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

1 Comment
  1. Su sızıntısı Üsküdar says

    Su sızıntısı Üsküdar Teknolojik cihazlarla nokta atışı su kaçağını buldular. Harika bir hizmet! https://friichat.com/read-blog/39931

Leave A Reply

Your email address will not be published.