Mangaluru: ಬಿಲ್ಲವ ಸಮಾಜದ ಹೆಣ್ಮಕ್ಕಳು ವೇಶ್ಯೆಯರು ಎಂದು ಹೇಳಿದ್ದ ಅಧಿಕಾರಿ ವಿರುದ್ಧ ದಾಖಲಾಯ್ತು ಎಫ್‌ಐಆರ್‌

Share the Article

Mangaluru: ಬಿಲ್ಲವ ಸಮಾಜದ ಒಂದು ಲಕ್ಷ ಹೆಣ್ಣು ಮಕ್ಕಳು ವೇಶ್ಯೆಯರು ಎಂದು ಕಾಂಟ್ರವರ್ಸಿ ಹೇಳಿಕೆ ನೀಡಿದ ಅರಣ್ಯಾಧಿಕಾರಿ ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬೆಳ್ಳಾರೆ ಪೊಲೀಸರು ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹಿಂದೂ ಜಾಗರಣಾ ವೇದಿಕೆ ಮುಖಂಡ ಸಚಿನ್‌ ವಲಳಂಬೆ ದೂರಿನಡಿ ಬಿಎನ್‌ಎಸ್‌ 79 ಸೆಕ್ಷನ್‌ ಅಡಿಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ದೂರು ನೀಡಿದ್ದರೂ ಪ್ರಕರಣ ದಾಖಲಿಸದ ಕಾರಣ ನಾಳೆ ಪ್ರತಿಭಟನೆ ಮಾಡಲು ಹಿಂಜಾವೇ ಕರೆ ನೀಡಲಾಗಿತ್ತು. ಕೂಡಲೇ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಸುರೇಶ್‌ ಕಾಸರಗೋಡು ಎಂಬುವವರ ಜೊತೆ ದೂರವಾಣಿ ಸಂಭಾಷಣೆ ಸಂದರ್ಭದಲ್ಲಿ ಬಿಲ್ಲವ ಸಮಾಜದ ಹೆಣ್ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ ಬಿಲ್ಲವ ಹುಡುಗಿಯರು ಸೂಳೆಯಾಗಿದ್ದಾರೆ. ಇದಕ್ಕೆ ನನ್ನ ಬಳಿ 10,000 ದಾಖಲೆ ಕೂಡ ಇದೆ, ಹಿಂದುತ್ವದ ಹುಡುಗರು ಸೂಳೆಯರನ್ನಾಗಿ ಮಾಡಿದ್ದಾರೆ. ಬಿಲ್ಲವ ಸಮಾಜದ 1 ಲಕ್ಷ ಹುಡುಗಿಯರು ವೇಶ್ಯೆಯಾಗಲು ಹಿಂದೂ ಸಂಘಟನೆಯ ಯುವಕರು ಕಾರಣ. ಭಜನೆ ಮಾಡಿದ ಹಿಂದೂ ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದವರು ಹಿಂದೂ ಹುಡುಗರು ಎಂದು ದೂರವಾಣಿಯಲ್ಲಿ ಹಿಂದೂ ಹೆಣ್ಣುಮಕ್ಕಳ ಬಗ್ಗೆ ತೀರ ಅವಹೇಳನಕಾರಿಯಾಗಿ ಸಂಜೀವ ಪೂಜಾರಿ ಹೇಳಿಕೆ ನೀಡಿದ್ದರು.

Leave A Reply