Death: ಫಲ ನೀಡದ ಕಾರ್ಯಾಚರಣೆ: ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಸಾವು

Share the Article

Death: ವಾಯುಭಾರ(Dipression) ಕುಸಿತ ಹಿನ್ನೆಲೆ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ(Heavy Rain) ಜನ ಜೀವನ ಅಸ್ತವ್ಯಸ್ತವಾಗುತ್ತಿರುವುದುಲ್ಲದೆ ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸುತ್ತಿವೆ. ಹಾವೇರಿಯಲ್ಲೂ(Haveri) ಭಾರಿ ಮಳೆ ಸುರಿದ ಪರಿಣಾಮ ನಗರದ ರಸ್ತೆ ಮತ್ತು ಕಾಲುವೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿತ್ತು. ಈ ವೇಳೆಆಟವಾಡುತ್ತಿದ್ದ ಬಾಲಕ(Boy) ಕಾಲುವೆಯಲ್ಲಿ ಜಾರಿ ಬಿದ್ದಿದ್ದ. ಹಾವೇರಿ ಎಸ್.ಪಿ ಕಚೇರಿ ಮುಂಭಾಗದಲ್ಲಿ ಈ ಘಟನೆ ನಡೆದಿದೆ. 12 ವರ್ಷದ ನೀವೆದನ್ ಬಸವರಾಜ್ ಗುಡಗೇರಿ ಕೊಚ್ಚಿ ಹೋದ ಬಾಲಕ.

ಈತನ ರಕ್ಷಣಗೆ ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತು. ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಬಾಲಕ ಪತ್ತೆಯಾಗಿದ್ದ. ಅಗ್ನಿಶಾಮಕ ಇಲಾಖೆ, ನಗರಸಬೆ ಸಿಬ್ಬಂದಿ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಈ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ವೈದ್ಯರು ಹೇಳುವಂತೆ ಆಸ್ಪತ್ರೆಗೆ ಬರುವ ಮುಂಚೆಯೆ ಬಾಲಕ ಮೃತಪಟ್ಟಿದ್ದ ಎಂದು ಹಾವೇರಿಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಬಾಲಕನ ರಕ್ಷಣೆಗೆ ವೈದ್ಯರು ಪ್ರಯತ್ನ ಮಾಡಿದರಾದರೂ, ಕಾಲುವೆಯಲ್ಲಿ ಬಿದ್ದಿದ್ದ ಬಾಲಕ ಮೃತಪಟ್ಟಿದ್ದಾನೆ. ಸರಕಾರದಿಂದ ನೀಡುವ ಪರಿಹಾರವನ್ನ ಕೊಡಿಸುತ್ತೇವೆ ಎಂದು ಜಿಲ್ಲಾಧಿಕಾಿರ ಭಸವಸೆ ನೀಡಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬದ ಆಂಕ್ರಂದನ ಮುಗಿಲು ಮುಟ್ಟಿದೆ.

Leave A Reply