Multi cropping: ಬಹುಬೆಳೆಗಳು ಹೊಲದಲ್ಲಿ- ಸಹಜ ಇಂಗಾಲ ಮಣ್ಣಲ್ಲಿ: ಏಕಬೆಳೆ ಬೆಳೆಸುವತ್ತ ರೈತರನ್ನು ಪ್ರೇರೇಪಿಸುವ ಸಂಸ್ಥೆಗಳ ಬಗ್ಗೆ ಎಚ್ಚರಿಕೆ!

Multi cropping: “ಬಹುಬೆಳೆಗಳು ಹೊಲದಲ್ಲಿ – ಸಹಜ ಇಂಗಾಲ(carbon) ಮಣ್ಣಲ್ಲಿ(Soil)”. ಇದು ಸತ್ಯ ಎನ್ನುತ್ತಿದೆ University of Helsinki ನಡೆಸಿರುವ ಅಧ್ಯಯನದ(Study report) ವರದಿ.

ವೈವಿಧ್ಯಮಯ ಬೆಳೆಗಳನ್ನು ಬೆಳೆಸುವುದರಿಂದ ಅಪಾರ ಪ್ರಮಾಣದ ಸಸ್ಯ ಜೀವರಾಶಿ ಸೃಷ್ಟಿಯಾಗುವುದಲ್ಲದೆ, ಸಸ್ಯ ಮತ್ತು ಮಣ್ಣುಜೀವಿಗಣಗಳ ನಡುವಿನ ಪರಸ್ಪರಾವಲಂಬನಾ ಸ್ಥಿತಿಗತಿ ಸುಧಾರಿಸುತ್ತದೆ. ಇವೆರೆಡರ ನಡುವಿನ ಒಡನಾಟದಿಂದ ಮಣ್ಣಲ್ಲಿ ನಿಸರ್ಗ ಸಹಜ ಇಂಗಾಲಾಂಶದ ಸೃಷ್ಟಿ – ಶೇಖರಣೆ – ಪ್ರಮಾಣ ಹೆಚ್ಚುತ್ತದೆ.
ಇದನ್ನು ಜಗತ್ತಿನ ಪ್ರತಿಷ್ಠಿತ ಸಂಸ್ಥೆಯೊಂದು ಅಧ್ಯಯನ ಮಾಡಿ ಘೋಷಿಸಿರುವುದರಿಂದ, ಈಗಲಾದರೂ ಇದನ್ನು ಒಪ್ಪಬಹುದಲ್ಲವೇ. ಇನ್ನು ಮುಂದಾದರೂ ಬಹುಬೆಳೆ / ಅಕ್ಕಡಿಸಾಲು ಪದ್ಧತಿ ಅಳವಡಿಸಿಕೊಳ್ಳಬಹುದಲ್ಲವೇ.
ಇಷ್ಟಾಗಿಯೂ ನಮ್ಮ ಮುಂದೆ ದೊಡ್ಡ ಸವಾಲು ಎದುರಾಗಲಿದೆ. “ಮೆದುಳಿನಲ್ಲಿ ಏಕಬೆಳೆ ಸಂಸ್ಕೃತಿ” (monoculture of the mind) ಬೆಳೆಸಿಕೊಂಡು ಒಂದೇ ಬೆಳೆಯನ್ನು ಬೆಳೆಸುವತ್ತ ರೈತರನ್ನು ಪ್ರೇರೇಪಿಸುತ್ತಿರುವ – ಪ್ರೋತ್ಸಾಹಿಸುತ್ತಿರುವ ರೈತಸ್ನೇಹಿ(?) ಸಂಸ್ಥೆಗಳು ನಮ್ಮ ನಡುವೆಯೇ ಇವೆ. ಇವರನ್ನು ಒಪ್ಪಿಸುವುದು ಹೇಗೆ?