Theerthodbhava: ತಲಕಾವೇರಿಯ ಬ್ರಹ್ಮ ಗುಂಡಿಗೆಯಲ್ಲಿ ತೀಥ೯ರೂಪಿಣಿಯಗಿ ಕಾಣಿಸಿಕೊಂಡ ಕಾವೇರಿ ಮಾತೆ: ಕಣ್ತುಂಬಿಕೊಂಡ ಭಕ್ತಸಾಗರ

Theerthodbhava: ತಲಕಾವೇರಿ ಕ್ಷೇತ್ರದಲ್ಲಿ ಭಕ್ತರ ಹಷೋ೯ದ್ಘಾರದ ನಡುವೇ ತೀಥ೯ಸ್ವರೂಪಿಣಿಯಾದ ಮಾತೆ ಕಾವೇರಿ, ತುಲಾಲಗ್ನದಲ್ಲಿ ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ನೆರೆದಿದ್ದ ಅಸಂಖ್ಯ ಭಕ್ತಾದಿಗಳಿಗೆ ಕಾಣಿಸಿಕೊಂಡು ಪುನೀತರನ್ನಾಗಿ ಮಾಡಿದ್ದಾಳೆ.

 

ತೀರ್ಥರೂಪಿಣಿಯಾಗಿ ಕಾಣಿಸಿಕೊಂಡ ಕ್ಷಣವೇ ಅಚ೯ಕರಿಂದ ಭಕ್ತರ ಮೇಲೆ ಕಾವೇರಿ ತೀಥ೯ ಪ್ರೋಕ್ಷಣೆ ಮಾಡಲಾಯಿತು. 7:35ರ ಸಮಯದಲ್ಲಿ ಪ್ರಧಾನ ಅಚ೯ಕ ಪ್ರಶಾಂತ್ ಆಚಾರ್ ನೇತೖತ್ವದಲ್ಲಿ ಅಚ೯ಕ ಸಮೂಹದಿಂದ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಕೆಲವೇ ನಿಮಿಷಗಳಲ್ಲಿ ಮಂತ್ರಘೋಷದ ನಡುವೇ ತೀಥ೯ರೂಪಿಣಿಯಾಗಿ ದರ್ಶನವನ್ನು ಮಾತೆ ಕಾವೇರಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಈ ಬಾರಿ ಹೆಚ್ಚಿನ ಭಕ್ತಾದಿಗಳು ಆಗಮಿಸಿದ್ದು ವಿಶೇಷವಾಗಿದೆ.

Leave A Reply

Your email address will not be published.