Uttar Pradesh: ಥೂ.. ಎಂತಾ ಅಸಹ್ಯ.. ತನ್ನ ಮೂತ್ರದಲ್ಲಿ ಅಡುಗೆ ಮಾಡಿ ಮನೆಯವರಿಗೆ ಬಡಿಸ್ತಿದ್ದಳಂತೆ ಈ ಯುವತಿ !! ಗೊತ್ತಾಗಿದ್ದೇ ಒಂದು ರೋಚಕ !! ವಿಡಿಯೋ ವೈರಲ್

Share the Article

Uttar Pradesh: ಆಹಾರವನ್ನು ನೀರಿನಲ್ಲಿ, ಹಾಲಿನಲ್ಲಿ ಬೇಯಿಸೋದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಮಾಯಾಂಗನೆ ತನ್ನ ಮೂತ್ರದಲ್ಲಿ ಅಡುಗೆ ಮಾಡಿ, ಬೇಯಿಸಿ ಅದನ್ನು ತನ್ನ ಮನೆಮಂದಿಗೆಲ್ಲಾ ಉಣಬಡಿಸುತ್ತಿದ್ದಳಂತೆ !!

ಯಪ್ಪಾ.. ಥೂ..ಕೇಳೋದಿಕ್ಕೂ ಅಸಹ್ಯ ಅನಿಸುತ್ತೆ ಅಲ್ವಾ? ಆದ್ರೆ ಇದು ಸತ್ಯ. ಉತ್ತರಪ್ರದೇಶ(Uttar Pradesh) ಗಾಜಿಯಾಬಾದ್‌ನಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಈ ಪ್ರಕರಣ ಬೆಳಕಿಗೆ ಬಂದಿದ್ದು ಮನೆಯೊಂದರಲ್ಲಿ ಸುಮಾರು 8 ವರ್ಷಗಳಿಂದ ಕೆಲಸ ಮಾಡುವ ಗೃಹಿಣಿಯೊಬ್ಬಳು ಹಲವು ದಿನಗಳಿಂದ ತನ್ನ ಮೂತ್ರದಲ್ಲಿ ಆಹಾರವನ್ನು ಬೇಯಿಸಿ ಇಡೀ ಕುಟುಂಬಕ್ಕೆ ಉಣಬಡಿಸುತ್ತಿರುವುದು ಬಯಲಾಗಿದೆ.

ಗೊತ್ತಾಗಿದ್ದು ಹೇಗೆ?
ಕೆಲ ಸಮಯ ದಿಂದೆ ಕುಟುಂಬಸ್ಥರಿಗೆ ಲಿವರ್ ಕಾಯಿಲೆ ಎದುರಗಿದೆ. ಈ ಸಂಬಂಧ ವೈದ್ಯರನ್ನು ಸಂಪರ್ಕಿಸಿದರೂ ಪರಿಹಾರ ಸಿಗಲಿಲ್ಲ. ಇದಾದ ಬಳಿಕ ಮನೆಯವರು ಅಡುಗೆ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದು, ಆಗ ಮಹಿಳೆಯ ನೀಚ ಕೃತ್ಯ ಬಯಲಾಗಿದೆ. ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?
ಅಡುಗೆ ಮನೆಯ ಪಕ್ಕದಲ್ಲಿದ್ದ ಬಾಲ್ಕನಿಯ ಡೋರ್‌ ಮುಚ್ಚಿ ನಂತರ ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ. ಇದರೊಂದಿಗೆ ಹಿಟ್ಟನ್ನು ಬೆರೆಸಿ ರೊಟ್ಟಿ ತಯಾರಿಸಿ ಇಡೀ ಕುಟುಂಬಕ್ಕೆ ಉಣಬಡಿಸಿದ್ದಾಳೆ. ಇದಾದ ನಂತರ ಕುಟುಂಬದವರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Leave A Reply