Mobile Data: ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಬೇಗ ಖಾಲಿಯಾಗುತ್ತಾ? ಈ ಟ್ರಿಕ್ಸ್ ಬಳಸಿ ಡೇಟಾ ಉಳಿಸಿ

Mobile Data: ಸ್ಮಾರ್ಟ್ ಫೋನ್ ಯುಗ. ಹಾಗಂತ ಬರೀ ಸ್ಮಾರ್ಟ್​​ಫೋನ್​ ಇದ್ದರೆ ಸಾಕಾ ಅದರಲ್ಲಿದ್ದಂತಹ ಅಪ್ಲಿಕೇಶನ್​ಗಳನ್ನು (Apps) ಬಳಸಲು ಇಂಟರ್ನೆಟ್​ ಸೌಲಭ್ಯ ಅಥವಾ ಸಹ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ನಾವು ಸ್ಮಾರ್ಟ್​​ಫೋನ್​ ಬಳಸಿದ ಕೆಲವೇ ಕ್ಷಣಗಳಲ್ಲಿ ಡೇಟಾ (Data) ಖಾಲಿಯಾಗಿ ಹೋಗುತ್ತದೆ. ಅದರಲ್ಲೂ ಈ 5G ಬಂದಮೇಲಂತೂ ಬೇಗನೇ ಕಾಲಿ ಆಗಿಬಿಡುತ್ತದೆ. ಹಾಗಿದ್ರೆ ನಿಮ್ಮ ಇಂಟರ್ನೆಟ್ ಬೇಗ ಖಾಲಿ ಆಗಬಾರದಾ? ಅದಕ್ಕೆ ಈ ಟ್ರಿಕ್ಸ್ ಯೂಸ್ ಮಾಡಿ.

ಡೇಟಾ ಖಾಲಿ ಆಗಲು ಕಾರಣ?
ನಿಮ್ಮ ಮೊಬೈಲ್ ಡೇಟಾ(mobile data ) ತ್ವರಿತವಾಗಿ ಖಾಲಿ ಆಗಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ಹೈ ಡೆಫಿನಿಶನ್ ಗೇಮ್ಸ್, ಹೆಚ್ಚು ಹೆಚ್ಚು ವಿಡಿಯೋ ನೋಡುವುದು ಸಹ ಒಂದು ಕಾರಣವಿರಬಹುದು. ಆದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ವೇಗವಾಗಿ ಕಾರಣಗಳು ಮೊಬೈಲ್​ನಲ್ಲಿರುವ ಅಪ್ಲಿಕೇಶನ್​ಗಳನ್ನು ಅಪ್ಡೇಟ್​ ಮಾಡುವುದು ಸಹ ಒಂದು ಕಾರಣವಾಗಿದೆ. ಅಲ್ಲದೆ ಹೈ ಡೆಫಿನಿಶನ್ ಗೇಮ್ಸ್, ಹೆಚ್ಚು ಹೆಚ್ಚು ವಿಡಿಯೋ ನೋಡುವುದು ಸಹ ಒಂದು ಕಾರಣವಿರಬಹುದು. ಆದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ವೇಗವಾಗಿ ಕಾರಣಗಳು ಮೊಬೈಲ್​ನಲ್ಲಿರುವ ಅಪ್ಲಿಕೇಶನ್​ಗಳನ್ನು ಅಪ್ಡೇಟ್​ ಮಾಡುವುದು ಸಹ ಒಂದು ಕಾರಣವಾಗಿದೆ.

ಇದರೊಂದಿಗೆ ಡೇಟಾ ಖಾಲಿಯಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ವಾಟ್ಸಾಪ್ ನಲ್ಲಿ ಸಿಕ್ಕಸಿಕ್ಕ ಫೋಟೋ ಹಾಗೂ ವಿಡಿಯೋಗಳು ಆಟೋಮ್ಯಾಟಿಕ್ ಆಗಿ ಡೌನ್‌ ಲೋಡ್ ಮಾಡುವುದು. ವಾಟ್ಸಾಪ್ ವಿಡಿಯೋಗಳು ಮತ್ತು ಫೋಟೋಗಳನ್ನು ಅಟೋಮೆಟಿಕ್ ಡೌನ್​ಲೋಡ್ ಆಯ್ಕೆಯಿಂದ ತೆಗೆಯಿರಿ. ಇಲ್ಲವಾದರೆ ಇದು ಡೇಟಾವನ್ನು ವೇಗವಾಗಿ ಪೂರ್ಣಗೊಳಿಸುತ್ತದೆ.

ಡೇಟಾ ಉಳಿಸವ ವಿಧಾನ:
* ಆಂಡ್ರಾಯ್ಡ್ ಫೋನ್‌ಗಳು ಡೇಟಾ ಉಳಿತಾಯ ಮೋಡ್ ಎಂಬ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಆಯ್ಕೆಯನ್ನು ಹೊಂದಿರುವವರು ಅದನ್ನು ಸಕ್ರಿಯಗೊಳಿಸಿದರೆ ಡೇಟಾವನ್ನು ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ವೈಶಿಷ್ಟ್ಯದ ಸಹಾಯದಿಂದ, ಸಾಧ್ಯವಾದಷ್ಟು ಡೇಟಾವನ್ನು ಉಳಿಸಲು ಅವಕಾಶವಿದೆ.

• ಮೊಬೈಲ್​ ಡೇಟಾ ಖಾಲಿಯಾಗದಂತೆ ಹೀಗೆ ಮಾಡಿ
ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಬೇಕು. ಇಲ್ಲಿ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಅಲ್ಲಿ ಆಟೋ ಅಪ್ಡೇಟ್​ ಆನ್​ ಆಗಿದ್ದರೆ ಅದನ್ನು ಮೊದಲಿಗೆ ಆಫ್​ ಮಾಡ್ಬೇಕು. ಡೌನ್‌ಲೋಡ್ ಮಾಡಿದ ಎಲ್ಲಾ ಅಪ್ಲಿಕೇಶನ್‌ಗಳಿಗೆ ಆಟೋ ಅಪ್ಡೇಟ್​ ಆಪ್ಷನ್​ ಅನ್ನು ಸೆಲೆಕ್ಟ್​ ಮಾಡ್ಬಹುದು. ಆದರೆ ಇದು ಡೇಟಾವನ್ನು ಹೆಚ್ಚು ಬಳಕೆ ಮಾಡುತ್ತಿದ್ದರೆ ಆಫ್​ ಮಾಡಿದರೆ ಒಳ್ಳೆಯದು.

• ಸ್ಮಾರ್ಟ್​​ಫೋನ್​ ಬಳಕೆದಾರರು ಸೆಟ್ಟಿಂಗ್​ನಲ್ಲಿ ಡೇಟಾ ಮಿತಿಯನ್ನು ಹೊಂದಿಸುವುದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ, ಡೇಟಾ ಬಳಕೆಯ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ಡೇಟಾ ಮಿತಿ ಮತ್ತು ಬಿಲ್ಲಿಂಗ್ ಸೈಕಲ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ 1GB ಮಾಡಿದರೆ, 1ಜಿಬಿಯಷ್ಟು ಡೇಟಾ ಬಳಕೆ ಮಾಡಿದ ನಂತರ ನಿಮ್ಮ ಸ್ಮಾರ್ಟ್​​ಫೋನ್​ನಲ್ಲಿ ಇಂಟರ್ನೆಟ್​ ವರ್ಕ್ ಆಗುವುದಿಲ್ಲ. ಈ ರೀತಿಯು ನೀವು ದೈನಂದಿನ ಡೇಟಾವನ್ನು ಉಳಿಸಬಹುದು.

• ಇತ್ತೀಚಿಗೆ ಗೂಗಲ್ ಮ್ಯಾಪ್ ಬಳಕೆ ತುಂಬಾ ಹೆಚ್ಚಾಗಿದೆ. ಇವುಗಳು ಹೆಚ್ಚಿನ ಡೇಟಾವನ್ನು ಸಹ ತಿನ್ನುತ್ತದೆ. ಆದರೆ, ಇಂತಹ ಆ್ಯಪ್​ಗಳನ್ನು ಆಫ್ ಲೈನ್ ಮೋಡ್​ನಲ್ಲಿ ಬಳಸಬೇಕೇ ಹೊರತು ಆನ್ ಲೈನ್ ಮೋಡ್​ನಲ್ಲಿ ಅಲ್ಲ. ಇದು ಇಂಟರ್ನೆಟ್ ಡೇಟಾವನ್ನು ಸಾಧ್ಯವಾದಷ್ಟು ಉಳಿಸುತ್ತದೆ.

• ನಮ್ಮ ಡೇಟಾವನ್ನು ಅತಿ ಹೆಚ್ಚು ತಿನ್ನುವುದು ಯೂಟ್ಯೂಬ್. ಯುಟ್ಯೂಬ್ ನಲ್ಲಿ ಆಟೋಪ್ಲೇ ವೀಡಿಯೋಸ್ ಡಿಸೇಬಲ್ ಮಾಡುವುದು ಸುಲಭ. ನಿಮ್ಮ ಬ್ರೌಸರ್ ಅಥವಾ ಆಂಡ್ರಾಯ್ಡ್/ಐಓಎಸ್ ನಲ್ಲಿ ಯುಟ್ಯೂಬ್ ವೆಬ್ ಪೇಜ್ ನ್ನು ತೆರೆಯಿರಿ ಮತ್ತು ಯಾವುದೇ ಒಂದು ವೀಡಿಯೋವನ್ನು ರ್ಯಾಡಂ ಆಗಿ ಪ್ಲೇ ಮಾಡಿ. ಈ ಸಂದರ್ಭ ಮೇಲ್ಬಾಗದ ಬಲ ಕಾರ್ನರ್ ನಲ್ಲಿ ನೀವು ಆಟೋ ಪ್ಲೇ ಬಟನ್ ಆನ್ ಆಗಿರುವುದು ತಿಳಿಯುತ್ತದೆ. ಇದನ್ನು ಆಫ್ ಮಾಡಿ.

Leave A Reply

Your email address will not be published.