Corona vaccination: ಕರೋನಾ ಲಸಿಕೆ ಎಡವಟ್ಟು: ಹೃದಯಾಘಾತದ ಅಪಾಯ: ಅಧ್ಯಯನ ವರದಿ

Corona vaccination: ಮೂರು ವರ್ಷಗಳ ಹಿಂದೆ ವಿಶ್ವದೆಲ್ಲೆಡೆ(World) ಕೋಟ್ಯಂತರ ಜನರ ಜೀವತೆಗೆದ ಕೋವಿಡ್-19(Cived-19) ಭೀತಿ ಇನ್ನೂ ಪೂರ್ಣ ನಿವಾರಣೆ ಆಗಿಲ್ಲ. ಒಂದಲ್ಲ ಒಂದು ರೀತಿ ಕರೋನಾ ವೈರಸ್(corona viruses) ಜಗತ್ತನ್ನು ಕಾಡುತ್ತಲೇ ಇದೆ. ಸದ್ಯ ಹೃದಯಾಘಾತದ(Heart attack) ಅಪಾಯದ ರೂಪದಲ್ಲಿ ಭೀತಿ ಹುಟ್ಟಿಸಿದೆ.

ಇತ್ತೀಚಿನ ಕರೋನಾ ಪರಿಣಾಮಗಳ ಅಧ್ಯಯನ ಪ್ರಕಾರ, ಕೋವಿಡ್-19ರ ಮೊದಲ ಅಲೆಯಲ್ಲಿ ತೀವ್ರ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯಕ್ಕೆ ತುತ್ತಾ ಗುವುದು ಉಳಿದವರಿಗಿಂತಲೂ ಅಪಾಯ 2 ಪಟ್ಟು ಹೆಚ್ಚು ಇದೆ. ಅಧ್ಯಯನ ವರದಿ ಜೀವಶಾಸ್ತ್ರದ ಜರ್ನಲ್‌ನಲ್ಲಿ ಈ ವಾರ ಪ್ರಕಟವಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ ಕೂಡಾ ಈ ಕುರಿತು ಮಾಹಿತಿ ನೀಡಿದ್ದು, ಈ ಬಗೆಯಲ್ಲಿ ಹೆಚ್ಚಿನ ಮಟ್ಟದ ಹೃದಯಾಘಾತ, ಪಾರ್ಶ್ವವಾಯುಗೆ ತುತ್ತಾಗುವ ಅಪಾಯ 3 ವರ್ಷಗಳವರೆಗೂ ಇರುತ್ತದೆ ಎಂದು ಹೇಳಿದೆ. ನಿಯಮಿತವಾಗಿ ವೈದ್ಯರ ತಪಾಸಣೆಯೂ ಅಗತ್ಯವಾಗಿದೆ’ ಎಂದು ಅಧ್ಯಯನ ತಂಡದ ಮುಖ್ಯಸ್ಥರಾದ ಡಾ.ಹೂಮನ್ ಅಲ್ಲಾಯಿ ಹೇಳಿದ್ದಾರೆ.

1 Comment
  1. GlobalBllog says

    GlobalBllog very informative articles or reviews at this time.

Leave A Reply

Your email address will not be published.