Phone Storage Full: ನಿಮ್ಮ ಫೋನ್ ಸ್ಟೋರೇಜ್ ಫುಲ್ ಆಗಲು ಇದೊಂದೇ ​ ಮುಖ್ಯ ಕಾರಣ: ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ

Phone Storage Full: ಇತ್ತೀಚಿಗೆ ಸ್ಮಾರ್ಟ್ ಫೋನ್ ಗಳಲ್ಲಿ ಹಲವು ಆಪ್ ಇನ್ಸ್ಟಾಲ್ ಮಾಡಿ ಉಪಯೋಗ ಮಾಡುತ್ತೇವೆ. ಆದ್ರೆ ಎಲ್ಲಕ್ಕಿಂತ ಹೆಚ್ಚಾಗಿ ನಾವು ವಾಟ್ಸಪ್ ಬಳಸುತ್ತೇವೆ. ಆದ್ರೆ ಈ ವಾಟ್ಸಾಪ್ ನಿಂದ ನಿಮ್ಮ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ ಎಂದು ನಿಮಗೆ ಗೊತ್ತಾ?!. ಹೌದು, ಈ ರೀತಿ ಸ್ಟೋರೇಜ್ ಫುಲ್ (Phone Storage Full) ಆಗದಂತೆ ತಡೆಯಲು ಈ ಟಿಪ್ಸ್ ಫಾಲೋ ಮಾಡಿ ಸಾಕು.

ಸಾಮಾನ್ಯವಾಗಿ, ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಕೋಟಿಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸ್​ಆ್ಯಪ್​ನ (WhatsApp) ಒಂದು ಗ್ರೂಪ್​ನಲ್ಲೇ ಅನೇಕ ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ನಿಮಿಷಕ್ಕೊಂದು ಫೋಟೋ, ವಿಡಿಯೋ ಅಥವಾ ಫೈಲ್​ಗಳು ಬರುತ್ತಲೇ ಇರುತ್ತದೆ. ಇವುಗಳು ನೇರ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೇವ್ ಆಗುತ್ತದೆ. ಇದರಿಂದ ನಿಮ್ಮ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಆಗ ಒಂದೊಂದೆ ಫೋಟೋವನ್ನು ಹುಡುಕಿಕೊಂಡು ಡಿಲೀಟ್ ಮಾಡೋದು ತುಂಬಾ ಕಿರಿ ಕಿರಿ ಅನಿಸುತ್ತೆ,. ಆದರೆ, ವಾಟ್ಸ್​ಆ್ಯಪ್​ನಲ್ಲಿ ಬಂದ ಅನಗತ್ಯ ಫೋಟೋವನ್ನು ಡೌನ್​ಲೋಡ್ ಮಾಡದೆ ಇರುವುದಕ್ಕೆ ಈ ಟಿಪ್ಸ್ ಖಂಡಿತಾ ವರ್ಕ್ ಆಗುತ್ತೆ.

ಅದಕ್ಕಾಗಿ ವಾಟ್ಸ್​ಆ್ಯಪ್ ಸೆಟ್ಟಿಂಗ್ಸ್​ನಲ್ಲಿರುವ ಸ್ಟೋರೇಜ್-ಡೇಟಾ ಆಯ್ಕೆಗೆ ಹೋಗಿ ಮಿಡಿಯಾ ಅಟೋ-ಡೌನ್​ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್​ಗಳು ನೀವು ಡೌನ್​ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ.

ಇನ್ನು ನಮ್ಮ ಮೊಬೈಲ್​ನಲ್ಲಿರುವ ಕೆಲವು ಅಪ್ಲಿಕೇಷನ್​ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್​ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್​ಗಳನ್ನು ಮೊದಲು ಅನ್ಇನ್‌ಸ್ಟಾಲ್ ಮಾಡಿ.

Leave A Reply

Your email address will not be published.