Bihar: ‘ಶ್ರೀರಾಮ, ಹನುಮಂತ ಮೂಲತಃ ಮುಸ್ಲಿಮರು, ನಮಾಜ್ ಮಾಡುತ್ತಿದ್ದರು’ – ಶಾಲೆಯಲ್ಲಿ ಶಿಕ್ಷಕಕನಿಂದ ಮಕ್ಕಳಿಗೆ ಪಾಠ !!

Bihar: ಶಾಲೆಯಲ್ಲಿ ಇಂದು ಕೆಲವು ಶಿಕ್ಷಕರು ಮಕ್ಕಳಿಗೆ ಪಾಠ ಬೋಧನೆ, ಜೀವನ ಶಿಕ್ಷಣ ಬೋಧನೆ, ಬದುಕಿನ ಮೌಲ್ಯಗಳ ಬೋಧನೆ ಮಾಡುವುದನ್ನು ಬಿಟ್ಟು ಅನಗತ್ಯ ವಿಚಾರಗಳನ್ನು, ಕೋಮು ಸಂಘರ್ಷವನ್ನು ಹುಟ್ಟುಹಾಕುವಂತಹ ಮಾಹಿತಗಳನ್ನೇ ವಿದ್ಯಾರ್ಥಿಗಳ ತಲೆಗೆ ತುಂಬುತ್ತಿದ್ದಾರೆ. ಇದೀಗ ಇಂತದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಬಿಹಾರದ(Bihar) ಬೇಗುಸರಾಯ್‌ನಲ್ಲಿ ಶಿಕ್ಷಕನೋರ್ವ ಹಿಂದೂಗಳ ಆರಾಧ್ಯ ದೈವಗಳಾದ ಭಗವಾನ್ ಶ್ರೀರಾಮ(Shri Rama) ಮತ್ತು ಹನುಮಾನ್(Hanuman) ಮೂಲತಃ ಮುಸ್ಲಿಮರಾಗಿದ್ದರು, ಅವರು ಸದಾ ನಮಾಜ್ ಮಾಡುತ್ತಿದ್ದರು ಎಂದು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.

ಬಿಹಾರದ ಬೇಗುಸರಾಯ್‌ನ ಬಚ್ವಾರಾ ಬ್ಲಾಕ್‌ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪಾಠ ಬೋಧನೆ ಮಾಡಿದವನು ಮೊಹಮ್ಮದ್ ಜಿಯಾವುದ್ದೀನ್ ಎಂಬ ಶಿಕ್ಷಕ ಎಂದು ತಿಳಿದುಬಂದಿದೆ. ಈ ಹೇಳಿಕೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಶಿಕ್ಷಕರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೆ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಗ್ರಾಮಸ್ಥರು ಶಿಕ್ಷಕರ ಮನೆಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.

ಅಂದಹಾಗೆ ಇದರ ಬಗ್ಗೆ ತರಗತಿಯ ವಿದ್ಯಾರ್ಥಿಗಳನ್ನು ಕೇಳಿದಾಗ, ‘ಜಿಯಾವುದ್ದೀನ್ ಸರ್ ನಮಗೆ ನಮಾಜ್ ಓದಿದ ಮೊದಲ ಹಿಂದೂ ವ್ಯಕ್ತಿ ಹನುಮಂತ ಎಂದು ಹೇಳಿದರು, ಭಗವಾನ್ ರಾಮನು ನಮಾಜ್ ಓದಲು ಹೇಳಿದ್ದಾನೆ ಮತ್ತು ಹನುಮಾನ್ ಮುಸ್ಲಿಂ ಎಂದು ಹೇಳಿದರುʼ ಎಂಬ ಮಾಹಿತಿ ನೀಡಿದ್ದಾರೆ. ಶಾಲೆಯ ಇತರೆ ಹಲವಾರು ಶಿಕ್ಷಕರು ಸಹ ಆಕ್ರೋಶಗೊಂಡಿದ್ದು, ಪರಿಸ್ಥಿತಿ ಹದಗೆಡುತ್ತಿರುವುದನ್ನು ನೋಡಿದ ನಂತರ ಸಂಬಂಧಪಟ್ಟ ಶಿಕ್ಷಕನಿಗೆ ಕ್ಷಮೆಯಾಚಿಸಲು ಒತ್ತಾಯಿಸಲಾಯಿತು. ಆಗ ‘ನಾನು ಈ ವಿಷಯಗಳನ್ನು ತಪ್ಪಾಗಿ ಕಲಿಸಿದೆ. ನಾನು ತಪ್ಪು ಮಾಡಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ. ಭವಿಷ್ಯದಲ್ಲಿ ಇದು ಸಂಭವಿಸುವುದಿಲ್ಲʼ ಎಂದು ಶಿಕ್ಷಕ ಮೊಹಮ್ಮದ್ ಜಿಯಾವುದ್ದೀನ್ ಕ್ಷಮೆಯಾಚಿಸಿದ್ದಾರೆ.

Leave A Reply

Your email address will not be published.