Mangaluru: ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ: ಎ2 ಆರೋಪಿ ಮಾಸ್ಟರ್‌ ಮೈಂಡ್‌ ಅಬ್ದುಲ್‌ ಸತ್ತಾರ್‌ ಬಂಧನ

Mangaluru: ಮೊಯ್ದೀನ್‌ ಬಾವಾ ಅವರ ಸಹೋದರ ಮುಮ್ತಾಜ್‌ ಆಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಈ ಪ್ರಕರಣದ ಎ2 ಆರೋಪಿ ಅಬ್ದುಲ್‌ ಸತ್ತಾರ್‌ನನ್ನು ವಶಕ್ಕೆ ಪಡೆಯಲಾಗಿದೆ. ಎ3 ಆರೋಪಿ ಶಾಫಿ, ಎ4 ಮುಸ್ತಾಫನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

ಈ ಪ್ರಕರಣದ ಕಿಂಗ್‌ಪಿನ್‌, ಮಾಸ್ಟರ್‌ಮೈಂಡ್‌ ಆಗಿದ್ದ ಆರೋಪಿ ಅಬ್ದುಲ್‌ ಸತ್ತಾರ್‌ನನ್ನು ಬೆಳಗಾವಿ ಮಹಾರಾಷ್ಟ್ರ ಗಡಿಯಲ್ಲಿ ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನ ಮಾಡಿದ್ದು, ಪೊಲೀಸರು ಬಂಧನ ಮಾಡಿದ್ದಾರೆ.

ಈ ಹಿಂದೆ ಕೂಡಾ ಆರೋಪಿ ಅಬ್ದುಲ್‌ ಸತ್ತಾರ್‌ ಹಲವರನ್ನು ಹನಿಟ್ರ್ಯಾಪ್‌ ಮೂಲಕ ಸುಲಿಗೆ ಮಾಡಿರುವ ಕುರಿತು ವರದಿಯಾಗಿದೆ. ಈಗಾಗಲೇ ಈ ಪ್ರಕರಣದ ಎ1 ಆರೋಪಿ ಆಯಿಷಾ@ರೆಹಮತ್‌ ಹಾಗೂ ಆಕೆಯ ಪತಿ ಸೋಹೆಬ್‌ ಮತ್ತು ಎ6 ಆರೋಪಿ ಸಿರಾಜ್‌ರನ್ನು ಪೊಲೀಸರು ನಿನ್ನೆ ಬಂಧನ ಮಾಡಿದ್ದಾರೆ.

Leave A Reply

Your email address will not be published.