Kumble: ಸರಕಾರಿ ಉದ್ಯೋಗದ ಆಮಿಷ, ಲಕ್ಷಗಟ್ಟಲೆ ಹಣ ಗುಳುಂ ಆರೋಪ; ಶಿಕ್ಷಕಿ ಸಚಿತಾ ರೈ ವಿರುದ್ಧ ಎಫ್‌ಐಆರ್‌

Kumble: ಸರಕಾರಿ ಉದ್ಯೋಗ ನೀಡುವುದಾಗಿ ಹೇಳಿ, ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿದ್ದು, ಈ ಕುರಿತು ಇದೀಗ ಸಂತ್ರಸ್ತರೊಬ್ಬರು ಶಿಕ್ಷಕಿಯ ವಿರುದ್ಧ ಕುಂಬಳೆ ಠಾಣೆಯಲ್ಲಿ ಕೇಸು ದಾಖಲು ಮಾಡಿದ್ದಾರೆ.

ಕುಂಬಳೆ ಕಿದೂರು ಪದಕ್ಕಲ್‌ ಮನೆಯ ನಿಶ್ಚಿತ ಶೆಟ್ಟಿ (21) ಎಂಬುವವರು ನೀಡಿದ ದೂರಿನ ಪ್ರಕಾರ ಕುಂಬಳೆ ಪೊಲೀಸರು ಕೇಸು ದಾಖಲು ಮಾಡಿರುವ ಕುರಿತು ವರದಿಯಾಗಿದೆ. ವಂಚನೆ ಆರೋಪ ಹೊತ್ತಿರುವ ಶಿಕ್ಷಕಿ ಸಚಿತಾ ರೈ ಅವರ ಮೇಲೆ ಕೇಸು ದಾಖಲಾಗಿದೆ.

ಡಿವೈಎಫ್‌ಐ ಸಂಘಟನೆಯಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ ಸಚಿತಾ ರೈ ಬಾಡೂರು ಎಎಲ್‌ಪಿ ಶಾಲೆಯಲ್ಲಿ ಶಿಕ್ಷಕಿಯೂ ಹೌದು. ಸಿಪಿಸಿಆರ್‌ನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ, ಮೋಸ ಮಾಡಿ, ಆಕಾಂಕ್ಷಿಗಳಿಂದ ಲಕ್ಷಗಟ್ಟಲೆ ಹಣ ಪೀಕಿಸಿದ್ದು, ಕೋಟಿಗೂ ಹೆಚ್ಚು ಹಣ ಗಳಿಸಿದ್ದಾರೆ ಎಂದು ಹೇಳಲಾಗಿದೆ.

ಸಂತ್ರಸ್ತೆ ನಿಶ್ಚಿತ ಶೆಟ್ಟಿ ಎಂಬುವವರಿಗೂ ಉದ್ಯೋಗದ ಆಮಿಷವೊಡ್ಡಿ, 15 ಲಕ್ಷಕ್ಕೂ ಹೆಚ್ಚು ಹಣ ಪಡೆದು, ಕೊನೆಗೆ ಉದ್ಯೋಗ ದೊರಕಿಸದ ಕಾರಣ ವಂಚನೆಗೊಳಗಾಗಿರುವುದು ತಿಳಿದು ಬಂದು, ಕುಂಬಳೆ ಠಾಣೆಗೆ ಸಂತ್ರಸ್ತೆ ದೂರು ನೀಡಿ, ಎಫ್‌ಐಆರ್‌ ದಾಖಲು ಮಾಡಲಾಗಿರುವ ಕುರಿತು ವರದಿಯಾಗಿದೆ.

ಒಂದು ಕಡೆ ಉದ್ಯೋಗ ನೀಡದೆ, ಇನ್ನೊಂದು ಕಡೆ ಹಣವನ್ನೂ ವಾಪಸ್‌ ನೀಡದೆ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲವರಿಗೆ ವಂಚನೆ ಮಾಡಿದ್ದು, ಒಬ್ಬರು ಮಾತ್ರ ದೂರು ನೀಡಿದ್ದಾರೆ. ಪೊಲೀಸರ ತನಿಖೆ ಮುಂದುವರಿದಿದೆ.

Leave A Reply

Your email address will not be published.