Mumtaz Ali Missing Case: ಮಾಜಿ ಶಾಸಕ ಮೊಯಿದ್ದೀನ್‌ ಬಾವ ಸಹೋದರ ನಾಪತ್ತೆ ಪ್ರಕರಣ; ಆರು ಮಂದಿ ವಿರುದ್ಧ ಎಫ್‌ಐಆರ್‌

Mumtaz Ali Missing Case: ಮಾಜಿ ಶಾಸಕ ಮೊಯಿದ್ದೀನ್‌ ಅವರ ಸೋದರ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಮುಮ್ತಾಜ್‌ ಆಲಿ ಸಹೋದರ ಹೈದರ್‌ ದೂರನ್ನು ಆಧರಿಸಿ ರೆಹಮತ್‌, ಅಬ್ದುಲ್‌ ಸತ್ತಾರ್‌, ಶಾಫಿ, ಮುಸ್ತಫಾ, ಶೋಯೆಬ್‌ ಹಾಗೂ ಸಿರಾಜ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಮುಮ್ತಾಜ್‌ ಅಲಿ ಅವರ ಗೌರವ ಹಾಳು ಮಾಡಲು ಮಹಿಳೆಯನ್ನು ಬಳಸಿಕೊಂಡು ಷಡ್ಯಂತ್ರ ರೂಪಿಸಿ ಮುಮ್ತಾಜ್‌ ಆಲಿ ಅವರಿಗೆ ಅಕ್ರಮ ಸಂಬಂಧ ಇದೆ ಎಂದು ರೆಹಮತ್‌ ಸುಳ್ಳು ಪ್ರಚಾರ ಮಾಡಿ ಬೆದರಿಕೆ ಹಾಕಿದ್ದಾನೆ. 2024 ರ ಜುಲೈನಿಂದ ಇಲ್ಲಿಯವರೆಗೆ 50 ಲಕ್ಷ ರೂ. ಹಣವನ್ನು ಮುಮ್ತಾಜ್‌ ಅಲಿ ಅವರಿಂದ ವಸೂಲಿ ಮಾಡಿದ್ದಾರೆ. ಮಹಿಳೆ ಇದರಲ್ಲಿ 25 ಲಕ್ಷ ರೂ. ಹಣವನ್ನು ಚೆಕ್‌ ಮೂಲಕ ಪಡೆದಿದ್ದಾಳೆ.

ಸತ್ತಾರ್‌ ಎಂಬಾತ ಮುಮ್ತಾಜ್‌ ಅಲಿಗೆ ಅಕ್ರಮ ಸಂಬಂಧವಿದೆ ಎಂದು ನಿರಂತರ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದು, ರಾಜಕೀಯ ವಿರೋಧಿ ಕೂಡಾ ಆಗಿದ್ದಾನೆ. ಜೀವ ಬೆದರಿಕೆ ಕೂಡಾ ಮುಮ್ತಾಜ್‌ ಅಲಿಗೆ ನೀಡಿದ್ದಾನೆ. ಹೀಗಾಗಿ ಮುಮ್ತಾಜ್‌ ಅಲಿ ಮೆಸೇಜ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರ ಹೈದರ್‌ ದೂರು ನೀಡಿದ್ದಾರೆ.

ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.