Pepper Plant: ಕರಾವಳಿಯಲ್ಲಿ ಕಾಳು ಮೆಣಸಿನ ಗಿಡಗಳಿಗೆ ಭರ್ಜರಿ ಬೇಡಿಕೆ: ರೋಗ ರಹಿತ ಗಿಡಗಳ ದರ ಏರಿಕೆ
Pepper Plant: ಕೃಷಿಕರ ಪಾಲಿನ ಕಪ್ಪು ಬಂಗಾರ(Black Gold) ಎಂದೇ ಪರಿಗಣಿತವಾಗಿರುವ ಕಾಳುಮೆಣಸಿನ(Black Pepper) ಧಾರಣೆ ಏರಿಕೆಯ(Price hike) ಹಾದಿಯಲ್ಲಿದೆ. ಇದೇ ಕಾರಣದಿಂದ ದಕ್ಷಿಣ ಕನ್ನಡ(Dakshina Kannada) ಸೇರಿದಂತೆ ಕರಾವಳಿಯ(Coastal) ಎಲ್ಲೆಡೆ ಕಾಳುಮೆಣಸಿನ ಬಳ್ಳಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಗುಣಮಟ್ಟದ ಬಳ್ಳಿಗಳ ಕೊರತೆ, ಬಳ್ಳಿಗಳ ಬೆಲೆ ಏರಿಕೆಯೂ ಕೃಷಿಕರನ್ನು ಕಾಡಿದೆ.
ಯಾಕೆ ಬೇಡಿಕೆ ಜಾಸ್ತಿ ಕಳೆದ ಹಲವು ವರ್ಷಗಳಿಂದ ಕಾಳುಮೆಣಸು ಧಾರಣೆಯಲ್ಲಿ ಸ್ಥಿರತೆ ಕಂಡುಕೊಂಡಿದೆ. ಇದರಿಂದಾಗಿ ರಾಜ್ಯದೆಲ್ಲೆಡೆ ಕಾಳುಮೆಣಸು ಬೆಳೆಯುವವರ ಸಂಖ್ಯೆ ಜಾಸ್ತಿಯಾಗಿದೆ. ಇನ್ನು ಸುಳ್ಯ ಸೇರಿದಂತೆ ಹಲವು ಭಾಗಗಳಲ್ಲಿ ಅಡಕೆಗೆ ಹಳದಿರೋಗ, ಎಲೆಚುಕ್ಕಿರೋಗಕಾಣಿಸಿಕೊಂಡಿದ್ದು, ರೈತರು ಅಡಿಕೆಗೆ ಪಾಯವಾಗಿ ಕಾಳುಮೆಣಸು ಕೃಷಿಗೆ ಮುಂದಾಗಿದ್ದಾರೆ, ಈ ಹಿಂದೆ ಕಾಳುಮೆಣಸು ನಿರ್ವಹಣೆ ಕಷ್ಟ ಎಂದು ಬೆಳೆ ಕುರಿತು ನಿರ್ಲಕ್ಷ್ಯ ಮಾಡಿದ್ದವರೂ ಮತ್ತೆ ಕಾಳುಮೆಣಸು ಬಳ್ಳಿ ನಾಟಿಗೆ ಮುಂದಾಗಿದ್ದಾರೆ ಎನ್ನುತ್ತಾರೆ ಕಾಳುಮೆಣಸಿನ ಕೃಷಿಯಲ್ಲಿ ಅಗಾಧ ಪರಿಣಿತಿ ಹೊಂದಿರುವ ಕೃಷಿಕ ಸುರೇಶ್ ಬಲ್ನಾಡ್.
*ರೋಗ ರಹಿತ ಬಳ್ಳಿಗಳ ಕೊರತೆ*
ನಮ್ಮ ಪ್ರದೇಶದಲ್ಲಿ ನಾಟಿಗೆ ಗುಣಮಟ್ಟದ ಕಾಳುಮೆಣಸು ಬಳ್ಳಿಗಳ ಕೊರತೆ ಕಾಡುತ್ತಿದೆ. ಈ ಬಗ್ಗೆ ಕೃಷಿಕರು ಎಚ್ಚರವಹಿಸಬೇಕು. ನಾನು ಕಳೆದ 2 ವರ್ಷದ ಹಿಂದೆ ಸ್ನೇಹಿತರೊಬ್ಬರು ನೀಡಿದ 100 ಬಳ್ಳಿಗಳನ್ನು ನಾಟಿ ಮಾಡಿದ್ದು, ಪ್ರಸ್ತುತ ಆ ಬಳ್ಳಿಗಳಲ್ಲಿ ಕೆಲವು ವೈರಸ್ ಠಾಣಿಸಿಕೊಂಡಿರುವ ಕಾರಣ ಮಣ್ಣಿನಲ್ಲಿ ಹೂತು ನಾಶಮಾಡಿದ್ದೇನೆ. ಈ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕು ಎನ್ನುತ್ತಾರೆ ಬಾಡ್.
ಕಾಳು ಮೆಣಸು ಕೃಷಿ ಮಾಡುವವರ ಸಂಖ್ಯೆ ವಿರುತ್ತಿದ್ದಂತೆ ಕರಾವಳಿಯ ನರ್ಸರಿಗಳಲ್ಲಿ ಕಾಳುಮೆಣಸು ಬಳ್ಳಿಗಳ ಕೊರತೆ ಕಾಡುತ್ತಿದೆ. ಇದೇ ವೇಳೆ ಘಟ್ಟಪ್ರದೇಶದಿಂದ ವೈರಸ್ ಪೀಡಿತ ಬಳ್ಳಿಗಳ ಅವಕ ಹೆಚ್ಚಾಗಿದೆ. ಭಟ್ಟದಿಂದ ಬಂದ ಗಿಡಗಳ ತೊಟ್ಟೆಯಲ್ಲಿರುವ ಮಣ್ಣು ಮತ್ತು ಬಳ್ಳಿಯಲ್ಲಿ ವೈರಸ್ಗಳಿದ್ದು, ಬಳ್ಳಿ ನಾಟಿ ಮಾಡಿ ಎರಡು ವರ್ಷದಲ್ಲಿ ರೋಗ ಕಾಣಿಸಿಕೊಂಡು ಫಸಲು ಕಡಿಮೆಯಾಗುತ್ತಾ ಬರುತ್ತದೆ. ಶಿರಸಿ ಭಾಗದಲ್ಲಿ ರೋಗವಿಲ್ಲ. ಕರ್ನಾಟಕದಲ್ಲಿ ಶಿರಸಿ ಭಾಗದಲ್ಲಿ ಕಾಳುಮೆಣಸಿಗೆ ರೋಗ ಕಾಣಿಸಿಕೊಂಡಿಲ್ಲ ಆದರೆ ಆ ಭಾಗದ ನರ್ಸರಿ ಯಲ್ಲಿಯೂ ಕಾಳುಮೆಣಸಿನ ಗಿಡಗಳಿಲ್ಲ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
*ರೇಟ್ ಎಷ್ಟು*
ಪ್ರಸ್ತುತ ಕಾಳುಮೆಣಸಿಗೆ 620ರವರೆಗೆ ದರವಿರುವುದು ಕೃಷಿಕದಲ್ಲಿ ಹೊಸ ಗಿಡಗಳ ನಾಟಿ ಕುರಿತು ಉತ್ಸಾಹ ಮೂಡಿಸಿದೆ.
*ವಿವಿಧ ರೋಗಗಳು*
ಕಾಳುಮೆಣಸಿಗೆ ಸ್ಪಂಟ್ ವೈರಸ್, ಹಳದಿ ರೋಗ ಕೊಳೆರೋಗ ಬಾಧೆ ಕಾಡುತ್ತಿದೆ. ಸ್ಟಂಟ್ ವೈರಸ್ ಕೇರಳದಲ್ಲಿ ಈ ಬಾಧೆ ವ್ಯಾಪಕವಾಗಿದ್ದು, ಅಲ್ಲಿಂದ ಸಕಲೇಶಪುರ ಭಾಗಕ್ಕೆ ಪಸರಿಸಿದೆ. ಕಾಳುಮೆಣಸಿನ ಕಟ್ಟಿಂಗ್ಸ್ ಮುಂಜಾಗ್ರತೆಯಿಲ್ಲದೆ ತಂದಲ್ಲಿ ಉತ್ತಮ ಬಳ್ಳಿಗಳಿಗೂ ರೋಗ ಹರಡಲಿದೆ.
Pretty! This has been a really wonderful post. Many thanks for providing these details.