Home Crime Mangaluru: ಸುರತ್ಕಲ್ ನಲ್ಲಿ ಪವಿತ್ರ ಗೌಡ, ರೇಣುಕಾ ಸ್ವಾಮಿ ಮಾದರಿಯ ಕೇಸ್ ಪತ್ತೆ – 19ರ...

Mangaluru: ಸುರತ್ಕಲ್ ನಲ್ಲಿ ಪವಿತ್ರ ಗೌಡ, ರೇಣುಕಾ ಸ್ವಾಮಿ ಮಾದರಿಯ ಕೇಸ್ ಪತ್ತೆ – 19ರ ಯುವತಿಗೆ ಅಶ್ಲೀಲ ಫೋಟೋ, ಮೆಸೇಜ್ ಕಳಿಸಿ ಅನ್ಯಕೋಮಿನವನಿಂದ ಕಿರುಕುಳ

Hindu neighbor gifts plot of land

Hindu neighbour gifts land to Muslim journalist

Mangaluru: ರೇಣುಕಾ ಸ್ವಾಮಿ, ಪವಿತ್ರ ಗೌಡ ಕೇಸ್ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿ ಇದೀಗ ತನಿಖೆಯ ಹಾದಿಯಲ್ಲಿ ಸಾಗುತ್ತಿದೆ. ಆದರೆ ಈ ಬೆನ್ನಲ್ಲೇ ದ. ಕ(Dakshina Kannada) ಜಿಲ್ಲೆಯ ಸುರತ್ಕಲ್ ಬಳಿ ಪವಿತ್ರ ಗೌಡ(Pavitra Gouda) ಅವರ ಕೇಸಿಗೆ ಹೋಲುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು, ಸುರತ್ಕಲ್(Suratkal) ಸಮೀಪದ ಕೃಷ್ಣಾಪುರದಲ್ಲಿ ನಟಿ ಪವಿತ್ರ ಗೌಡ ಕೇಸಿನ ರೀತಿಯೇ ಪ್ರಕರಣ ನಡೆದಿದ್ದು, ಮಂಗಳೂರಿನಲ್ಲಿ ಶಿಕ್ಷ,ಣ ಪಡೆಯುತ್ತಿರುವ ಯುವತಿಗೆ ಯುವಕನೊಬ್ಬ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

19 ವರ್ಷ ಯುವತಿ ಈ ಹಿಂದೆ ಸುರತ್ಕಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಮಂಜನಾಡಿ ಬಳಿಯ ಮೊಹಮ್ಮದ್ ಶಾಕಿಬ್ ಎಂಬಾತ ಚೊಕ್ಕಬೆಟ್ಟಿನ ಸ್ನೇಹಿತೆಯ ಬಳಿಯಿಂದ ನಂಬರ್‌ ಪಡೆದುಕೊಂಡು ಯುವತಿಗೆ ಪ್ರತಿದಿನ ಮೆಸೇಜ್‌ ಮಾಡುತ್ತಿದ್ದ. ಯುವತಿಯ ಹಿಂದೆ ಬಿದ್ದಿದ್ದ ಶಾಕಿಬ್‌ ಆಕೆಗೆ ವಾಟ್ಸಾಪ್‌ನಲ್ಲಿ ಪ್ರತಿದಿನ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದ. ಅಲ್ಲದೆ ತನ್ನ ಮರ್ಮಾಂಗದ ಚಿತ್ರವನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಸದ್ಯ ಈ ವಿಚಾರವನ್ನು ಯುವತಿ ಪೋಷಕರಿಗೆ ತಿಳಿಸಿದ್ದು, ಬಳಿಕ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ, ದೂರು ಸ್ವೀಕರಿಸಿದ ಪೊಲೀಸರು ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಶಾಕಿಬ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಇನ್ನು ಇದರಿಂದಾಗಿ ಮಾನಸಿಕವಾಗಿ ನೊಂದ ಯುವತಿ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಆಕೆ ಕಡಿಮೆ ರಕ್ತದೊತ್ತಡದ ಸಮಸ್ಯೆಗೂ ಒಳಗಾಗಿ ಕಾಲೇಜಿಗೂ ಹೋಗಲಾಗದೆ ಮನೆಯಲ್ಲಿಯೇ ಉಳಿಯುವಂತ ಸ್ಥಿತಿಗೆ ಬಂದಿದ್ದಾಳೆ ಎನ್ನಲಾಗಿದೆ.