Mahant Ramgiri Maharaj: ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ವಿರುದ್ಧ 67 FIR!

Mahant Ramgiri Maharaj: ಇಸ್ಲಾಂ ಧರ್ಮ ಮತ್ತು ಪ್ರವಾದಿ ಮೊಹಮ್ಮದ್‌ರ (Prophet Mohammed) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ ರಾಜ್ಯಾದ್ಯಂತ ಸುಮಾರು 67 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ (Bombay High Court) ಹೇಳಿದೆ.

ಹೌದು, ಮಹಂತ್ ರಾಮಗಿರಿ ಮಹಾರಾಜ್ (Mahant Ramgiri Maharaj) ಅವರು ನೀಡಿದ ಅವಹೇಳಕಾರಿ ಹೇಳಿಕೆಗಳನ್ನು ಎಲ್ಲ ಸೋಶಿಯಲ್ ಮೀಡಿಯಾದಿಂದ ಸೈಬರ್ ಕ್ರೈಂ ಪೊಲೀಸರು (Cyber Crime Police) ತೆಗೆದುಹಾಕುತ್ತಿದ್ದಾರೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ರಾಮಗಿರಿ ಮಹಾರಾಜರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವ ಬದಲು ಸಿಎಂ, ಏಕನಾಥ್ ಶಿಂಧೆ ಮಹಂತ್ ರಾಮಗಿರಿ ಮಹಾರಾಜ್ ಅವರೊಂದಿಗೆ ವೇದಿಕೆ ಹಂಚಿಕೊಂಡು ರಾಜ್ಯದಲ್ಲಿ ಸಂತರಿಗೆ ರಕ್ಷಣೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಅವಹೇನಕಾರಿ ಹೇಳಿಕೆ ನೀಡಲು ಪ್ರಚೋದನೆ ನೀಡದಂತಾಗಲಿದೆ ಹೀಗಾಗೀ ಅವರು ವಿರುದ್ಧವೂ ದೂರು ದಾಖಲಿಸಬೇಕು ವಕೀಲ ಎಜಾಜ್ ನಖ್ವಿ ತಿಳಿಸಿದ್ದಾರೆ.

ಸದ್ಯ ದ್ವೇಷದ ಭಾಷಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ಪೀಠವು, ನಾವು ಭಾಷಣ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ, ಆದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಅವರು ಸಾಧ್ಯವಿರುವ ಕಡೆ ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದಾರೆ ಎಂದು ತಿಳಿಸಿದೆ.

ಅಲ್ಲದೇ ಸಿಎಂ ಸ್ವಾಮಿಜಿ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ. ಅವರು ಕಾನೂನು ಉಲ್ಲಂಘಿಸಿರುವ ಬಗ್ಗೆ ಸಾಕ್ಷ್ಯಗಳನ್ನು ನೀಡಿದರೆ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ. ಅದಲ್ಲದೆ ವೀಡಿಯೊಗಳನ್ನು ತೆಗೆದುಹಾಕುವುದು ನಿಮ್ಮ ಮುಖ್ಯ ವಿಷಯ ಅಲ್ಲವೇ ಎಂದು ಕೋರ್ಟ್ ಪ್ರಶ್ನಿಸಿತು. ಈ ಕುರಿತು ಕೋರ್ಟ್ ಅಕ್ಟೊಬರ್ 17 ಕ್ಕೆ ವಿಚಾರಣೆ ಮುಂದೂಡಿದೆ.

Leave A Reply

Your email address will not be published.