Beef Meat: ಮಾಜಿ ಸಚಿವರ ಕಾರ್ಮಿಕನ ಮನೆಯಲ್ಲಿ ಗೋ ಮಾಂಸ: ಆರೋಪಿ ಎಲ್ಲೋದಾ?

Beef Meat: ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕು ಕುಂಬೂರು ಬಿಳಿಗೇರಿಯ ಮಾಜಿ ಸಚಿವರ ಅಸ್ಸಾಂ ಮೂಲದ ಕಾರ್ಮಿಕರಿದ್ದ ತೋಟದ ಲೈನ್ ಮನೆಯಲ್ಲಿ ಗೋಮಾಂಸವಿರುವುದನ್ನು ಸ್ಥಳೀಯ ಹಿಂದೂಪರ ಕಾರ್ಯಕರ್ತರು ಪತ್ತೆಹಚ್ಚಿ ಪೋಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಪೋಲೀಸರು ದಾಳಿ ನಡೆಸಿ ಗೋಮಾಂಸವನ್ನು ವಶಕ್ಕೆ ಪಡೆದಿರುತ್ತಾರೆ. ಆದರೆ ಆರೋಪಿಗಳು ಸ್ಥಳದಿಂದ ತಪ್ಪಿಸಿಕೊಂಡಿರುತ್ತಾರೆ.

ಕೊಡಗು ಜಿಲ್ಲೆಯಲ್ಲಿ ಹೊರ ರಾಜ್ಯದ ಕಾರ್ಮಿಕರು ಪದೇ ಪದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದು ಅಂತವರ ವಿರುದ್ಧ ಪೋಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಸ್ದಳೀಯ ಹಿಂದೂಪರ ಕಾರ್ಯಕರ್ತರು ಆಗ್ರಹಿಸಿರುತ್ತಾರೆ.