Shocking News: ರಾತ್ರಿ ವೇಳೆ ಸ್ಲೀಪರ್ ಬಸ್ಸಲ್ಲಿ ಕೇಳಿತು ಮುಲುಗುವ, ನರಳುವ ಶಬ್ದ – ಬೆನ್ನಟ್ಟಿದ ಪೋಲೀಸರು, ಸಿಬ್ಬಂದಿಗಳಿಗೆ ಕಾದಿತ್ತು ದೊಡ್ಡ ಅಘಾತ !!
Shocking News: ಚೆನ್ನೈ (Chennai) – ಬೆಂಗಳೂರು (Bangalore news) ನಡುವೆ ರಾತ್ರಿವೇಳೆ ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ಸೊಂದರ (Sleeper bus) ಪ್ರಯಾಣಿಕರಿಗೆ ಮಲಗಿದಾಗ ಬಸ್ಸಿನ ಒಂದು ಬರ್ತ್‌ನಲ್ಲಿ ವಿಚಿತ್ರ ಸದ್ದುಗಳು ಕೇಳಿಸಿದ್ದು, ಬೆನ್ನು ಹತ್ತಿ ಬಂದು ನೋಡಿದ ಪೋಲಿಸರಿಗೆ ಶಾಕ್ ಎದುರಾಗಿದೆ.
ಬಸ್ಸಿನಲ್ಲಿ ಕರ್ಟನ್‌ಗಳು ಮುಚ್ಚಿದ್ದ ಬರ್ತ್‌ನಲ್ಲಿ ನರಳಾಟ, ಮುಲುಗಾಟ ಕೇಳಿಬಂದಿದ್ದು ಪ್ರಯಾಣಿಕರು ಮುಜುಗರಪಟ್ಟುಕೊಂಡಿದ್ದಾರೆ. ಬೆಳಗ್ಗೆ ಆ ಬರ್ತ್ ನ ಪ್ರಯಾಣಿಕರು ಎದ್ದು ಹೋದ ಬಳಿಕ ಬರ್ತ್ ಪರಿಶೀಲಿಸಿದ ಬಸ್ಸಿನ ಸಿಬ್ಬಂದಿಗೆ ಅಲ್ಲಿ ಬಳಸಿದ ಕಾಂಡೋಮ್ ಕಂಡುಬಂತು. ಆಗ ರಾತ್ರಿ ಏನು ನಡೆದಿತ್ತು (viral news) ಎಂಬುದು ಸ್ಪಷ್ಟವಾಗಿದೆ. ಇದು ಸಾರ್ವಜನಿಕ ಸ್ಥಳಗಳಲ್ಲಿ ಅಕ್ಷಮ್ಯ ಅಪರಾಧವಾಗಿದ್ದರೂ ಯಾರೋ ದಂಪತಿಗಳು, ಕಪಲ್ಸ್ ಗಳು ತಿಳಿಯದೆ ಮಾಡಿದ್ದಾರೆ ಎಂದು ಸುಮ್ಮನಾಗಬಹುದಿತ್ತು. ಆದರೆ ಅಚ್ಚರಿ ಏನಂದರೆ ಇದು ಸುಮ್ಮನಾಗುವ ವಿಚಾರವಲ್ಲ. ಯಾಕೆಂದರೆ ಇದೊಂದು ದಂಧೆ ಎಂಬುದು ಬಳಿಕ ಗೊತ್ತಾಗಿದೆ.
ಹೌದು, ಇಂಥ ಅನುಭವಗಳು ಚೆನ್ನೈ- ಹೈದರಾಬಾದ್, ಚೆನ್ನೈ- ಕೊಚ್ಚಿ ಹೋಗುವ ಬಸ್ಸುಗಳಲ್ಲಿ ಹಲವು ಪ್ರಯಾಣಿಕರಿಗೆ ಆಗಿವೆ. ಮಹಾನಗರಗಳ ನಡುವೆ ರಾತ್ರಿ ಬಸ್ಸುಗಳಲ್ಲಿ ಪ್ರಯಾಣಿಸುವ ಹಲವರು ಈ ಅಹಿತಕರ ಅನುಭವದ ಬಗ್ಗೆ ದೂರಿದ್ದಾರೆ. ಇಂಥ ಹಲವು ಅನುಭವಗಳ ಬಳಿಕ ಕೆಲವು ಬಸ್ ಆಪರೇಟರ್‌ಗಳು ಪೊಲೀಸರನ್ನು ಸಂಪರ್ಕಿಸಿದಾಗ ಪ್ರಕರಣಗಳ ಬೆನ್ನು ಬಿದ್ದ ಪೊಲೀಸರಿಗೆ ಶಾಕ್ ಕಾದಿತ್ತು.
ಅದೇನೆಂದರೆ ವೇಶ್ಯಾವಾಟಿಕೆ ದಂಧೆ ರಾತ್ರಿ ಬಸ್ಸುಗಳಿಗೂ ತನ್ನ ಬಾಹುಗಳನ್ನು ಚಾಚಿದೆ !! ಇದು ʼದಾರಿಗೊಬ್ಬ ಸಂಗಾತಿʼ ಒದಗಿಸುವ ದಂಧೆಯಾಗಿದೆ. ಇಂಥ ಕೆಲವು ಶಂಕಿತ ಜೋಡಿಗಳನ್ನು ಪ್ರಶ್ನಿಸಿದಾಗ, ಅವರು ತಾವು ಒಪ್ಪಿತ ಸಂಗಾತಿಗಳೆಂದೇ ಸಾಧಿಸಿದ್ದಾರೆ. ಇದು ನಿಜಕ್ಕೂ ದಂಧೆಯೇ ಆಗಿದ್ದು ಪೋಲಿಸರಿಗೆ ಸರಿಯಾದ ಸಾಕ್ಷಿಗಳು ಸಿಗದೆ ಇದನ್ನು ಭೇಧಿಸಲಾಗಿಲ್ಲ ಎಂದು ಬಳಿಕ ತಿಳಿದಿದೆ.
ಇಲ್ಲಿ ಸಂವಹನಕ್ಕೆ ಗಿರಾಕಿಗಳು ಮತ್ತು ಏಜೆಂಟರು ಚಾಟ್ ಆಪ್‌ಗಳನ್ನು ಬಳಸುತ್ತಾರಂತೆ. ಪಿಂಪ್‌ಗಳು ಗಿರಾಕಿಗಳಿಗೆ ಹುಡುಗಿಯರ ಫೋಟೋಗಳನ್ನು ಕಳಿಸಿ ಬುಕ್ ಮಾಡುತ್ತಾರೆ. ಒಂದು ʼಟ್ರಿಪ್ʼಗೆ 2000ದಿಂದ 10000ದವರೆಗೂ ಯುಪಿಐ ಮೂಲಕ ಪೀಕುತ್ತಾರೆ. ನಂತರ ಏಜೆಂಟರು ನೈಟ್ ಸ್ಲೀಪರ್ ಬಸ್ಸುಗಳ ಡಬಲ್ ಬರ್ತ್‌ಗಳನ್ನು ಬುಕ್ ಮಾಡುತ್ತಾರೆ. ಹೆಚ್ಚಾಗಿ ಇವು ಬಸ್ಸಿನ ಹಿಂದಿನ ಬರ್ತುಗಳಾಗಿತ್ತವೆ. ಗಂಡು- ಹೆಣ್ಣು ಗಂಡ ಹೆಂಡತಿಯರಂತೆ ನಟಿಸಿ ಬಸ್ಸು ಏರುತ್ತಾರೆ. ಸಿಬ್ಬಂದಿಗೆ ಇದರ ಅರಿವೇ ಇರುವುದಿಲ್ಲ. ಬಸ್ಸು ಹೊರಟ ಬಳಿಕ ಕರ್ಟನ್ ಮುಚ್ಚಿಕೊಂಡ ಈ ಜೋಡಿಯ ರತಿಕ್ರೀಡೆ ನಡೆಯುತ್ತದೆ.
ಪೊಲೀಸರ ಪ್ರಕಾರ ಇದರ ಹೆಚ್ಚಿನ ಗಿರಾಕಿಗಳು, ಕೆಲಸದ ನಿಮಿತ್ತವಾಗಿ ಊರೂರು ಸುತ್ತುವ ಉದ್ಯೋಗಿಗಳು. ದೈಹಿಕ ಸುಖಕ್ಕಾಗಿ ಲಾಡ್ಜ್‌ಗಳಿಗೆ ಹೋಗುವುದಕ್ಕಿಂತಲೂ ಅವರಿಗೆ ಇದೇ ಸುರಕ್ಷಿತವಂತೆ. ಬಸ್ಸಿನವರು ಯಾವುದೇ ಸರ್ಕಾರಿ ಐಡಿ ಕಾರ್ಡಿಗಾಗಿ ಒತ್ತಾಯಿಸದ ಹಿನ್ನೆಲೆಯಲ್ಲಿ, ಇಂಥ ಪ್ರಕರಣಗಳಲ್ಲಿ ಪಾಲ್ಗೊಂಡವರನ್ನು ಹುಡುಕುವುದು ಪೊಲೀಸರಿಗೆ ಕಷ್ಟವಾಗುತ್ತದೆ.
ಅಲ್ಲದೆ ಈ ಕುರಿತು ಪ್ರತಿಕ್ರಿಯಿಸುವ ಬಸ್ಸಿನ ಸಿಬ್ಬಂದಿಗಳು ‘ಕೆಲವೊಮ್ಮೆ ಇಂಥ ಬರ್ತ್‌ಗಳಲ್ಲಿ ಕಾಂಡೋಮ್, ಲಿಕ್ಕರ್ ಬಾಟಲಿಗಳು ಸಿಕ್ಕಿದ್ದುಂಟು. ಇಂಥ ಬೆಡ್‌ಶೀಟ್‌ಗಳನ್ನು ಕೂಡಲೇ ತೊಳೆಯಲು ಕಳುಹಿಸಬೇಕಾಗುತ್ತದೆ” ಎನ್ನುತ್ತಾರೆ ಚೆನ್ನೈ- ಬೆಂಗಳೂರು ಸಿಬ್ಬಂದಿಯೊಬ್ಬರು. ಸಿಕ್ಕಿಬಿದ್ದರೆ ಇವರು ತಾವು ಮದುವೆಯಾದ ಜೋಡಿ ಎಂದು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಅದನ್ನು ಪ್ರೂವ್ ಮಾಡಲು ಬೇಕಾದ ದಾಖಲೆ ಅವರಲ್ಲಿರುವುದಿಲ್ಲ. ಆದರೆ ತಾವು ರಿಲೇಷನ್‌ನಲ್ಲಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ’ ಎಂದಿದ್ದಾರೆ. ಅಲ್ಲದೆ ಒಬ್ಬಳೇ ಮಹಿಳೆ ಹಲವು ಪುರುಷರ ಜೊತೆಗೆ ಪ್ರಯಾಣಿಸುವುದನ್ನು ಕೆಲವೊಮ್ಮೆ ಗಮನಿಸಿದ್ದೇವೆ ಎನ್ನುತ್ತಾರೆ.
ಇಷ್ಟು ಮಾತ್ರವಲ್ಲದೆ ಈ ರೀತಿ ಪ್ರಕರಣಗಳು ಕಂಡುಬಂದಾಗ ಇವರನ್ನು ಪ್ರಶ್ನಿಸಿದರೆ ಹಿಂಸಾತ್ಮಕವಾಗಿ ವರ್ತಿಸುತ್ತಾರೆ. ಮಾತ್ರವಲ್ಲದೆ ಟಿಕೆಟ್ ಬುಕಿಂಗ್ ಪ್ಲ್ಯಾಟ್‌ಫಾರಂಗಳಲ್ಲಿ ಈ ಬಸ್ಸುಗಳ ಬಗ್ಗೆ ನೆಗೆಟಿವ್ ರಿವ್ಯೂಗಳನ್ನು ಬರೆಯುತ್ತಾರೆ ಎಂದು ಸಿಬ್ಬಂದಿಗಳು, ಬಸ್ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.