Home News Tata Electronics: ಭಾರೀ ಅಗ್ನಿ ಅವಘಡ!: ಟಾಟಾ ಕಂಪನಿ ಉರಿದು ಭಸ್ಮ

Tata Electronics: ಭಾರೀ ಅಗ್ನಿ ಅವಘಡ!: ಟಾಟಾ ಕಂಪನಿ ಉರಿದು ಭಸ್ಮ

Hindu neighbor gifts plot of land

Hindu neighbour gifts land to Muslim journalist

Tata Electronics: ತಮಿಳುನಾಡಿನ ಹೊಸೂರು ಬಳಿಯ ಕೂಟನಹಳ್ಳಿ ಗ್ರಾಮದಲ್ಲಿರುವ ಟಾಟಾ ಕಂಪನಿಯಲ್ಲಿ (Tata Electronics) ಬೆಳಗಿನ ಜಾವ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಕಂಪನಿ ಧಗಧಗನೇ ಹೊತ್ತಿ ಉರಿದಿದೆ.

ಕಾರು ಮತ್ತು ಫೋನ್‌ಗಳ ಬಿಡಿಭಾಗಗಳನ್ನು ತಯಾರಿಸುವ ಈ ಟಾಟಾದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕದೊಳಗಿನ ರಾಸಾಯನಿಕ ಘಟಕದಲ್ಲಿ ಬೆಂಕಿ  ಕಾಣಸಿಕೊಂಡಿದ್ದು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ರಾಯಕೋಟೆ ಮತ್ತು ಡೆಂಕಣಿಕೋಟೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಐದಕ್ಕೂ ಹೆಚ್ಚು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸಲು ಹರಾಸಾಹಸ ಪಟ್ಟಿದೆ. ಆದ್ರೆ ಅಷ್ಟರಲ್ಲಿ ಕಂಪನಿ ಬೆಂಕಿಯಲ್ಲಿ ಭಸ್ಮ ಆಗಿದೆ.

ಕಂಪನಿಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅದಲ್ಲದೆ ಈ ವೇಳೆ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಂಡ ಕೂಡಲೇ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.