Pro Kabbaddi: ಈ ವರ್ಷದ 11ನೇ ಪ್ರೊ ಕಬ್ಬಡಿ ಲೀಗ್ ಉದ್ಘಾಟನಾ ಪಂದ್ಯಗಳ ವೇಳಾಪಟ್ಟಿ ಘೋಷಣೆ

Pro Kabbaddi: 2014ರಲ್ಲಿ ಆರಂಭವಾದ IPKL: ಇಂಡಿಯನ್ ಪ್ರೊ ಕಬಡ್ಡಿ ಲೀಗ್ ಇಲ್ಲಿಗೆ ಒಂದು ದಶಕಗಳನ್ನು ಪೂರೈಸಿ 11ನೇ ಸೀಸನ್ಗೆ ಭರ್ಜರಿ ಸಿದ್ಧತೆಗಳೊಂದಿದೆ ಕಾಲಿಡುತ್ತಿದೆ.ಅಕ್ಟೋಬರ್ 18 ರಂದು ಹೈದೆರಾಬಾದ್ನಲ್ಲಿರುವ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯಗಳು ನಡೆಯಲಿವೆ . ಮೊದಲ ಪಂದ್ಯವನ್ನು ಆತಿಥೇಯ ತೆಲುಗು ಟೈಟಾನ್ಸ್ ತಂಡವು ಬೆಂಗಳೂರು ಬುಲ್ಸ್ ವಿರುದ್ಧ ಹೋರಾಡಿದರೆ, ದಿನದ ಎರಡನೇ ಮುಖಾಮುಖಿಯಲ್ಲಿ ದಬಾಂಗ್ ಡೆಲ್ಲಿ ತಂಡವು ಯು ಮುಂಬಾ ವಿರುದ್ಧ ಕಣಕ್ಕಿಳಿಯುತ್ತದೆ.ಒಟ್ಟಾರೆ ಈ ಸೀಸಸ್ ಮೂರು ಹಂತಗಳಲ್ಲಿ ನಡೆಯುತ್ತಿದೆ.

ಈ ಸೀಸನ್ನ ಮೊದಲೇ ಹಂತ ಹೈದರಾಬಾದ್ನಲ್ಲಿ ಅಕ್ಟೋಬರ್ 1ರಂದು ಪ್ರಾರಂಭವಾಗಲಿದ್ದು, ನವೆಂಬರ್ 9ಕ್ಕೆ ಮುಕ್ತಾಯಗೊಳ್ಳಲಿದೆ.

ಎರಡನೇ ಹಂತ ನೋಯ್ಡಾದ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿದೆ .ನವೆಂಬರ್ 10ರಿಂದ ಡಿಸೆಂಬರ್ 1ರ ವರೆಗೆ ನಡೆಯುತ್ತದೆ .

ಬಾಳೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣವು ಪ್ರೊ ಕಬಡ್ಡಿ ಲೀಗ್ ಸೀಸನ್ 11 ರ ಮೂರನೇ ಅಂದರೆ ಕೊನೆಯ ಹಂತವನ್ನು ಡಿಸೆಂಬರ್ 3 ರಿಂದ ಡಿಸೆಂಬರ್ 24ರ ವರೆಗೆ ಆಯೋಜಿಸಲಿದೆ.ಪ್ರತಿ ದಿನ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವನ್ನು ರಾತ್ರಿ 8:00 IST ಕ್ಕೆ ಮತ್ತು ಎರಡನೇ ಪಂದ್ಯವನ್ನು ರಾತ್ರಿ 9:00 IST ಕ್ಕೆ ನಿಗದಿಪಡಿಸಲಾಗಿದೆ.

ಪ್ರತಿ ತಂಡವು ಕನಿಷ್ಠ 22 ಪಂದ್ಯಗಳನ್ನು ಆಡುತ್ತದೆ, ಲೀಗ್ ಹಂತದಲ್ಲಿ ಪ್ರತಿ ತಂಡದ ವಿರುದ್ಧ ಎರಡು ಬಾರಿ ಆಡುತ್ತದೆ. ಲೀಗ್ ಹಂತದ ಕೊನೆಯಲ್ಲಿ ಅಗ್ರ ಆರು ತಂಡಗಳು PKL 2024 ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯುತ್ತವೆ.PKL 2024 ಪ್ಲೇಆಫ್‌ಗಳ ದಿನಾಂಕಗಳು ಮತ್ತು ಸ್ಥಳವನ್ನು ಲೀಗ್ ಹಂತದ ಮುಕ್ತಾಯದ ಹತ್ತಿರದಲ್ಲಿ ಘೋಷಿಸಲಾಗುತ್ತದೆ.

ಹೈದರಾಬಾದ್ ಗಚಿಬೌಲಿ ಒಳಾಂಗಣ ಕ್ರೀಡಾಂಗಣ 18-ಅಕ್ಟೋಬರ್ ಶುಕ್ರವಾರ ದಂದು ತೆಲುಗು ಟೈಟಾನ್ಸ್ vs ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ vs ಯು ಮುಂಬಾ ಕ್ರಮವಾಗಿ ನಡೆಯುತ್ತಿವೆ.IPKL-2024: ಇಂಡಿಯನ್ ಪ್ರೀಮಿಯರ್ ಕಬಡ್ಡಿ ಲೀಗ್‌ನ ಉದ್ಘಾಟನಾ ಆವೃತ್ತಿಯನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಪಂದ್ಯ 1 ಆರಂಭದ ಸಮಯ: ರಾತ್ರಿ 8 ಗಂಟೆಗೆ , ಪಂದ್ಯ 2 ಆರಂಭದ ಸಮಯ: ರಾತ್ರಿ 9 ಗಂಟೆಗೆ.

Leave A Reply

Your email address will not be published.