Crime: ಶಾಲೆಯಲ್ಲಿ ವಾಮಾಚಾರ! 7 ವರ್ಷದ ಬಾಲಕನನ್ನು ಬಲಿಕೊಟ್ಟ ಆಡಳಿತ ಮಂಡಳಿ!
Crime: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿರುವ ಶಾಲೆಯೊಂದು ಮಾಟಮಂತ್ರದ ನೆಪದಲ್ಲಿ 7 ವರ್ಷದ ಬಾಲಕನನ್ನು ಬಲಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು, ಶಾಲೆಗೆ ಕೀರ್ತಿ ಮತ್ತು ಯಶಸ್ಸನ್ನು ತರಲು ಉದ್ದೇಶಿಸಲಾದ ಆಚರಣೆಯಲ್ಲಿ ಮಗುವನ್ನು ಬಲಿಕೊಡಲಾಗಿದೆ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಈ ಪ್ರಕರಣ (Crime) ಶಂಕಿತರನ್ನು ಶಾಲಾ ನಿರ್ದೇಶಕ ದಿನೇಶ್ ಬಘೇಲ್, ಅವರ ತಂದೆ ಜಶೋಧನ್ ಸಿಂಗ್ ಮತ್ತು ಶಿಕ್ಷಕರಾದ ಲಕ್ಷ್ಮಣ್ ಸಿಂಗ್, ವೀರಪಾಲ್ ಸಿಂಗ್ ಮತ್ತು ರಾಮಪ್ರಕಾಶ್ ಸೋಲಂಕಿ ಎಂದು ಪೊಲೀಸರು ಗುರುತಿಸಿದ್ದಾರೆ.
ಮಾಹಿತಿ ಪ್ರಕಾರ, ಮಾಟಮಂತ್ರವನ್ನು ನಂಬಿದ್ದ ಜಶೋಧನ್ ಸಿಂಗ್ ತನ್ನ ಮಗ ಮತ್ತು ಶಿಕ್ಷಕರಿಗೆ ಶಾಲೆಯ ಮಗುವೊಂದನ್ನು ಬಲಿ ಕೊಡುವುದರಿಂದ ಶಾಲೆಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ ಎಂದು ತಿಳಿಸಿದ್ದರು. ಅದರಂತೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 600 ವಿದ್ಯಾರ್ಥಿಗಳನ್ನು ಈ ಶಾಲೆಯ ಹೊಂದಿದ್ದು, ಬಲಿಯಾಗಿರುವ ಬಾಲಕ ಕೂಡ ಇದೇ ಹಾಸ್ಟೆಲ್‌ನಲ್ಲಿದ್ದ ಎನ್ನಲಾಗಿದೆ. ಇನ್ನು ಬಾಲಕನ ತಂದೆ ದೆಹಲಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾನೆ ಎನ್ನಲಾಗಿದೆ. ಬಲಿಯಾದ ಬಾಲಕ 2ನೇ ತರಗತಿಯಲ್ಲಿ ಕಲಿಯುತ್ತಿದ್ದು, ಸೋಮವಾರ ತನ್ನ ಹಾಸ್ಟೆಲ್ ಬೆಡ್‌ನಲ್ಲಿ ಪ್ರಜ್ಞೆ ಇಲ್ಲದೆ ಬಿದ್ದುಕೊಂಡಿದ್ದ ಎನ್ನಲಾಗಿದೆ. ಆದ್ರೆ ಈ ಘಟನೆಯನ್ನು ವರದಿ ಮಾಡುವ ಬದಲು, ಶಾಲೆಯ ಸಿಬ್ಬಂದಿ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದು, ಪೊಲೀಸರು ಮಧ್ಯಪ್ರವೇಶಿಸುವ ಮೊದಲು ಬಾಲಕನ ಶವವನ್ನು ಅವನ ಕಾರಿನಲ್ಲಿಟ್ಟುಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ. ಇದೀಗ ಶಾಲೆಯ ನಿರ್ದೇಶಕ, ಮೂವರು ಶಿಕ್ಷಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ.