Nut and coconut price : ಕೊಬ್ಬರಿ ಮತ್ತು ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ – ಕೇಕೆ ಹಾಕಿ ಕುಣಿದಾಡಿದ ಬೆಳೆಗಾರರು !!
Nut and coconut price :ಕೊಬ್ಬರಿ ಮತ್ತು ಅಡಿಕೆಯು( Nut and coconut) ನಾಡಿನ ಪ್ರಮುಖ ಬೆಳೆಗಳಲ್ಲಿ ಒಂದು. ಈ ಎರಡು ಬೆಳೆಗಳನ್ನು ಸಾಮಾನ್ಯವಾಗಿ ರಾಜ್ಯದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಇದೀಗ ಈ ಎರಡೂ ಬೆಳೆಗಳ ಬೆಲೆಯಲ್ಲಿ ಬಂಪರ್ ಏಕೆಯಾಗಿದ್ದು ರೈತರು ಕೇಕೆಹಾಕಿ ಕುಣಿದಾಡಿದ್ದಾರೆ.
ತೆಂಗು, ಕೊಬ್ಬರಿ ಬೆಲೆ:
ಸೈನಿಕ ಹುಳು ಕಾಟ ಸೇರಿದಂತೆ ಹಲವು ರೋಗಗಳಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದರು. ಇದರ ನಡುವೆ ಕೊಬ್ಬರಿ ಬೆಲೆ ಕೂಡ ಕುಸಿತ ಕಂಡಿದ್ದು ಮತ್ತಷ್ಟು ಸಂಕಷ್ಟ ತಂದಿತ್ತು. ಆದರೀಗ ತೆಂಗು ಬೆಳೆಗಾರರು ಈಗ ಕೊನೆಗೂ ಅಲ್ಪ ಸಮಾಧಾನವನ್ನು ಕಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಬ್ಬರಿ ಬೆಲೆಯಲ್ಲಿ ಸತತ ಏರಿಕೆಯನ್ನು ಕಂಡು, ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಇದೀಗ ಕ್ವಿಂಟಲ್ ಕೊಬ್ಬರಿ ದರ 17,000 ರೂಪಾಯಿ ತಲುಪಿದೆ. ಗುರುವಾರ ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಕನಿಷ್ಠ 15,500 ರೂಪಾಯಿ ಇದ್ದರೆ, ಗರಿಷ್ಠ 17,000 ರೂಪಾಯಿಗೆ ಮಾರಾಟವಾಗಿದ್ದು ಈ ವರ್ಷದಲ್ಲಿ ಹೊಸ ದಾಖಲೆ ಬರೆದಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕನಿಷ್ಠ 16,300 ರೂಪಾಯಿಯಂತೆ ಹರಾಜಾಗಿದೆ.
ಹುಳಿಯಾರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕನಿಷ್ಠ 16,000 ರೂಪಾಯಿ ಇದ್ದರೆ ಗರಿಷ್ಠ 16,000 ರೂಪಾಯಿಗೆ ಮಾರಾಟವಾಗಿದೆ. ನಾಗಮಂಗಲ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕನಿಷ್ಠ ದರ 13,000 ರೂಪಾಯಿ ಆಗಿದ್ದು ಗರಿಷ್ಠ ದರ 16,000 ರೂಪಾಯಿ ಆಗಿತ್ತು. ಅಲ್ಲದೆ ತೆಂಗಿನ ಕಾಯಿ ಬೆಲೆ ಕೂಡ ಸಾವಿರಕ್ಕೆ 15000-25000 ರೂಪಾಯಿಗೆ ಮಾರಾಟವಾಗುತ್ತಿದೆ.
ಅಡಿಕೆ ಬೆಲೆ:
ಕಳೆದ ಕೆಲವು ದಿನಗಳಿಂದ ಕುಸಿತ ಕಂಡಿದ್ದ ಅಡಿಕೆ ಬೆಲೆ ಮತ್ತೆ ನಿಧಾನವಾಗಿ ಏರಿಕೆಯ ಹಾದಿ ಹಿಡಿದಿದೆ. ಭೂತಾನ್‌ನಿಂದ ಹಸಿ ಅಡಿಕೆ ಆಮದಿಗೆ ಕೇಂದ್ರ ಒಪ್ಪಿಗೆ ಕೊಟ್ಟ ಬೆನ್ನಲ್ಲೇ ಅಡಿಕೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ರಾಶಿ ಕೆಂಪಡಿಕೆ ಧಾರಣೆ ನಿಧಾನವಾಗಿ ಮತ್ತೆ ಹೆಚ್ಚುತ್ತಿದ್ದು ಅಡಿಕೆ ಬೆಳೆಗಾರರಲ್ಲಿ ಸಗಂತಸ ಮನೆಮಾಡಿದೆ. ಗುರುವಾರ ಬಂಟ್ವಾಳ ಮಾರುಕಟ್ಟೆಯಲ್ಲಿ ಹೊಸ ವೆರೈಟಿ ಅಡಿಕೆ ಬೆಲೆ ಕನಿಷ್ಠ 28,500 ರೂಪಾಯಿ ಇದ್ದರೆ ಗರಿಷ್ಠ ಬೆಲೆ 40,500 ರೂಪಾಯಿ ಆಗಿತ್ತು. ಪುತ್ತೂರು ಮಾರುಕಟ್ಟೆಯಲ್ಲಿ ಹೊಸವೆರೈಟಿ ಅಡಿಕೆ ಬೆಲೆ ಕನಿಷ್ಠ 26,000 ರೂಪಾಯಿ ಇದ್ದರೆ ಗರಿಷ್ಠ 40,500 ರೂಪಾಯಿಗೆ ಮಾರಾಟವಾಗಿದೆ.